ಇತಿಹಾಸ ಬರೆದ ಮನಿಷಾ ಭಾನ್ವಾಲಾ 
ಕ್ರೀಡೆ

wrestling championship: ಇತಿಹಾಸ ಬರೆದ ಮನಿಷಾ ಭಾನ್ವಾಲಾ, ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಂಬ ಕೀರ್ತಿಗೆ ಭಾಜನರಾಗಿದ್ದಾರೆ.

ನವದೆಹಲಿ: ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಶುಕ್ರವಾರ ಐತಿಹಾಸಿಕ ಮೈಲಿಗಲ್ಲು ದಾಖಲಾಗಿದ್ದು, ಭಾರತದ ರೆಸ್ಲರ್ ಮನಿಷಾ ಭಾನ್ವಾಲಾ ವಿಶ್ವ ಕುಸ್ತಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕಜಕಿಸ್ತಾನದ ಅಸ್ತಾನಾದಲ್ಲಿ ಶುಕ್ರವಾರ ನಡೆದ ಮಹಿಳೆಯರ 59 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅಮೆರಿಕದ ಅಬಿಗೇಲ್ ನೆಟ್ಟೆ ಅವರನ್ನು 8-6 ಅಂಕಗಳಿಂದ ಮಣಿಸಿ 29 ವರ್ಷದ ಕುಸ್ತಿಪಟು ಮನೀಷಾ ಈ ಸಾಧನೆ ಮಾಡಿದ್ದಾರೆ.

ಆರು ಅಂಕಗಳ ಹಿನ್ನಡೆಯಲ್ಲಿದ್ದರೂ ಎದೆಗುಂದದೆ ಹೋರಾಡಿದ 29 ವರ್ಷದ ಮನೀಷಾ, ಕೊನೆಯ ಹಂತದಲ್ಲಿ ಅಮೋಘ ಪುನರಾಗಮನದ ಮೂಲಕ ಗೆಲುವು ಸಾಧಿಸಿದರು. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ 2010ರಲ್ಲಿ ಪುರುಷರ 66 ಕೆ.ಜಿ. ವಿಭಾಗದಲ್ಲಿ ದಿಗ್ಗಜ ಕುಸ್ತಿಪಟು ಸುಶೀಲ್ ಕುಮಾರ್ ವಿಶ್ವ ಚಾಂಪಿಯನ್ ಆಗಿದ್ದರು.

ಭಾರತೀಯ ಕುಸ್ತಿಗೆ ಬಹುದಿನಗಳಿಂದ ಕಾಯುತ್ತಿದ್ದ ವಿಶ್ವ ಚಾಂಪಿಯನ್ ಪಟ್ಟವನ್ನು ಮನೀಷಾ ತಂದುಕೊಟ್ಟಿದ್ದಾರೆ. ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ತಂಡ ಮತ್ತೊಂದು ಅಪರೂಪದ ಸಾಧನೆ ಮಾಡಿದೆ.

ಒಂದೇ ಆವೃತ್ತಿಯಲ್ಲಿ ಮೂವರು ಭಾರತೀಯ ಮಹಿಳಾ ಕುಸ್ತಿಪಟುಗಳು ಚಿನ್ನದ ಪದಕದ ಪಂದ್ಯಕ್ಕೆ ಪ್ರವೇಶಿಸಿದ್ದು ಇದೇ ಮೊದಲು.

ಗುರುವಾರ ನಡೆದ ಫೈನಲ್‌ಗಳಲ್ಲಿ ನೀಲಂ ಸಿರೋಹಿ (50 ಕೆ.ಜಿ.) ಮತ್ತು ಕಾಜಲ್ ಧೋಚಕ್ (76 ಕೆ.ಜಿ.) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು. ಆದರೆ, ಮನೀಷಾ ಫೈನಲ್‌ನಲ್ಲಿ ಗೆದ್ದು ಭಾರತಕ್ಕೆ ಚಿನ್ನದ ಪದಕದ ಖಾತೆ ತೆರೆದರು.

ಭಾರತೀಯ ಮಹಿಳಾ ಕುಸ್ತಿಗೆ ಮೊದಲ ವಿಶ್ವ ಚಾಂಪಿಯನ್ ಪಟ್ಟ ತಂದುಕೊಟ್ಟ ಮನೀಷಾ ಅವರ ಸಾಧನೆ ದೇಶದ ಕ್ರೀಡಾ ಇತಿಹಾಸದಲ್ಲಿ ಸ್ಮರಣೀಯವಾಗಿ ಉಳಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Uttarakhand helicopter crash: ಹೆಲಿಕಾಪ್ಟರ್ ಛಿದ್ರ; ಐವರು ಕನ್ನಡಿಗರು ಸೇರಿದಂತೆ ಆರು ಮೃತದೇಹಗಳು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆ!

ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ ಪ್ರಶಸ್ತಿ'; ನವೆಂಬರ್ 19ಕ್ಕೆ ಪ್ರದಾನ; ನಟ ರಜನಿಕಾಂತ್ ಕರೆಸಲು ಚಿಂತನೆ!

'ಆರಾಮಾಗಿ ಮಲಗಿ, ಇನ್ನೂ 15–20 ವರ್ಷ BJP ಅಧಿಕಾರದಲ್ಲಿರುತ್ತದೆ, ಆಮೇಲೆ ನೋಡೋಣ': ಮಮತಾ ಕಾಲೆಳೆದ ನಟ Mithun Chakraborty

ಗೌರಿ ಲಂಕೇಶ್ ಹತ್ಯೆಯಿಂದ ಘಾಸಿಗೊಂಡ ಪ್ರಕಾಶ್ ರಾಜ್; ನಾನು ದೇವರನ್ನು ನಂಬುತ್ತೇನೆ, ಅವರು ನಂಬಲ್ಲ: ಪತ್ನಿ ಪೋನಿ ವರ್ಮಾ ಸಂವಾದ!

ಜನವರಿ 25ರಿಂದ ಜನಗಣತಿ ಆರಂಭ; ಚುನಾವಣೆ ನಡೆಯಲಿರುವ ರಾಜ್ಯಗಳು, ಹಿಮಪಾತ ಪೀಡಿತ ಪ್ರದೇಶಗಳಿಗೆ ವಿನಾಯಿತಿ