ಕ್ರಿಸ್ಟಿಯಾನೊ ರೊನಾಲ್ಡೊ 
ಕ್ರೀಡೆ

Messi vs Ronaldo: 40ನೇ ಹುಟ್ಟುಹಬ್ಬದಂದು ಸರ್ವಶ್ರೇಷ್ಠ ಆಟಗಾರನ ಹೆಸರಿಸಿದ Cristiano Ronaldo

ರಿಯಲ್ ಮ್ಯಾಡ್ರಿಡ್‌ನಲ್ಲಿ ತಮ್ಮ ಅನುಭವದ ನಂತರ ಪ್ರಸ್ತುತ ಸೌದಿ ಅರೇಬಿಯಾ ಕ್ಲಬ್ ಪರ ಆಡುತ್ತಿರುವ ರೊನಾಲ್ಡೊ ಬುಧವಾರ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನವದೆಹಲಿ: ಕ್ರಿಸ್ಟಿಯಾನೊ ರೊನಾಲ್ಡೊ 40ನೇ ಹುಟ್ಟುಹಬ್ಬದ ಸಮೀಪಿಸುತ್ತಿದ್ದು, ಅವರ ಅದ್ಭುತ ವೃತ್ತಿಜೀವನವನ್ನು ನಿರೂಪಿಸುವ ಅದೇ ಮಟ್ಟದ ಆತ್ಮವಿಶ್ವಾಸವನ್ನು ಅವರು ಕಾಯ್ದುಕೊಂಡಿದ್ದಾರೆ.

ರಿಯಲ್ ಮ್ಯಾಡ್ರಿಡ್‌ನಲ್ಲಿ ತಮ್ಮ ಅನುಭವದ ನಂತರ ಪ್ರಸ್ತುತ ಸೌದಿ ಅರೇಬಿಯಾ ಕ್ಲಬ್ ಪರ ಆಡುತ್ತಿರುವ ರೊನಾಲ್ಡೊ ಬುಧವಾರ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಸ್ಪ್ಯಾನಿಷ್ ದೂರದರ್ಶನ ಚಾನೆಲ್ ಲಾ ಸೆಕ್ಸ್ಟಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರೊನಾಲ್ಡೋ, "ನಾನು ಇತಿಹಾಸದಲ್ಲಿ ಶ್ರೇಷ್ಠ ಸ್ಕೋರರ್" ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಫುಟ್‌ಬಾಲ್‌ನ ಅತ್ಯುತ್ತಮ ಆಟಗಾರನೆಂಬ ತಮ್ಮ ಸ್ಥಾನದ ಬಗ್ಗೆ ದೃಢನಿಶ್ಚಯವನ್ನು ಸ್ಪಷ್ಟಪಡಿಸಿದ್ದಾರೆ.

"ನಾನು ಎಡಗಾಲಿನಿಂದ ಹೊಡೆದ ಗೋಲುಗಳ ಪಟ್ಟಿಯಲ್ಲಿ ಇತಿಹಾಸದಲ್ಲಿ ಅಗ್ರ 10 ರಲ್ಲಿ ಇದ್ದೇನೆ. ಇವು ಕೇವಲ ಸಂಖ್ಯೆಗಳು.. ನಾನು ಇದುವರೆಗೆ ಅಸ್ತಿತ್ವದಲ್ಲಿದ್ದ ಅತ್ಯಂತ ಸಂಪೂರ್ಣ ಆಟಗಾರ. ನಾನು ನನ್ನ ಹೆಡ್ ಶೂಟ್ ಗಳನ್ನೂ ಚೆನ್ನಾಗಿ ಆಡುತ್ತೇನೆ, ನಾನು ಉತ್ತಮ ಫ್ರೀ ಕಿಕ್‌ಗಳನ್ನು ತೆಗೆದುಕೊಳ್ಳುತ್ತೇನೆ, ನಾನು ವೇಗವಾಗಿದ್ದೇನೆ, ನಾನು ಬಲಶಾಲಿಯಾಗಿದ್ದೇನೆ, ನಾನು ಜಿಗಿಯುತ್ತೇನೆ... ನಾನು ನನಗಿಂತ ಉತ್ತಮ ಯಾರನ್ನೂ ನೋಡಿಲ್ಲ ಎಂದು ಹೇಳುವ ಮೂಲಕ ತಾವೇ ಸರ್ವಶ್ರೇಷ್ಠ ಆಟಗಾರ ಎಂದು ರೊನ್ಯಾಲ್ಡೋ ಹೇಳಿದ್ದಾರೆ.

ಇನ್ನು ರೊನಾಲ್ಡೋ ಪೋರ್ಚುಗೀಸ್ ಅಂತರರಾಷ್ಟ್ರೀಯ ಪುರುಷರ ಫುಟ್‌ಬಾಲ್‌ನಲ್ಲಿ ಗಮನಾರ್ಹ ದಾಖಲೆಗಳನ್ನು ಹೊಂದಿದ್ದು, ಇದರಲ್ಲಿ 217 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಅಂದರೆ 135 ಗೋಲುಗಳನ್ನು ಗಳಿಸಿದ್ದಾರೆ.

ಇದೇ ವೇಳೆ ತಮ್ಮ ಮತ್ತು ಲಿಯೋನೆಲ್ ಮೆಸ್ಸಿ ನಡುವಿನ ಹೋಲಿಕೆಯ ಬಗ್ಗೆ ಪ್ರಶ್ನಿಸಿದಾಗ, ಅವರು ಯಾವಾಗಲೂ ಅರ್ಜೆಂಟೀನಾದ ಸಾಮರ್ಥ್ಯಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಅಂತಿಮವಾಗಿ ತಮ್ಮನ್ನು ತಾವು ಬೆಂಬಲಿಸಿಕೊಂಡಿದ್ದಾರೆ. ರೊನಾಲ್ಡೋ ಅವರ ಈ ಹೇಳಿಕೆಗಳು ಫುಟ್‌ಬಾಲ್ ಸಮುದಾಯದಲ್ಲಿ ವಿವಿಧ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿವೆ.

ಮೆಸ್ಸಿ ಏನು ಹೇಳಿದ್ದರು?

"ನನಗೆ ಕ್ರಿಸ್ಟಿಯಾನೊ ಬಗ್ಗೆ ತುಂಬಾ ಗೌರವವಿದೆ ಮತ್ತು ನಾನು ಅವರ ಅಭಿಪ್ರಾಯಗಳನ್ನು ವಿಶ್ಲೇಷಿಸಬೇಕಾಗಿಲ್ಲ. ಅದು ಅವರು ಯೋಚಿಸುವುದು. ನನಗೆ ನನ್ನದೇ ಆದ ಆಲೋಚನೆಗಳಿವೆ ಮತ್ತು ಅದು ಅಲ್ಲ," ಎಂದು ಹಿಂದೆ ಮೆಸ್ಸಿಯೊಂದಿಗೆ ಆಡಿದ ಮಾತುಗಳೂ ಕೂಡ ಇದರೊಂದಿಗೆ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT