ಫಿಫಾ ವಿಶ್ವ ಕಪ್ ಚಾಂಪಿಯನ್ ಸ್ಪೇನ್ 
ಕ್ರೀಡೆ

FIFA World Cup 2026 Final: ಇತಿಹಾಸ ಬರೆದ ಸ್ಪೇನ್; ಅರ್ಜೆಂಟೀನಾ ಮಣಿಸಿ ವಿಶ್ವ ಚಾಂಪಿಯನ್

ಅಮೆರಿಕದ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 1-0 ಗೋಲು ಅಂತರದಲ್ಲಿ ಮಣಿಸಿದ ಸ್ಪೇನ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನ್ಯೂಯಾರ್ಕ್: ತೀವ್ರ ಕುತೂಹಲ ಕೆರಳಿಸಿದ್ದ ಫಿಫಾ ವಿಶ್ವಕಪ್ 2026 ಫೈನಲ್ ಟೂರ್ನಿಯಲ್ಲಿ ಪ್ರಬಲ ಅರ್ಜೆಂಟೀನಾ ವಿರುದ್ಧ ಸ್ಪೇನ್ ವಿರೋಚಿತ ಗೆಲುವು ಸಾಧಿಸಿದೆ.

ಅಮೆರಿಕದ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 1-0 ಗೋಲು ಅಂತರದಲ್ಲಿ ಮಣಿಸಿದ ಸ್ಪೇನ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೊದಲಾರ್ಧದಲ್ಲಿ ಗೋಲು ರಹಿತವಾಗಿ ಸಾಗಿದ ಪಂದ್ಯ, ದ್ವಿತೀಯಾರ್ಧಲ್ಲಿ ಮತ್ತಷ್ಟು ರೋಚಕವಾಗಿತ್ತು.

ಒಂದೆಡೆ ಸ್ಪೇನ್ ತನ್ನ ಆಕ್ರಮಣಕಾರಿ ಆಟ ಮುಂದುವರೆಸಿದರೆ, ಇತ್ತ ಅರ್ಜೆಂಟೀನಾ ಕೂಡ ತನ್ನ ರಕ್ಷಣಾತ್ಮಕ ಆಟವನ್ನು ಆಡಿ ಯಾವುದೇ ಅಪಾಯ ಎಳೆದುಕೊಂಡಿರಲಿಲ್ಲ.

ಆದರೆ ಪಂದ್ಯದ ಅವಧಿ ಮುಕ್ತಾಯವಾಗಿ ಹೆಚ್ಚುವರಿ ಸಮಯದಲ್ಲಿ ಸ್ಪೇನ್ ನ ಫೆರಾನ್ ಟೋರ್ಸ್ ಸ್ಪೇನ್ ಪರ ಗೋಲು ಭಾರಿಸಿ ಐತಿಹಾಸಿಕ ಜಯತಂದಿತ್ತರು. ವಿಲಿಯಮ್ಸ್ ನೀಡಿದ ಪಾಸ್ ಅನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಫೆರಾನ್ ಟೋರ್ಸ್ ಚೆಂಡನ್ನು ಬಲವಾಗಿ ಒದ್ದು ಗೋಲಾಗಿ ಪರವರ್ತಿಸಿದರು. ಅವರ ಈ ಏಕೈಕ ಗೋಲು ಸ್ಪೇನ್ ಗೆ ಪ್ರಶಸ್ತಿ ತಂದಿಟ್ಟಿತು.

ಅರ್ಜೆಂಟೀನಾಗೆ ರೆಡ್ ಕಾರ್ಡ್

ಅಂತೆಯೇ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರ ಎಂಜೋ ಫರ್ನಾಂಡೇಝ್ ಗೆ ರೆಫರಿ ರೆಡ್ ಕಾರ್ಡ್ ನೀಡಿದರು. ಸ್ಪೇನ್ ಆಟಗಾರನಿಗೆ ಅಪಾಯಕಾರಿಯಾಗಿ ಅಡ್ಡಿ ಹೋದ ಪರಿಣಾಮ ಅವರು ಕೆಳಗೆ ಬಿದ್ದ ಹಿನ್ನಲೆಯಲ್ಲಿ ಫರ್ನಾಂಡೇಝ್ ಗೆ ರೆಫರಿ ರೆಡ್ ಕಾರ್ಡ್ ನೀಡಿದರು.

ಸ್ವೇನ್ ಸಿಕ್ಕ ಗೋಲ್ ಅನೂರ್ಜಿತಗೊಳಿಸಿದ ರೆಫರಿ

ಒಂದೆಡೇ ಫೈನಲ್ ಪಂದ್ಯ ಗೋಲು ರಹಿತವಾಗುತ್ತದೆಯೇ ಎನ್ನುವಾಗಲೇ ಸ್ಪೇನ್ ನ ನಿಕೋ ವಿಲಿಯಮ್ಸ್ ವಿವಾದಾತ್ಮಕ ಗೋಲು ಬಾರಿಸಿದರು. ಈ ವೇಳೆ ರೆಫರಿ ಅದನ್ನು ಅನೂರ್ಜಿತಗೊಳಿಸಿದರು. ಅತ್ತ ಸ್ಪೇನ್ ಅಭಿಮಾನಿಗಳೂ ಕೂಡ ತೀವ್ರ ನಿರಾಶೆಗೀಡಾದರು.

ಜಿದ್ದಾಜಿದ್ದಿನ ಮೊದಲಾರ್ಧ

ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಸ್ಪೇನ್ ಮತ್ತು ಹಾಲಿ ಚಾಂಪಿಯನ್ ಅರ್ಜೆಂಟೀನಾ ನಡುವಿನ ಮೊದಲಾರ್ಧ ತೀವ್ರ ಪೈಪೋಟಿಯ ನಡುವೆ 0-0 ಗೋಲುಗಳಿಂದ ಸಮಬಲದಲ್ಲಿ ಅಂತ್ಯಗೊಂಡಿತು. ಫೈನಲ್ ಪಂದ್ಯ ಆರಂಭವಾಗುತ್ತಲೇ ಉಭಯ ತಂಡಗಳು ಗೋಲ್ ಗಾಗಿ ತೀವ್ರ ಪೈಪೋಟಿ ನಡೆಸಿದವು. ಸ್ಪೈನ್ ಆಕ್ರಣಕಾರಿ ಆಟಕ್ಕೆ ಮುಂದಾದರೆ ಅರ್ಜೆಂಟೀನಾ ರಕ್ಷಣಾತ್ಮಕ ಆಟದ ಮೊರೆ ಹೋಯಿತು.

ಎರಡೂ ತಂಡಗಳು ಎಚ್ಚರಿಕೆಯ ಆಟಕ್ಕೆ ಮೊರೆಹೋಗಿದ್ದರಿಂದ ಮೊದಲ 45 ನಿಮಿಷಗಳಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆರಂಭದಿಂದಲೇ ಸ್ಪೇನ್ ಚೆಂಡಿನ ಮೇಲಿನ ಹಿಡಿತ ಸಾಧಿಸಿ ಆಕ್ರಮಣಕಾರಿ ಆಟವಾಡಿತು.

ಲಮೀನ್ ಯಮಾಲ್, ದಾನಿ ಓಲ್ಮೊ ಮತ್ತು ಮಿಕೆಲ್ ಒಯಾರ್ಜಬಲ್ ಮೂಲಕ ಹಲವು ದಾಳಿಗಳನ್ನು ರೂಪಿಸಿದರೂ, ಅರ್ಜೆಂಟೀನಾ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಸ್ ಭದ್ರ ರಕ್ಷಣೆಯೊಂದಿಗೆ ಸ್ಪೇನ್‌ಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಅರ್ಜೆಂಟೀನಾ ಕೂಡ ಲಿಯೋನೆಲ್ ಮೆಸ್ಸಿ ನೇತೃತ್ವದಲ್ಲಿ ಪ್ರತಿದಾಳಿ ನಡೆಸಲು ಪ್ರಯತ್ನಿಸಿತು. ಆದರೆ ಸ್ಪೇನ್‌ನ ಸಂಘಟಿತ ರಕ್ಷಣೆಯ ಎದುರು ಸ್ಪಷ್ಟ ಗೋಲು ಅವಕಾಶಗಳನ್ನು ಸೃಷ್ಟಿಸಲು ವಿಫಲವಾಯಿತು.

ಅರ್ಜೆಂಟೀನಾಗೆ ಆಘಾತ

ಮೊದಲಾರ್ಧದ ಅಂತ್ಯದ ವೇಳೆಗೆ ಅರ್ಜೆಂಟೀನಾಗೆ ಆಘಾತ ಎದುರಾಯಿತು. ರಕ್ಷಣಾ ಆಟಗಾರ ಲಿಸಾಂಡ್ರೊ ಮಾರ್ಟಿನೆಸ್ ಗಾಯಗೊಂಡು ಹೊರನಡೆದಿದ್ದು, ಅವರ ಬದಲಿಗೆ ಅನುಭವಿ ನಿಕೊಲಾಸ್ ಒಟಮೆಂಡಿ ಮೈದಾನಕ್ಕಿಳಿದರು. ಅದಕ್ಕೂ ಮುನ್ನ ಮಾರ್ಟಿನೆಸ್ ಕಠಿಣ ಟ್ಯಾಕಲ್‌ಗೆ ಹಳದಿ ಕಾರ್ಡ್ ಕೂಡ ಪಡೆದಿದ್ದರು. ಮೊದಲಾರ್ಧದಲ್ಲಿ ಸ್ಪೇನ್ ಚೆಂಡಿನ ನಿಯಂತ್ರಣದಲ್ಲಿ ಮೇಲುಗೈ ಸಾಧಿಸಿದರೂ, ಅರ್ಜೆಂಟೀನಾ ಶಿಸ್ತಿನ ರಕ್ಷಣೆಯಿಂದ ಗೋಲು ಅವಕಾಶಗಳನ್ನು ಯಶಸ್ವಿಯಾಗಿ ತಡೆದಿತು. ನಾಲ್ಕು ನಿಮಿಷಗಳ ಹೆಚ್ಚುವರಿ ಸಮಯದ ಬಳಿಕ ರೆಫರಿ ಮೊದಲಾರ್ಧದ ಅಂತ್ಯ ಘೋಷಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP Protest LIVE Updates | ಮುಂದುವರೆದ CJP ಪ್ರತಿಭಟನೆ: ನಿಮ್ಮನ್ನು ರಕ್ಷಿಸಲು ಇನ್ನಷ್ಟು ಮಾಡಬಹುದಿತ್ತು; ಗಾಯಗೊಂಡ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಅಭಿಜೀತ್ ದೀಪ್ಕೆ

ನಾಳೆ ಸಂಪುಟ ವಿಸ್ತರಣೆ ಬಹುತೇಕ ಫಿಕ್ಸ್?: ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ಮೂವರು ನಾಯಕರು; Video

ಸಿಕ್ಕಿಂನಲ್ಲಿ ಭೀಕರ ದುರಂತ: ಸುರಂಗದಲ್ಲಿ ಸ್ಫೋಟ-ಭೂಕುಸಿತ; 8 ಕಾರ್ಮಿಕರ ಸಾವು, 27 ಮಂದಿಗಾಗಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ..!

ಹಳಿ ತಪ್ಪಿದ ಗೂಡ್ಸ್ ರೈಲು; ಸಂಚಾರ ಭಾರೀ ಅಸ್ತವ್ಯಸ್ತ; 85ಕ್ಕೂ ಹೆಚ್ಚು ರೈಲುಗಳು ರದ್ದು, ಮಾರ್ಗ ಬದಲಾವಣೆ!

West asia war: ಸೈನಿಕರ ಸಾವಿಗೆ ಹಲವು ಪಟ್ಟು ಬೆಲೆ ತೆರುತ್ತೀರಿ; Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ..!