ಮಾಣಿ: ಸರ್, ನಿಮಗೆ ಬ್ಲಾಕ್ ಕಾಫಿ ಕೊಡಲಾ?
ಗಿರಾಕಿ: ಅದೇ ಆಗಬೇಕು ಅಂತೇನೂ ಇಲ್ಲ, ನಿಮ್ಮ ಹೋಟೆಲಿನಲ್ಲಿ ಬೇರೆ ಕಲರಿನ ಕಾಫಿ ಇದ್ರೆ ಅದನ್ನೇ ತಂದುಕೊಡು ಪರವಾಗಿಲ್ಲ.
=
ಗುಂಡಣ್ಣ: ಇನ್ಸ್‌ಪೆಕ್ಟರ್, ಒಂದು ಶಾಕಿಂಗ್ ನ್ಯೂಸ್. ನನ್ನ ತೋಟದಲ್ಲಿ ಬಾಂಬ್ ಪತ್ತೆಯಾಗಿದೆ.
ಇನ್ಸ್‌ಪೆಕ್ಟರ್: ಹೌದಾ, ಅದು ಅಲ್ಲಿಯೇ ಇರಲಿ. ಮೂರು ದಿನಗಳ ನಂತರವೂ ಅದರ ವಾರಸುದಾರರು ಪತ್ತೆಯಾಗದಿದ್ದರೆ ಅದನ್ನು ನೀವೇ ಇಟ್ಕೊಂಡು ಬಿಡಿ.
=
ಹುಡುಗ: ನೀನು ನಿಜಕ್ಕೂ ನನ್ನನ್ನು ಪ್ರೀತಿಸ್ತಿದ್ದೀಯ ತಾನೆ? ಬೇರೆ ಯಾರಿಗೂ ನೀನು ಮನಸ್ಸು ಕೊಟ್ಟಿಲ್ಲ ತಾನೆ?
ಹುಡುಗಿ: ಸದ್ಯಕ್ಕೆ ಅಂಥಾ ಮಿಸ್ಟೇಕ್ ಆಗಿಲ್ಲ ಕಣೋ. ಮೊನ್ನೆ ರಾತ್ರಿ ನನ್ನಲ್ಲಿದ್ದ ಎರಡು ಲಿಸ್ಟ್ ಚೆಕ್ ಮಾಡಿದ್ದೀನಿ. ಅದರ ಪ್ರಕಾರ, ಈಗ ಪ್ರೀತಿಸ್ತಿರೋದು ನಿನ್ನನ್ನೇ.
=
ತಂದೆ: ನಿಮ್ಮ ಮಗನಿಗೆ ವಿದ್ಯೆ ಕಲಿಸುವುದು ಬಹಳ ಕಷ್ಟ ಎಂದು ನಿಮ್ಮ ಮಿಸ್ ಹೇಳಿದ್ರಲ್ಲೋ?
ಮಗ: ನಮ್ಮ ಸ್ಕೂಲಲ್ಲಿ ಇರೋರು ಪೆದ್ದಿ ಮೇಡಂ ಅಂತ ನಾನು ನೊದಲೇ ತಿಳಿಸಿರಲಿಲ್ವಾ ಅಪ್ಪಾ?
=
ಹೆಡ್‌ಮಾಸ್ಟರ್: ಮಕ್ಕಳಿಂದ ಲೆಕ್ಕ ಮಾಡಿಸಿ ಅಂದ್ರೆ ಡ್ಯಾನ್ಸ್ ಮಾಡಿಸ್ತಾ ಇದ್ದೀರಲ್ರೀ?
ಗಣಿತದ ಶಿಕ್ಷಕ: ಹಾಗೇನಿಲ್ಲ ಸರ್, ನಿನ್ನೆ ಲೆಕ್ಕದ ಹೋಂವರ್ಕ್ ಕೊಟ್ಟಿದ್ದೆ. ಎಲ್ಲರೂ ತಪ್ಪು ಮಾಡಿಕೊಂಡು ಬಂದಿದ್ರು, ಯಾಕಯ್ಯಾ ತಪ್ಪು ಮಾಡಿಕೊಂಡು ಬಂದಿದ್ದೀರ ಅಂತ ಕೇಳಿದ್ರೆ-ತಪ್ಪು ಮಾಡದವ್ರು ಯಾರವ್ರೆ ಅಂತ ಡ್ಯಾನ್ಸ್ ಮಾಡ್ತಿದ್ದಾರೆ!