ಗುಕೇಶ್ ಕಿಂಗ್ ಎಸೆದ ನಕಮುರಾ 
ಕ್ರೀಡೆ

ಇದೆಂಥಾ ಉದ್ಧಟತನ: ಭಾರತದ Gukesh ರ 'ಕಿಂಗ್' ಎಸೆದು ಹಿಕಾರು ನಕಮುರಾ ಸಂಭ್ರಮ! Video

ಭಾರತದಲ್ಲಿ ನಡೆಯಲಿರುವ ಚೆಕ್‌ಮೇಟ್‌ನ ಮುಂದಿನ ಸುತ್ತಿನಲ್ಲಿ ಅಮೆರಿಕವನ್ನು ಸೋಲಿಸುವ ವಿಶ್ವಾಸವನ್ನು ಭಾರತ ಆಟಗಾರರು ವ್ಯಕ್ತಪಡಿಸಿದ್ದಾರೆ.

ಟೆಕ್ಸಾಸ್: ಅಂತಾರಾಷ್ಟ್ರೀಯ ಚೆಸ್ ಕ್ರೀಡಾಕೂಟದಲ್ಲಿ ಭಾರತದ ಗ್ರಾಂಡ್ ಮಾಸ್ಚರ್ ಡಿ ಗುಕೇಶ್ (Gukesh)ಗೆ ಮತ್ತೋರ್ವ ಎದುರಾಳಿ ಆಟಗಾರ ಅಪಮಾನ ಮಾಡಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಟೆಕ್ಸಾಸ್ ನ ಆರ್ಲಿಂಗ್ಟನ್‌ನಲ್ಲಿ ನಡೆದ ‘ಚೆಕ್‌ಮೇಟ್‌’ ಟೂರ್ನಿಯ ಮೊದಲ ಸುತ್ತಿನಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತದ ವಿರುದ್ಧ ಅಮೆರಿಕ ಕ್ಲೀನ್‌ ಸ್ವೀಪ್‌ ಮಾಡಿದೆ. ಆದರೆ, ಈ ಗೆಲುವನ್ನು ಅಮೆರಿಕದ ಗ್ರ್ಯಾಂಡ್‌ ಮಾಸ್ಟರ್‌ ಹಿಕಾರು ನಕಮುರಾ ಸಂಭ್ರಮಿಸಿದ ರೀತಿ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪಂದ್ಯದುದ್ದಕ್ಕೂ ಉತ್ತಮ ಹಿಡಿತ ಸಾಧಿಸಿದ್ದ ಅಮೆರಿಕ ತಂಡವು ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡುವಲ್ಲಿ ಯಶಸ್ವಿಯಾಗಿದೆ. ಕಪ್ಪು ಕಾಯಿಯನ್ನು ಮುನ್ನಡೆಸುತ್ತಿದ್ದ ಭಾರತ ತಂಡ ಒತ್ತಡಕ್ಕೆ ಬಿದ್ದಂತೆ ಕಾಣುತ್ತಿತ್ತು. ಅದಾಗ್ಯೂ ಭಾರತದಲ್ಲಿ ನಡೆಯಲಿರುವ ಚೆಕ್‌ಮೇಟ್‌ನ ಮುಂದಿನ ಸುತ್ತಿನಲ್ಲಿ ಅಮೆರಿಕವನ್ನು ಸೋಲಿಸುವ ವಿಶ್ವಾಸವನ್ನು ಭಾರತ ಆಟಗಾರರು ವ್ಯಕ್ತಪಡಿಸಿದ್ದಾರೆ.

ಎದುರಾಳಿ ಹಾಲಿ ವಿಶ್ವ ಚಾಂಪಿಯನ್‌ ಡಿ.ಗುಕೇಶ್‌ ಅವರನ್ನು ಸೋಲಿಸಿದ ನಕಮುರಾ, ತಮ್ಮ ಆಸನದಿಂದ ಎದ್ದು ಗುಕೇಶ್‌ ಅವರ ‘ಕಿಂಗ್‌’ ಅನ್ನು ಎಸೆದು ಸಂಭ್ರಮಿಸಿದ್ದಾರೆ. ನಕಮುರಾ ವರ್ತನೆ ಕಂಡು ಗೊಂದಲಕ್ಕೀಡಾದ ಗುಕೇಶ್‌ ಅವರು ಸುಮ್ಮನೆ ಕುಳಿತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, 'ಕ್ರೀಡಾ ಮನೋಭಾವವನ್ನು ಕಾಪಾಡಿಕೊಳ್ಳದ ನಕಮುರಾ ಅವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಕಮುರಾ ಅವರು ತಮ್ಮ ವರ್ತನೆ ಮೂಲಕ ವಿಶ್ವ ಚಾಂಪಿಯನ್‌ ಗುಕೇಶ್ ಅವರಿಗೆ ಅಗೌರವ ತೋರಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Hikaru Nakamura ಹೇಳಿದ್ದೇನು?

ಇನ್ನು ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿ ಟೀಕೆಗಳು ವ್ಯಕ್ತವಾಗುತ್ತಲೇ ಈ ಕುರಿತು ಮಾತನಾಡಿರುವ ನಕಮುರಾ, ಅದು ಗುಕೇಶ್ ವಿರುದ್ಧದ ಅಗೌರವದ ಅರ್ಥವಲ್ಲ.. ಗೆಲುವಿನ ಎಕ್ಸೈಟ್ ಮೆಂಟ್ ನಲ್ಲಿ ಹಾಗೆ ಮಾಡಿದೆ ಎಂದು ವಿವರಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ, ಯುಪಿ, ಇತರ ರಾಜ್ಯಗಳಲ್ಲಿ SIR ವಿರುದ್ಧ ಹೊಸ ಅರ್ಜಿ: EC ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

'ಕೈ ಇಟ್ಟಲೆಲ್ಲಾ ದುಡ್ಡೋ ದುಡ್ಡು..': ಕರ್ನಾಟಕದಿಂದ ಕೇರಳಕ್ಕೆ ಹಣ ಕಳ್ಳಸಾಗಣೆ, 3.15 ಕೋಟಿ ರೂ. ನಗದು ಕಸ್ಟಮ್ಸ್ ವಶಕ್ಕೆ! Video

ಕೇರಳ: ಮದುವೆ ದಿನವೇ ಅಪಘಾತ, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಆಸ್ಪತ್ರೆಯಲ್ಲಿಯೇ ತಾಳಿ ಕಟ್ಟಿದ ವರ!

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪನ: ಕನಿಷ್ಠ 6 ಸಾವು, ಕೋಲ್ಕತಾ ಸೇರಿ ಭಾರತದ ಹಲವೆಡೆ ಕಂಪಿಸಿದ ಭೂಮಿ, Video

Coal mafia: ಜಾರ್ಖಂಡ್-ಪಶ್ಚಿಮ ಬಂಗಾಳದಲ್ಲಿ 40 ಕ್ಕೂ ಹೆಚ್ಚು ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ

SCROLL FOR NEXT