ರೋನಕ್‌ ದಹಿಯಾ 
ಕ್ರೀಡೆ

U17 ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಕಂಚು ಗೆದ್ದ ಭಾರತದ ರೋನಕ್‌ ದಹಿಯಾ

ರೋನಕ್‌ ಅವರು ಟರ್ಕಿಯ ಎಮ್ರುಲ್ಲಾ ಕ್ಯಾಪ್ಕನ್‌ ವಿರುದ್ದ 6-1ರ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ.

ಅಮ್ಮಾನ್‌ (ಜೋರ್ಡಾನ್‌): ಅಂಡರ್‌-17 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 110 ಕೆಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಭಾರತದ ರೋನಕ್‌ ದಹಿಯಾ ಅವರು ಕಂಚಿನ ಪದಕ ಗೆದ್ದಿದ್ದಾರೆ.

ರೋನಕ್‌ ಅವರು ಟರ್ಕಿಯ ಎಮ್ರುಲ್ಲಾ ಕ್ಯಾಪ್ಕನ್‌ ವಿರುದ್ದ 6-1ರ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ.

ಇದಕ್ಕೂ ಮೊದಲು, ರೋನಕ್‌ ಸೆಮಿಫೈನಲ್‌ನಲ್ಲಿ ಹಂಗೇರಿಯ ಝೋಲ್ಟಾನ್‌ ಝಾಕೊ ವಿರುದ್ಧ ಸೋತಿದ್ದರು. ಈ ವಿಭಾಗದಲ್ಲಿ ಉಕ್ರೇನ್‌ನ ಇವಾನ್‌ ಯಾಂಕೋವ್‌ಸ್ಕಿ ಅವರು ಚಿನ್ನವನ್ನು ಗೆದ್ದರು, ಅವರು ತಾಂತ್ರಿಕ ಶ್ರೇಷ್ಠತೆಯ ಬಲದಿಂದ 13-4 ರಿಂದ ಸಿಜಾಕೊ ಅವರನ್ನು ಮಣಿಸಿದರು.

ಮತ್ತೊಬ್ಬ ಕುಸ್ತಿ ಪಟು ಸಾಯಿನಾಥ್‌ ಪಾರ್ಧಿ ಇನ್ನೆರಡು ಪಂದ್ಯ ಗೆದ್ದರೆ 51 ಕೆಜಿ ರಿಪಿಚೇಜ್‌ನಲ್ಲಿ ಭಾರತಕ್ಕೆ ಎರಡನೇ ಪದಕದ ಅವಕಾಶವಿದೆ.

ಸಾಯಿನಾಥ್‌ ಪಾರ್ಧಿ ಮೊದಲು ಯುನೈಟೆಡ್‌ ಸ್ಟೇಟ್ಸ್'ನ ಡೊಮಿನಿಕ್‌ ಮೈಕೆಲ್‌ ಮುನಾರೆಟ್ಟೊ ವಿರುದ್ಧ ಕಣಕ್ಕಿಳಿದಿದ್ದಾರೆ. ಈ ಪಂದ್ಯವನ್ನು ಗೆದ್ದರೆ ನಂತರ ಅರ್ಮೇನಿಯನ್‌ ಸರ್ಗಿಸ್‌‍ ಹರುತ್ಯುನಾನ್‌ ಮತ್ತು ಜಾರ್ಜಿಯಾದ ಯೂರಿ ಚಾಪಿಡ್ಜೆ ನಡುವಿನ ಪಂದ್ಯದ ವಿಜೇತರೊಂದಿಗೆ ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಸೆಣಸಾಟ ನಡೆಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!