ಭಾರತ-ಕೊರಿಯಾ ತಂಡಗಳು 
ಕ್ರೀಡೆ

Asian Champions Trophy: ಕೊರಿಯಾ ಸೋಲಿಸಿ ಫೈನಲ್‌ ಪ್ರವೇಶಿಸಿದ ಭಾರತಕ್ಕೆ ಚೀನಾ ಎದುರಾಳಿ!

ಭಾರತ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 4-1 ಅಂತರದ ಗೋಲುಗಳಿಂದ ಗೆದ್ದುಕೊಂಡಿದೆ. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದ್ದು ಒಟ್ಟಾರೆ ಟೂರ್ನಿಯಲ್ಲಿ 7 ಗೋಲು ದಾಖಲಿಸಿದ್ದಾರೆ.

ಹುಲುನ್‌ಬುಯರ್(ಚೀನಾ): ಭಾರತೀಯ ಪುರುಷರ ಹಾಕಿ ತಂಡವು 2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದೆ. ಭಾರತ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 4-1 ಅಂತರದ ಗೋಲುಗಳಿಂದ ಗೆದ್ದುಕೊಂಡಿದೆ. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದ್ದು ಒಟ್ಟಾರೆ ಟೂರ್ನಿಯಲ್ಲಿ 7 ಗೋಲು ದಾಖಲಿಸಿದ್ದಾರೆ.

ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 19 ಮತ್ತು 45ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇವರಲ್ಲದೆ ಉತ್ತಮ್ ಸಿಂಗ್ (13ನೇ ನಿಮಿಷ) ಮತ್ತು ಜರ್ಮನ್‌ಪ್ರೀತ್ ಸಿಂಗ್ (32ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ಕೊರಿಯಾ ಪರ ಯಾಂಗ್ ಜಿಹುನ್ (33ನೇ ನಿಮಿಷ) ಪೆನಾಲ್ಟಿ ಕಾರ್ನರ್‌ನಿಂದ ಏಕೈಕ ಗೋಲು ದಾಖಲಿಸಿದರು. ಮಂಗಳವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ಆತಿಥೇಯ ಚೀನಾವನ್ನು ಎದುರಿಸಲಿದೆ.

ಲೀಗ್ ಹಂತದ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಚೀನಾವನ್ನು ಸೋಲಿಸಿತ್ತು. ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಚೀನಾ ಶೂಟೌಟ್ ಮೂಲಕ 2-0 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ನಿಗದಿತ ಸಮಯದ ನಂತರ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದವು. ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ಕೊರಿಯಾ ತಂಡಗಳು ಮುಖಾಮುಖಿಯಾಗಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಹೃದಯ ಛಿದ್ರವಾಗಿದೆ: ಆಫ್ರಿಕಾ ವಿರುದ್ಧದ ಸರಣಿ ಹೀನಾಯ ಸೋಲಿನ ನಂತರ ಇಡೀ ದೇಶದ ಕ್ಷಮೆಯಾಚಿಸಿದ ರಿಷಭ್ ಪಂತ್!

WPL Auction 2026: ಬರೋಬ್ಬರಿ 3.2 ಕೋಟಿ ರೂ. ಗೆ ಆಲ್ ರೌಂಡರ್ ದೀಪ್ತಿ ಶರ್ಮಾ ಸೋಲ್ಡೌಟ್‌! ಸ್ಟನ್ ಆದ ಗಂಗೂಲಿ

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ

SCROLL FOR NEXT