ಕ್ರಿಸ್ಟಿಯಾನೊ ರೊನಾಲ್ಡೊ 
ಕ್ರೀಡೆ

ಈ ವ್ಯಕ್ತಿ ಕೇವಲ 90 ನಿಮಿಷದಲ್ಲಿ 30 ಕೋಟಿ ರೂ ಗಳಿಸುತ್ತಾನೆ: ರೊನಾಲ್ಡೊ ಆದಾಯ ನೋಡಿ ಬೆಚ್ಚಿಬಿದ್ದ ಜಗತ್ತು!

ರೊನಾಲ್ಡೊ ಅವರು ಕೇವಲ 90 ನಿಮಿಷಗಳ ಒಂದು ಪಂದ್ಯದಿಂದಲೇ ಸುಮಾರು 30 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಅವರ ಈ ಭಾರೀ ಸಂಪಾದನೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ.

ಫುಟ್ಬಾಲ್ ದಿಗ್ಗಜ, ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಆದಾಯದ ಅಂಕಿ-ಅಂಶಗಳನ್ನು ನೋಡಿ ಇಡೀ ಜಗತ್ತು ಬೆಚ್ಚಿ ಬಿದ್ದಿದೆ.

ರೊನಾಲ್ಡೊ ಅವರು ಕೇವಲ 90 ನಿಮಿಷಗಳ ಒಂದು ಪಂದ್ಯದಿಂದಲೇ ಸುಮಾರು 30 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಅವರ ಈ ಭಾರೀ ಸಂಪಾದನೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ.

ರೊನಾಲ್ಡ್ ಪ್ರತಿ ಬಾರಿಯೂ ಫುಟ್ಬಾಲ್ ಮೈದಾನಕ್ಕೆ ಕಾಲಿಟ್ಟಾಗ, ಗಡಿಯಾರ ವಿಭಿನ್ನವಾಗಿ ಓಡಲು ಪ್ರಾರಂಭಿಸುತ್ತದೆ. ಅವರು ಕೇವಲ 90 ನಿಮಿಷಗಳ ಒಂದು ಪಂದ್ಯದಲ್ಲಿ ಸುಮಾರು 30 ಕೋಟಿ ರೂ. ಗಳಿಸುತ್ತಾರೆ. ಮತ್ತೊಂದೆಡೆ ವರ್ಷಕ್ಕೆ 12 ಲಕ್ಷ ರೂಪಾಯಿ ಸಂಬಳ ಪಡೆಯುವ ಭಾರತೀಯ ಉದ್ಯೋಗಿಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ರೊನಾಲ್ಡೊ ಒಂದು ಪಂದ್ಯದಲ್ಲಿ ಗಳಿಸುವ 30 ಕೋಟಿ ರೂಪಾಯಿ ಸಂಪಾದಿಸಲು ಸುಮಾರು 2,500 ವರ್ಷ ಕೆಲಸ ಮಾಡಬೇಕಾಗುತ್ತದೆ.

41 ವರ್ಷದ ರೊನಾಲ್ಡೊ ಸೌದಿ ಅರೇಬಿಯಾದ ಕ್ಲಬ್ ಜೊತೆಗಿನ ಒಪ್ಪಂದದ ಮೂಲಕ ವರ್ಷಕ್ಕೆ ಸುಮಾರು 1,700 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಒಂದು ವರ್ಷದಲ್ಲಿ ಕ್ಲಬ್ ಹಾಗೂ ದೇಶದ ಪರ ಸರಾಸರಿ 55 ಪಂದ್ಯಗಳನ್ನು ಆಡುತ್ತಾರೆ ಎಂದು ಲೆಕ್ಕ ಹಾಕಿದರೆ, ಪ್ರತಿ ಪಂದ್ಯಕ್ಕೆ ಸುಮಾರು 30 ಕೋಟಿ ರೂಪಾಯಿ ಆದಾಯ ಬರುತ್ತದೆ.

ಅಂದರೆ ಕೇವಲ 90 ನಿಮಿಷಗಳ ಆಟದಿಂದಲೇ ಅವರು ಗಳಿಸುವ ಮೊತ್ತ, ಅನೇಕ ಕಂಪನಿಗಳ ವಾರ್ಷಿಕ ವೇತನ ವೆಚ್ಚಕ್ಕೆ ಸಮಾನವಾಗಿದೆ.

ಇನ್ನು ರೊನಾಲ್ಡೊ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 10,000 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಎರಡು ದಶಕಗಳಿಗಿಂತ ಹೆಚ್ಚು ಕಾಲದ ಫುಟ್ಬಾಲ್ ವೃತ್ತಿಜೀವನ, ಜಾಹೀರಾತು ಒಪ್ಪಂದಗಳು, ಬ್ರ್ಯಾಂಡ್ ಪ್ರಚಾರ, ಉದ್ಯಮ ಹೂಡಿಕೆಗಳು ಮತ್ತು ಸೋಷಿಯಲ್‌ ಮೀಡಿಯಾದಿಂದ ಈ ಸಂಪತ್ತು ನಿರ್ಮಾಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತ್ರಿಶಾ ವಿರುದ್ಧ ಡಬಲ್ ಮೀನಿಂಗ್ ಹೇಳಿಕೆ: ವಿಚಾರಣೆ ಬಳಿಕ ಠಾಣೆಯಿಂದ ಉದಯನಿಧಿ ಬಿಡುಗಡೆ, ಅಭಿಮಾನಿಗಳಿಂದ ಸಂಭ್ರಮ!

585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ವಿತರಣೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಗಜಿನಿ, ಲಗಾನ್ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ

ಅಶ್ಲೀಲ ಜೋಕ್‌ಗಳು ಸ್ವೀಕಾರಾರ್ಹವಲ್ಲ; ಉದಯನಿಧಿ ವಿರುದ್ಧದ ಪೊಲೀಸರ ಕ್ರಮ ಸರಿಯಾಗಿದೆ: ನಟಿ ಕಂಗನಾ ರಣಾವತ್

ದ್ವೇಷ ಭಾಷಣ: ಪಿಎಫ್‌ಐ ನಾಯಕನಿಗೆ ಆರು ತಿಂಗಳು ಜೈಲು ಶಿಕ್ಷೆ