ಜ್ಯೋತಿ
ಜ್ಯೋತಿ 
ಕ್ರೀಡೆ

TNIE ಇಂಪ್ಯಾಕ್ಟ್: ಅಂತಾರಾಷ್ಟ್ರೀಯ ಹಾಕಿ ಪದಕ ವಿಜೇತೆ ಜ್ಯೋತಿಗೆ ಒಡಿಶಾ ಸರ್ಕಾರದಿಂದ ನಿವೇಶನ ನೀಡುವ 'ಭರವಸೆ'

Lingaraj Badiger

ರೂರ್ಕೆಲಾ: ಹಾಕಿ ತಾರೆ ಜ್ಯೋತಿ ಛೆಟ್ರಿ ಮನೆಯಲ್ಲಿ ಕೊನೆಗೂ ನೆಮ್ಮದಿಯ ಭಾವ ಮೂಡಿದೆ. ನಗರದ ಪಂಪೋಶ್ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಯೋಜನೆಯಿಂದ ತನ್ನ ಮನೆ ಉಳಿಸಿಕೊಳ್ಳಲು ಯುವ ಹಾಕಿ ತಾರೆ ಹೋರಾಟ ನಡೆಸುತ್ತಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ ಒಂದು ದಿನದ ನಂತರ, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಜೋತಿ ಅವರ ಮನೆಗೆ ಭೇಟಿ ನೀಡಿ, ಬದಲಿ ನಿವೇಶನ ನೀಡುವ ಭರವಸೆ ನೀಡಿದ್ದಾರೆ.

ಇಂದು (ಮಂಗಳವಾರ), ತಹಸೀಲ್ದಾರ್ ಕಚೇರಿಯಿಂದ ಕೆಲವರು ಬಂದು ನಮ್ಮ ಆಧಾರ್ ಕಾರ್ಡ್‌ಗಳನ್ನು ತೆಗೆದುಕೊಂಡಿದ್ದಾರೆ. ಆದರೆ ನಮಗೆ ನಿವೇಶನ ನೀಡಿದರೆ ನಾವು ಮನೆ ಕಟ್ಟಲು ಸಾಧ್ಯವೇ ಎಂದು ಅವರು ನಮ್ಮನ್ನು ಕೇಳಿದರು. ನನ್ನ ತಂದೆಗೆ ಕ್ರಾಫ್ಟ್ ತಿಳಿದಿರುವ ಕಾರಣ(ಅವರು ಮೇಸನ್), ನಾವು ಅದನ್ನು ಒಪ್ಪಿಕೊಂಡಿದ್ದೇವೆ ಎಂದು ಜ್ಯೋತಿ ತಿಳಿಸಿದ್ದಾರೆ.

ಅವರು ನಮಗೆ ಭರವಸೆ ನೀಡಿರುವುದರಿಂದ, ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಜ್ಯೋತಿ ಹೇಳಿದ್ದಾರೆ.

ಏತನ್ಮಧ್ಯೆ, ರೂರ್ಕೆಲಾ ತಹಸೀಲ್ದಾರ್ ಅವರನ್ನು ವಿಚಾರಣೆಗೆ ಕಳುಹಿಸಲಾಗಿದೆ ಎಂದು ಪಂಪೋಶ್ ಸಬ್ ಕಲೆಕ್ಟರ್ ಬಿಜಯ್ ನಾಯಕ್ ಖಚಿತಪಡಿಸಿದ್ದಾರೆ. ತಹಸೀಲ್ದಾರ್ ಅವರ ವರದಿ ಆಧರಿಸಿ ಸೂಕ್ತ ಪರಿಹಾರಕ್ಕಾಗಿ ವರದಿ ಕಳುಹಿಸಲಾಗುವುದು ಎಂದರು. ಜ್ಯೋತಿ ಕುಟುಂಬ ಕಳೆದ 18 ವರ್ಷಗಳಿಂದ ಪಾನ್‌ಪೋಶ್ ಕ್ರೀಡಾ ಹಾಸ್ಟೆಲ್‌ನ ಎದುರಿನ ಸಣ್ಣ ಮನೆಯಲ್ಲಿ ವಾಸಿಸುತ್ತಿದೆ.

ಭೀಮ್ ಸಿಂಗ್(ಜ್ಯೋತಿಯ ತಂದೆ) ಈ ಹಿಂದೆ ಹಾಸ್ಟೆಲ್ ಕ್ವಾರ್ಟರ್ಸ್‌ನಲ್ಲಿಯೇ ಇದ್ದರು(ಅವರು ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು). ಆದರೆ 2003 ರಲ್ಲಿ ಜ್ಯೋತಿ ಹುಟ್ಟಿದ ನಂತರ ಕ್ವಾರ್ಟರ್ಸ್ ನಿಂದ ಹೊರಗೆ ಬಂದರು. ರಸ್ತೆ-ವಿಸ್ತರಣೆಗಾಗಿ ನಿಮ್ಮ ಮನೆಯನ್ನು ಕೆಡವಲಾಗುವುದು ಎಂದು ಕೆಲವು ವರ್ಷಗಳ ಹಿಂದೆಯೇ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಜ್ಯೋತಿ ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದರು.

SCROLL FOR NEXT