ದಿವ್ಯಾ ದೇಶ್ ಮುಖ್  
ಕ್ರೀಡೆ

FIDE ಮಹಿಳಾ ವಿಶ್ವಕಪ್ ಫೈನಲ್ ಗೆ Divya Deshmukh ಲಗ್ಗೆ; ಇತಿಹಾಸ ಸೃಷ್ಟಿ

ಈ ಗೆಲುವಿನ ಮೂಲಕ, ಅವರು 2026 ರಲ್ಲಿ ಮಹಿಳಾ ಅಭ್ಯರ್ಥಿಗಳ ಮುಂದಿನ ಆವೃತ್ತಿಗೆ ಅರ್ಹತೆ ಪಡೆದಿದ್ದಾರೆ ಮತ್ತು ಗ್ರಾಂಡ್ ಮಾಸ್ಟರ್ (GM) ನ್ನು ಗಳಿಸಿದ್ದಾರೆ. ಕಳೆದ ದಶಕಗಳಲ್ಲಿ ಕ್ಯಾಂಡಿಡೇಟ್ಸ್‌ ಸುತ್ತಿಗೆ ಅರ್ಹತೆ ಪಡೆದ ಅತ್ಯಂತ ಕಿರಿಯ ಆಟಗಾರ್ತಿಯರಲ್ಲಿ ಅವರು ಕೂಡ ಒಬ್ಬರು.

ಚೆನ್ನೈ: ಜಾರ್ಜಿಯಾದ ಬಟುಮಿಯಲ್ಲಿ ನಡೆದ ವಿಶ್ವ ಟೀಮ್ ಬ್ಲಿಟ್ಜ್ ಚಾಂಪಿಯನ್‌ಶಿಪ್‌ನ ಬ್ಲಿಟ್ಜ್ ಸೆಮಿಫೈನಲ್‌ನ 2 ನೇ ಲೆಗ್‌ನಲ್ಲಿ ವಿಶ್ವದ ನಂ. 1 ಆಟಗಾರ್ತಿ ಹೌ ಯಿಫಾನ್ ಅವರನ್ನು ಭಾರತೀಯ ಚೆಸ್ ಪ್ರತಿಭೆ 19 ವರ್ಷದ ದಿವ್ಯಾ ದೇಶಮುಖ್ ಸೋಲಿಸಿ 2025 ರ FIDE ಸುತ್ತು ಪ್ರವೇಶಿಸಿದ್ದಾರೆ.

ಈ ಗೆಲುವಿನ ಮೂಲಕ, ಅವರು 2026 ರಲ್ಲಿ ಮಹಿಳಾ ಅಭ್ಯರ್ಥಿಗಳ ಮುಂದಿನ ಆವೃತ್ತಿಗೆ ಅರ್ಹತೆ ಪಡೆದಿದ್ದಾರೆ ಮತ್ತು ಗ್ರಾಂಡ್ ಮಾಸ್ಟರ್ (GM) ನ್ನು ಗಳಿಸಿದ್ದಾರೆ. ಕಳೆದ ದಶಕಗಳಲ್ಲಿ ಕ್ಯಾಂಡಿಡೇಟ್ಸ್‌ ಸುತ್ತಿಗೆ ಅರ್ಹತೆ ಪಡೆದ ಅತ್ಯಂತ ಕಿರಿಯ ಆಟಗಾರ್ತಿಯರಲ್ಲಿ ಅವರು ಕೂಡ ಒಬ್ಬರು.

ಕ್ವಾರ್ಟರ್ ಫೈನಲ್‌ನಲ್ಲಿ ದೇಶದವರೇ ಆದ ಜಿಎಂ ಹರಿಕಾ ದ್ರೋಣವಲ್ಲಿಯನ್ನು ಸೋಲಿಸಿ, ಎರಡೂ ಟೈ-ಬ್ರೇಕ್ ಆಟಗಳನ್ನು ಗೆದ್ದ ನಂತರ, ದೇಶಮುಖ್ ತಮ್ಮ ಮೊದಲ ಸೆಮಿಫೈನಲ್ ಪಂದ್ಯವನ್ನು ಚೀನಾದ ಟಾನ್ ಝೊಂಗಿ ವಿರುದ್ಧ 0.5-0.5 ಅಂಕಗಳೊಂದಿಗೆ ಡ್ರಾ ಮಾಡಿಕೊಂಡರು. ಮೊದಲ ಪಂದ್ಯದ ಫಲಿತಾಂಶವನ್ನು FIDE ಯ ಅಧಿಕೃತ X ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಮಹಾರಾಷ್ಟ್ರದ ನಾಗ್ಪುರ ಮೂಲದವರಾದ ದಿವ್ಯಾ ದೇಶ್ ಮುಖ್, ಬಾಲ್ಯದಲ್ಲಿ ಚೆಸ್ ತರಗತಿಗಳಿಗಾಗಿ ಚೆನ್ನೈಗೆ ಪ್ರಯಾಣಿಸುತ್ತಿದ್ದರು, ದಿವ್ಯಾ ದೇಶ್ ಮುಖ್ ಅವರು ಅಂತಿಮ ಸುತ್ತಿನಲ್ಲಿ ತಮ್ಮ ದೇಶದವರೇ ಆದ ಕೊನೆರು ಹಂಪಿ ಅಥವಾ ಚೀನಾದ ಲೈ ಟಿಂಗ್ಜಿಯನ್ನು ಎದುರಿಸಲಿದ್ದಾರೆ.

ಪ್ರಧಾನಿ ಮೋದಿ ಅಭಿನಂದನೆ: ಭಾರತದ ಅಗ್ರ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ದಿವ್ಯಾ ಅವರ ಯಶಸ್ಸು ಅವರ ಧೈರ್ಯ ಮತ್ತು ದೃಢನಿಶ್ಚಯವನ್ನು ಎತ್ತಿ ತೋರಿಸುತ್ತದೆ. ಇದು ಅನೇಕ ಮುಂಬರುವ ಚೆಸ್ ಆಟಗಾರರಿಗೂ ಸ್ಫೂರ್ತಿ ನೀಡುತ್ತದೆ ಎಂದು ಶುಭಕೋರಿದ್ದರು.

ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ದಿವ್ಯಾ, ಪ್ರಧಾನಮಂತ್ರಿ ಅವರಿಂದ ಗುರುತಿಸಲ್ಪಟ್ಟಿರುವುದು ನನಗೆ ದೊಡ್ಡ ಗೌರವ ಮತ್ತು ಪ್ರೋತ್ಸಾಹ ಎಂದು ಬರೆದುಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ, ಅಮೆರಿಕದ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?

Pepsi To McDonald: ಸುಂಕ ಸಂಘರ್ಷದ ನಡುವೆ ಅಮೆರಿಕದ ದೈತ್ಯ ಕಂಪನಿಗಳಿಗೆ ಭಾರತದಲ್ಲಿ #Boycott ಬಿಸಿ!

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

US President: ಅನಾರೋಗ್ಯದ ವದಂತಿ, ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸದ ಡೊನಾಲ್ಡ್ ಟ್ರಂಪ್!

SCROLL FOR NEXT