ಫುಟ್ಬಾಲ್ ಪಂದ್ಯದ ವೇಳೆ ಆಟಗಾರರ ನಡುವೆ ಢಿಕ್ಕಿ-ಆಟಗಾರ ಸಾವು 
ಕ್ರೀಡೆ

ಫುಟ್ಬಾಲ್ ಪಂದ್ಯದಲ್ಲಿ ಭೀಕರ ಅಪಘಾತ; ಆಟಗಾರರ ನಡುವೆ ಢಿಕ್ಕಿ, ಮೈದಾನದಲ್ಲಿ ಸ್ಪೇನ್ ಆಟಗಾರ ಸಾವು! Video

ಸ್ಪೇನ್‌ನ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯದಲ್ಲಿ ಗೋಲ್‌ಕೀಪರ್ ಜೊತೆಗಿನ ಭೀಕರ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಟೆನೆರಿಫ್ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ (30) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮ್ಯಾಡ್ರಿಡ್: ಫುಟ್ಬಾಲ್ ಪಂದ್ಯವೊಂದರ ವೇಳೆ ಇಬ್ಬರು ಆಟಗಾರರು ಪರಸ್ಪರ ಢಿಕ್ಕಿಯಾದ ಪರಿಣಾಮ ಓರ್ವ ಆಟಗಾರ ಮೈದಾನದಲ್ಲೇ ಸಾವನ್ನಪ್ಪಿರುವ ಘಟನೆ ಸ್ಪೇನ್ ನಲ್ಲಿ ನಡೆದಿದೆ.

ಸ್ಪೇನ್‌ನ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯದಲ್ಲಿ ಗೋಲ್‌ಕೀಪರ್ ಜೊತೆಗಿನ ಭೀಕರ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಟೆನೆರಿಫ್ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ (30) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಆಟಗಾರ ಮೃತಪಟ್ಟಿರುವುದನ್ನು ಅವರ ಕ್ಲಬ್ ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ.

'2026ರ ನವೆಂಬರ್ 3ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಜೀಸಸ್ ಡಿ ಮಿಗುಯೆಲ್ ಅಲಮೇಡಾ ಅವರ ನಿಧನದ ದುಃಖದ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಈ ನೋವನ್ನು ಕಡಿಮೆ ಮಾಡುವ ಯಾವುದೇ ಮಾತುಗಳಿಲ್ಲ. ಈ ದೊಡ್ಡ ದುಃಖವನ್ನು ತಗ್ಗಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಅವರ ಕುಟುಂಬ, ಆಪ್ತರು ಹಾಗೂ ಟೆನೆರಿಫ್ ಅಭಿಮಾನಿಗಳ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ' ಎಂದು ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಂದ್ಯದ ವೇಳೆ 30 ವರ್ಷದ ಡಿ ಮಿಗುಯೆಲ್, ಈಕ್ವಟೋರಿಯಲ್ ಗಿನಿಯಾದ ಅಂತಾರಾಷ್ಟ್ರೀಯ ಆಟಗಾರ ಹಾಗೂ ಎಫ್‌ಸಿ ಅಂಡೋರಾ ತಂಡದ ಗೋಲ್‌ಕೀಪರ್ ಜೀಸಸ್ ಒವೊನೊ ಅವರೊಂದಿಗೆ ಮುಖಾಮುಖಿ ಡಿಕ್ಕಿಗೆ ಒಳಗಾಗಿದ್ದರು. ಎದುರಾಳಿ ತಂಡದ ದಾಳಿಯನ್ನು ತಡೆಯಲು ಗೋಲ್‌ಕೀಪರ್ ತನ್ನ ಗೋಲುಪೆಟ್ಟಿಗೆಯಿಂದ ಹೊರಗೆ ಓಡಿ ಬಂದಿದ್ದಾಗ ಮೈದಾನದ ಮಧ್ಯಭಾಗದಲ್ಲಿ ಈ ಘಟನೆ ಸಂಭವಿಸಿತ್ತು.

ಪಂದ್ಯದ ಅಂತಿಮ ಹಂತದಲ್ಲಿ ಈ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯ ಬಳಿಕ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು.

ಸ್ಪೇನ್‌ನ ಮಾಧ್ಯಮಗಳ ವರದಿಗಳ ಪ್ರಕಾರ, ಗಾಯಗೊಂಡಿದ್ದ ಡಿ ಮಿಗುಯೆಲ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಹೃದಯ ಸ್ತಂಭನ ಸಂಭವಿಸಿತ್ತು. ತಕ್ಷಣವೇ ಅವರಿಗೆ ಪುನಶ್ಚೇತನ ಚಿಕಿತ್ಸೆ (ಸಿಪಿಆರ್) ನೀಡಿ ಜೀವ ಉಳಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

ಹಿಂದೂ ಹಬ್ಬಗಳಲ್ಲಿ ಮಾತ್ರ ಇವರಿಗೆ ಪರಿಸರ ನೆನಪಾಗುತ್ತೆ; ಈದ್, ಬಕ್ರೀದ್ ಬಂದಾಗ...: ನಸೀರುದ್ದೀನ್ ಶಾ, ದಿಯಾ ವಿರುದ್ಧ ಬಿಜೆಪಿ ಕಿಡಿ

'ಅಮ್ಮಾ ಪ್ಲೀಸ್ ಮನೆಗ್ ಕರ್ಕೊಂಡ್ ಹೋಗು': 2 ತಿಂಗಳ ಕಣ್ಣೀರಿಗೆ ಕೊನೆಗೂ ತೆರೆ, ಪೋಷಕರ ಮಡಿಲು ಸೇರಿದ ಕಂದಮ್ಮ! ಆಗಿದ್ದೇನು? Video

ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ: ಕೇಂದ್ರ ಸರ್ಕಾರ, ಇತರ ಪ್ರತಿವಾದಿಗಳಿಗೆ 'ಸುಪ್ರೀಂ ನೋಟಿಸ್ ' ಒಂದು ವಾರದೊಳಗೆ ಪ್ರತಿಕ್ರಿಯೆಗೆ ಸೂಚನೆ!

'ದೇವಾಲಯಗಳಲ್ಲಿ ಅತ್ಯಾಚಾರ ನಡೆಯುತ್ತವೆ, ಅಲ್ಲಿ ಬ್ರಾಹ್ಮಣ ಮಹಿಳೆಯರು ಸುರಕ್ಷಿತವಲ್ಲ....': ನೇಹಾ ಬೋರಾ ವಿರುದ್ಧ ಪ್ರಿಯಾಂಕಾ ಕಿಡಿ!