ಕ್ರೀಡೆ

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ!

ಪೋರ್ಚುಗಲ್ ಸೋಲಿನೊಂದಿಗೆ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತ್ತು. ಇನ್ನು ಪಂದ್ಯದ ಕೊನೆಯಲ್ಲಿ 3 ಗೋಲುಗಳನ್ನು ಗಳಿಸುವ ಮೂಲಕ ಲಿಯೋನಲ್ ಮೆಸ್ಸಿ ತಂಡ ಅರ್ಜೇಂಟೀನಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಪೋರ್ಚುಗಲ್ ಸೋಲಿನೊಂದಿಗೆ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತ್ತು. ಮತ್ತೊಂದು ಕಡೆ ಈಜಿಪ್ಟ್ ವಿರುದ್ಧದ ಪಂದ್ಯದಲ್ಲಿ ಕೊನೆಯಲ್ಲಿ 3 ಗೋಲುಗಳನ್ನು ಗಳಿಸುವ ಮೂಲಕ ಲಿಯೋನಲ್ ಮೆಸ್ಸಿ ತಂಡ ಅರ್ಜೇಂಟೀನಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದ ಈಜಿಪ್ಟ್ ವಿರುದ್ಧದ 16ರ ಘಟ್ಟದ ​​ಪಂದ್ಯದಲ್ಲಿ ಅರ್ಜೆಂಟೀನಾ ಸೋಲುತ್ತದೆ ಎಂದು ಭಾವಿಸಲಾಗಿತ್ತು. ಮೊದಲಿಗೆ ಈಜಿಪ್ಟ್ 2 ಗೋಲುಗಳೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ 79ನೇ ನಿಮಿಷಕ್ಕೆ ಅರ್ಜೇಂಟೀನಾ ಪರ ಮೊದಲ ಗೋಲು ದಾಖಲಾಯಿತು.

ಈ ಪಂದ್ಯದಲ್ಲಿ ಈಜಿಪ್ಟ್ ಪರ ಯಾಸರ್ ಇಬ್ರಾಹಿಂ ಮತ್ತು ಮುಸ್ತಫಾ ಜಿಕೊ ತಲಾ ಒಂದು ಗೋಲು ಬಾರಿಸಿದರೇ ಅರ್ಜೆಂಟೀನಾ ಪರ ಕ್ರಿಸ್ಟಿಯನ್ ರೊಮೆರೊ ಮತ್ತು ಲಿಯೋನೆಲ್ ಮೆಸ್ಸಿ ಕೂಡ ತಲಾ 1 ಗೋಲು ಬಾರಿಸಿದ್ದು ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಹೀಗಾಗಿ ಹೆಚ್ಚುವರಿ ಸಮಯ ನೀಡಲಾಯಿತು.

ಈಜಿಪ್ಟ್ ಪರ ಮೊದಲ ಗೋಲು 15 ನಿಮಿಷಕ್ಕೆ ಬಾರಿಸಿದರೇ ಎರಡನೇ ಗೋಲು 67ನೇ ನಿಮಿಷದಲ್ಲಿ ಬಂದಿತ್ತು. ಇನ್ನು ಈ ಪಂದ್ಯದಲ್ಲಿ ಅರ್ಜೇಂಟಿನಾ ಸೋಲುತ್ತದೆ ಎಂದು ಭಾವಿಸಲಾಗಿತ್ತು. ಆದರೆ 79 ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಮೊದಲ ಗೋಲು ಬಾರಿಸಿದರು. ಇದರ ಬೆನ್ನಲ್ಲೇ ಆಟ ಕೊನೆಯ ಹಂತದಲ್ಲಿ ಅಂದರೆ 83 ನಿಮಿಷಕ್ಕೆ ಲಿಯೋನೆಲ್ ಮೆಸ್ಸಿ ತಂಡದ ಪರವಾಗಿ ಎರಡನೇ ಗೋಲು ಬಾರಿಸಿದರು. ಅಂತಿಮವಾಗಿ 93ನೇ ನಿಮಿಷಕ್ಕೆ ಅರ್ಜೇಂಟೀನಾ ಪರ ಎಂಜೊ ಫೆರ್ನಾಂಡಿಸ್ ಮೂರನೇ ಗೋಲು ಬಾರಿಸಿ ಅರ್ಜೇಂಟೀನಾಗೆ ಗೆಲುವು ತಂದುಕೊಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಡೋನೇಷ್ಯಾ ಸಂಸತ್ತಿನಲ್ಲಿ ಒಡಿಶಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಪರಾಕ್ರಮ ಬಣ್ಣಿಸಿದ ಪ್ರಧಾನಿ ಮೋದಿ!

E20 ಪೆಟ್ರೋಲ್‌ನಿಂದಾಗಿ ಎಂಜಿನ್‌ ಹಾಳಾದ ಒಂದೇ ಒಂದು ಕಾರನ್ನು ತೋರಿಸಿ: ಗಡ್ಕರಿ ಬಹಿರಂಗ ಸವಾಲು

ಭಯಾನಕ ಅಪಘಾತ: ಫುಟ್​ಪಾತ್​ನಲ್ಲಿ ಕುಳಿತಿದ್ದ ಕುಟುಂಬದ ಮೇಲೆ ಹರಿದ ಟಿಪ್ಪರ್; ತಂದೆ, ಮೂವರು ಮಕ್ಕಳು ಸ್ಥಳದಲ್ಲೇ ಸಾವು - Video

ವಯನಾಡು ಭೂಕುಸಿತ 'ಮಾನವ ನಿರ್ಮಿತ'; ಮಣ್ಣು ತೆರವುಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ ಸೂಚಿಸಿದ್ರೂ ನಿರ್ಲಕ್ಷ್ಯ!

ರಾಜ್ಯದಲ್ಲಿ SIR ತಾತ್ಕಾಲಿಕ ತಡೆಗೆ ಎನ್‌ಡಿಎ ಪಟ್ಟು; ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು!