ಪಿ.ವಿ. ಸಿಂಧು 
ಕ್ರೀಡೆ

Paris Olympics 2024: ಬ್ಯಾಡ್ಮಿಂಟನ್‌ ಸಿಂಗಲ್ಸ್‌‌ನಲ್ಲಿ ಪಿವಿ ಸಿಂಧು ಶುಭಾರಂಭ!

ಮೂರನೇ ಒಲಂಪಿಕ್ ಪದಕಕ್ಕಾಗಿ ಪೈಪೋಟಿ ನಡೆಸುತ್ತಿರುವ ಸಿಂಧು ಮೊದಲ ಗುಂಪಿನ ಎಂ ಪಂದ್ಯದಲ್ಲಿ ಕೇವಲ 29 ನಿಮಿಷದಲ್ಲಿ 21-9 21-6 ರಲ್ಲಿ ಅಂತರದಲ್ಲಿ ತನ್ನಗಿಂತಲೂ ಕೆಳ ಶ್ರೇಯಾಂಕದ ಎದುರಾಳಿಯನ್ನು ಸೋಲಿಸಿದರು.

ಪ್ಯಾರಿಸ್: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಭಾರತದ ಷಟ್ಲರ್ ಪಿವಿ ಸಿಂಧು ಭಾನುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ನ ಗುಂಪು ಹಂತದ ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ ನೇರ ಗೇಮ್‌ಗಳ ಗೆಲುವಿನೊಂದಿಗೆ ತಮ್ಮ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವನ್ನು ಆರಂಭಿಸಿದ್ದಾರೆ.

ಮೂರನೇ ಒಲಂಪಿಕ್ ಪದಕಕ್ಕಾಗಿ ಪೈಪೋಟಿ ನಡೆಸುತ್ತಿರುವ ಸಿಂಧು ಮೊದಲ ಗುಂಪಿನ ಎಂ ಪಂದ್ಯದಲ್ಲಿ ಕೇವಲ 29 ನಿಮಿಷದಲ್ಲಿ 21-9 21-6 ರಲ್ಲಿ ಅಂತರದಲ್ಲಿ ತನ್ನಗಿಂತಲೂ ಕೆಳ ಶ್ರೇಯಾಂಕದ ಎದುರಾಳಿಯನ್ನು ಸೋಲಿಸಿದರು.

ಪಂದ್ಯದ ಬಳಿಕ ಮಾತನಾಡಿದ ಪಿ.ವಿ. ಸಿಂಧು, ಇದು ಉತ್ತಮ ಆರಂಭವಾಗಿದ್ದು, ನನಗೆ ಸಂತೋಷವಾಗಿದೆ. ಮೈದಾನ ಮತ್ತು ವಾತಾವರಣಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಯಿತು. ಮೂರು ವರ್ಷಗಳ ನಂತರ ಮತ್ತೆ ಲಯಕ್ಕೆ ಮರಳಿರುವುದು ಬಹಳ ವಿಶೇಷವಾಗಿದೆ. 2016 (ಒಲಿಂಪಿಕ್ಸ್) ವಿಭಿನ್ನವಾಗಿತ್ತು ಮತ್ತು 2020 (2021) ಸಂಪೂರ್ಣವಾಗಿ ವಿಭಿನ್ನವಾಗಿತ್ತು, ಇದು ಎರಡರ ಮಿಶ್ರಣವಾಗಿದೆ ಎಂದು ಹೇಳಿದರು. ಸಿಂಧು ತಮ್ಮ ಎರಡನೇ ಗುಂಪಿನ ಎಂ ಪಂದ್ಯದಲ್ಲಿ ಬುಧವಾರ (ಜುಲೈ 31) ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT