ಪೋಷಕರೊಂದಿಗೆ ಚಾರ್ವಿ  
ಕ್ರೀಡೆ

ವಯಸ್ಸು ಕೇವಲ 11, ನಾರ್ವೆ ಓಪನ್ ನಲ್ಲಿ ಗಮನಸೆಳೆದ ಬೆಂಗಳೂರಿನ ಚೆಸ್ ಚಾಂಪಿಯನ್ ಚಾರ್ವಿ

ಈಗಾಗಲೇ ಕಿರಿಯ ವಯೋಮಾನದ ವಿಶ್ವ ಚಾಂಪಿಯನ್ ಆಗಿರುವ ಬೆಂಗಳೂರು ಮೂಲದ ಚಾರ್ವಿ ಅವರನ್ನು ವಿಶೇಷವಾಗಿಸುವುದು ಅವರು ತಮ್ಮ ಚೆಸ್‌ನಲ್ಲಿ ಲೇಸರ್-ಫೋಕಸ್ಡ್ ಆಗಿರುವ ರೀತಿ.

ಸ್ಟಾವಂಜರ್: ಭಾರತದ ಚೆಸ್ ಲೋಕದಲ್ಲಿ ಇತ್ತೀಚೆಗೆ ಉದಯಿಸುತ್ತಿರುವ ಪ್ರತಿಭೆ 11 ವರ್ಷದ ಪೋರಿ ಚಾರ್ವಿ ಎ ಒಬ್ಬರು. ಅವರು ಈಗಾಗಲೇ ವಿಶ್ವನಾಥನ್ ಆನಂದ್ ಅವರಂತಹ ಆಟಗಾರರ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ನಾರ್ವೆಯ ಸಿಟಿ ಸ್ಟಾವೆಂಜರ್ ನಲ್ಲಿ ನಡೆಯುತ್ತಿರುವ ನಾರ್ವೆ ಓಪನ್ ಈವೆಂಟ್‌ನಲ್ಲಿ ಪ್ರಸ್ತುತ 11 ವರ್ಷದ ಬಾಲಕಿ WFM (ವುಮನ್ ಫೈಡ್ ಮಾಸ್ಟರ್) ಚಾರ್ವಿ ಭಾಗವಹಿಸಿದ್ದಾರೆ.

ಈಗಾಗಲೇ ಕಿರಿಯ ವಯೋಮಾನದ ವಿಶ್ವ ಚಾಂಪಿಯನ್ ಆಗಿರುವ ಬೆಂಗಳೂರು ಮೂಲದ ಚಾರ್ವಿ ಅವರನ್ನು ವಿಶೇಷವಾಗಿಸುವುದು ಅವರು ತಮ್ಮ ಚೆಸ್‌ನಲ್ಲಿ ಲೇಸರ್-ಫೋಕಸ್ಡ್ ಆಗಿರುವ ರೀತಿ. ಚಾರ್ವಿಯ ತರಬೇತುದಾರರ ಗುರುತನ್ನು ಬಹಿರಂಗಪಡಿಸಬೇಡಿ ಎಂದು ಪೋಷಕರು ಮನವಿ ಮಾಡಿದ್ದಾರೆ. (ಅವರು ಹಿಂದೆ ಸ್ವಯಂಸ್ ಮಿಶ್ರಾ ಮತ್ತು ಆರ್‌ಬಿ ರಮೇಶ್ ಅವರೊಂದಿಗೆ ಕೆಲಸ ಮಾಡಿದ್ದಾರೆ).

ಪ್ರತಿ ಪಂದ್ಯದ ನಂತರ, ಚಾರ್ವಿ ಎಲ್ಲಾ ಎದುರಾಳಿಗಳೊಂದಿಗೆ ಚರ್ಚೆ ನಡೆಸುವುದನ್ನು ಒಂದು ಪ್ರಮುಖ ಅಂಶವನ್ನಾಗಿ ಮಾಡುತ್ತಾರೆ. ಸುಮಾರು 30 ನಿಮಿಷಗಳವರೆಗೆ ತನ್ನ ಎದುರಾಳಿಗಳ ಜೊತೆ ಚಾರ್ವಿ ಚರ್ಚಿಸುತ್ತಾಳೆ ಎಂದು ತನ್ನ ಐಟಿ ಕೆಲಸವನ್ನು ತೊರೆದ ಮಗಳ ಏಳಿಗೆ ಬಗ್ಗೆಯೇ ಗಮನಹರಿಸಿರುವ ಚಾರ್ವಿ ತಾಯಿ ಅಖಿಲಾ ಹೇಳುತ್ತಾರೆ. ಆಟವನ್ನು ಅರ್ಥಮಾಡಿಕೊಳ್ಳಲು ಮತ್ತು ತಮ್ಮ ಮಗಳೊಂದಿಗೆ ಹೆಜ್ಜೆ ಹಾಕಲು ತಾಯಿ ಅಖಿಲಾ ಮತ್ತು ತಂದೆ ಅನಿಲ್ ಕುಮಾರ್ ಯೂಟ್ಯೂಬ್ ನ್ನು ಅವಲಂಬಿಸಿದ್ದಾರೆ.

ಆಕೆಯ ಪೋಷಕರು ತಮ್ಮ ಮಗಳು ಚೆಸ್ ನ್ನು ಕಲಿಯಬೇಕೆಂದು ಅವರು ನಿರ್ಧರಿಸಿದ್ದಲ್ಲ. ಆದರೆ ಚಾರ್ವಿ 8 ವರ್ಷದೊಳಗಿನ ಬಾಲಕಿಯರ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ನಂತರ, ಪೋಷಕರು ಸಂಪೂರ್ಣವಾಗಿ ಮಗಳ ಬಗ್ಗೆಯೇ ಗಮನಹರಿಸಿದ್ದಾರೆ.

ಪ್ರತಿದಿನ ಚೆಸ್ ತರಬೇತಿಯ ಹೊರತಾಗಿ, ಚಾರ್ವಿ ಪ್ರತಿದಿನವೂ ಸ್ವಲ್ಪ ದೈಹಿಕ ಚಟುವಟಿಕೆಯನ್ನು ಪಡೆಯಲು ಪ್ರತಿದಿನ ಸಂಜೆ ಈಜು ಮತ್ತು ಬ್ಯಾಡ್ಮಿಂಟನ್ ತರಗತಿಗಳಿಗೆ ಹೋಗುತ್ತಾಳೆ. ಚಾರ್ವಿ ಮಿಶ್ರ ಓಪನ್ ಈವೆಂಟ್‌ನಲ್ಲಿ ಭಾಗವಹಿಸಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಶೂ ಎಸೆತ': CJI ಬಿಆರ್ ಗವಾಯಿ ಜೊತೆ ಮಾತನಾಡಿದ ಪ್ರಧಾನಿ ಮೋದಿ; ಹೇಳಿದ್ದೇನು?

ಸಿಸಿಟಿವಿ ಡೇಟಾ ಹೈಕೋರ್ಟ್‌ಗಳೊಂದಿಗೆ ಮಾತ್ರ ಹಂಚಿಕೊಳ್ಳಬಹುದು: CEC ಜ್ಞಾನೇಶ್ ಕುಮಾರ್

ಕಾಂತಾರ: ಚಾಪ್ಟರ್ 1: ಕರ್ನಾಟಕದಲ್ಲಿ 4ನೇ ದಿನಕ್ಕೇ KGF 2 ಕಲೆಕ್ಷನ್‌ ಧೂಳಿಪಟ!

ನಟ ವಿಜಯ್ ದೇವರಕೊಂಡ ಕಾರು ಅಪಘಾತ; ಅದೃಷ್ಟವಶಾತ್ ಅಪಾಯದಿಂದ ಪಾರು!

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು-ಶೀತಕ್ಕೆ ಸಿರಪ್‌ ನೀಡಬೇಡಿ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

SCROLL FOR NEXT