ನವದೆಹಲಿ: FIFA World Cup 2026 qualifiers ನ 2 ನೇ ಸುತ್ತಿನಲ್ಲಿ ಭಾರತ ಹೊರಬಿದ್ದಿದ್ದು, ಕತಾರ್ ವಿರುದ್ಧ 2-1 ಅಂತರದ ಸೋಲು ಕಂಡಿದೆ.
ದೋಹಾದ ಜಸಿಮ್ ಬಿನ್ ಹಮದ್ ಸ್ಟೇಡಿಯಂ ನಲ್ಲಿ ಗ್ರೂಪ್ ಎ ಫೈನಲ್ ಪಂದ್ಯದಲ್ಲಿ ಭಾರತ ಹಾಲಿ ಚಾಂಪಿಯನ್ಸ್ ಕತಾರ್ ವಿರುದ್ಧ ಸೆಣೆಸಿ, ಗ್ರೂಪ್ಎ ನಲ್ಲಿ ಮೂರನೇ ಸ್ಥಾನಕ್ಕೆ ಭಾರತ ತೃಪ್ತಿಪಟ್ಟುಕೊಂಡಿದೆ.
6 ಪಂದ್ಯಗಳ ಪೈಕಿ ಭಾರತ 1 ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, 3 ನೇ ಸುತ್ತಿಗೆ ಹೋಗುವುದಕ್ಕೆ ಸಾಧ್ಯವಾಗಲಿಲ್ಲ. ಅಫ್ಘಾನಿಸ್ಥಾನದ ವಿರುದ್ಧ 1-0 ಅಂತರದಲ್ಲಿ ಗೆದ್ದ ಕುವೈತ್ ಕತಾರ್ ಜೊತೆಗೆ ಟೇಬಲ್ ಟಾಪರ್ ಸ್ಥಾನ ಪಡೆದುಕೊಂಡಿದ್ದು, ಮುಂದಿನ ಸುತ್ತಿಗೆ ಪ್ರವೇಶಿಸಿದೆ.
ವಿಶ್ವ ಫುಟ್ಬಾಲ್ ಶ್ರೇಯಾಂಕದಲ್ಲಿ 121 ನೇ ಸ್ಥಾನದಲ್ಲಿರುವ ಭಾರತದ ಪರ ಲಾಲಿಯನ್ಜುವಾಲಾ ಚಾಂಗ್ಟೆ (37’) ಆರಂಭಿಕ ಗೋಲು ಗಳಿಸಿದ ನಂತರ ವಿಶ್ವದ ನಂ. 34 ಕತಾರ್ ಒಂದು ಗೋಲು ದಾಖಲಿಸಿತು. ದ್ವಿತೀಯಾರ್ಧದಲ್ಲಿ ಯೂಸೆಫ್ ಐಮೆನ್ (73’) ಮತ್ತು ಅಹ್ಮದ್ ಅಲ್-ರಾವಿ (85’) ಅವರ ನೆರವಿನಿಂದ ಆತಿಥೇಯ ತಂಡ ಪುಟಿದೆದ್ದಿತು.
73ನೇ ನಿಮಿಷದಲ್ಲಿ ಯೂಸೆಫ್ ಐಮೆನ್ ಗೋಲು ಹೊಡೆಯುವ ಮೂಲಕ ಆತಿಥೇಯ ತಂಡ ಸಮಬಲ ಸಾಧಿಸಿತು.