ಸಾಪ್ತಾಹಿಕಪ್ರಭ

ಝೆನ್ ಟೀಮ್

ರಂಗಭೂಮಿ ಮೂಲಕ ತುಮಕೂರಿನಲ್ಲಿ ಪರ್ಯಾಯ ಚಳವಳಿ ರೂಪಿಸಿರುವ 'ಝೆನ್ ಟೀಮ್‌'ಗೆ ಈಗ 8ನೇ ವರ್ಷದ ಸಂಭ್ರಮ. 'ಕನ್ನಡಪ್ರಭ' ಪ್ರಧಾನ ವರದಿಗಾರ ಉಗಮ ಶ್ರೀನಿವಾಸ್ ನೇತೃತ್ವದಲ್ಲಿ 'ರಾಮಾಯಣ' ನಾಟಕದ ಮೂಲಕ ರಂಗಯಾತ್ರೆ ನಡೆಸಿದ ಝೆನ್ ಟೀಮ್, ಇದುವರೆಗೆ ಒಟ್ಟು 100 ನಾಟಕಗಳನ್ನು ಆಯೋಜಿಸಿದೆ.
ಪ್ರಯೋಗಾತ್ಮಕ ರಂಗಭೂಮಿಗೆ ಇಲ್ಲಿ ಆದ್ಯತೆ ಹೆಚ್ಚು. ತುಮಕೂರು ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಿಂದಲೂ ಕೂಡ ಪ್ರೇಕ್ಷಕರು ಝೆನ್ ಟೀಮ್‌ನ ನಾಟಕಕ್ಕೆ ಬರುವುದು ವಿಶೇಷ. ಸಮುದಾಯ, ಮಳೆಗಾಲ, ದೇಸಿ ನಾಟಕೋತ್ಸವ ಹಾಗೂ ಚಳಿಗಾಲದ ನಾಟಕಗಳು ಈ ತಂಡದ ಖ್ಯಾತಿಯನ್ನು ಎತ್ತಿಹಿಡಿದಿವೆ. ಇನ್ನು ಮುಂದೆ ಝೆನ್ ಟೀಮ್ ಸ್ವತಂತ್ರವಾಗಿ ತುಮಕೂರಿನ ನಟರನ್ನೇ ಬಳಸಿಕೊಂಡು ಹೊಸ ಪ್ರಯೋಗಗಳಿಗೆ ಮುಂದಾಗಲಿದೆ. ಅದರ ಮೊದಲ ಭಾಗವಾಗಿ ಪಿ. ಲಂಕೇಶರ 'ಸಹಪಾಠಿ' ಕಥೆಯನ್ನು ರಂಗಕ್ಕೆ ಇಳಿಸಲಿದೆ.
ಅಲ್ಲದೆ, ನವೀನ ಮಾದರಿಯ ತೊಗಲುಗೊಂಬೆಯಾಟವನ್ನೂ ಪರಿಚಯಿಸಲು ಟೀಮ್ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನ ಪ್ರದರ್ಶನ, ಹೊಸ ಅಲೆಯ ಚಿತ್ರಗಳನ್ನು ಇಂಟಿಮೇಟ್ ಆದ ಜಾಗದಲ್ಲಿ ಪ್ರದರ್ಶಿಸಲು ಕಾರ್ಯಕ್ರಮ ರೂಪಿಸಿದೆ. ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನೂ ಆಯೋಜಿಸಲಿದೆ. ಮಕ್ಕಳಿಂದಲೇ ನಾಟಕವಾಡಿಸುವ ಉದ್ದೇಶವೂ ಇದೆ.
'ಶೀಘ್ರದಲ್ಲೇ ಬಯಲುಸೀಮೆ ನಾಟಕೋತ್ಸವವನ್ನು ಆಯೋಜಿಸಿ, ಸೀತಾ ಪರಿಣಯ, ಗಾಂಧಿ ವರ್ಸಸ್ ಗಾಂಧಿ ಹಾಗೂ ಶೇಕ್ಸ್‌ಪಿಯರ್ ಮನೆಗೆ ಬಂದ- ನಾಟಕವನ್ನು ಪ್ರದರ್ಶಿಸಲಿದೆ' ಎನ್ನುತ್ತಾರೆ ಉಗಮ.
'ಏನನ್ನೂ ಮುಚ್ಚಿಡುವುದಿಲ್ಲ, ಏನನ್ನೂ ಬಿಚ್ಚಿಡುವುದಿಲ್ಲ' ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಝೆನ್ ಟೀಮ್, ರಂಗಭೂಮಿ ಮೂಲಕ ಮನುಷ್ಯ ಸಂಬಂಧಗಳನ್ನು ಹುಡುಕಲೆತ್ನಿಸುತ್ತಿದೆ.
'ನಾಟಕದಿಂದ ನಮ್ಮೊಳಗಿನ ವಿಕಾರಗಳು ಕಡಿಮೆಯಾಗಿ ಮಾನವೀಯತೆ ಕಡೆ ಪ್ರತಿಯೊಬ್ಬರು ಯೋಚಿಸುವಂತೆ ಮಾಡುವುದು ಮುಖ್ಯ ಉದ್ದೇಶ' ಎಂಬುದು ಉಗಮ ನುಡಿ.

- ಶಿವಣ್ಣ ವೆಂಕಟಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!