ಕೋಲ್ಯಿಣಿ: ನಿನ್ನೆಯ ರಾತ್ರಿಯನ್ನು ನಾನೆಂದೂ ಮರೆಯೋದೇ ಇಲ್ಲ. ಅಷ್ಟು ಲವ್ಲಿ. ಹ್ಞಾಂ, ನೀನು ಹೇಗೆ ಕಳೆದೆ?
ಫಂಟಾಕ್ಷಿ: ತುಂಬಾ ಬೋರಾಗಿತ್ತು. ಗಂಡ ಬಂದ. ಮೂರೇ ನಿಮಿಷದಲ್ಲಿ ಊಟ ಮಾಡ್ದ. ಸೀದಾ ಹೋಗಿ ಮಲ್ಕೊಂಡ. ಹೋಗ್ಲಿ ಬಿಡು, ನೀನ್ ಹೇಗೆ ಕಳೆದೆ?
ಕೋಲ್ಯಿಣಿ: ಓ ಅದು ಸೂಪರ್. ನನ್ನ ಗಂಡ ಬಂದ್ರು. ರೋಮ್ಯಾಂಟಿಕ್ ಡಿನ್ನರ್ಗೆಂದು ನನ್ನ ಹೊರಗೆ ಕರ್ಕೊಂಡ್ ಹೋದ್ರು. ನಂತರ ನನ್ನ ಕೈ ಹಿಡಿದು, ಒಂದು ಗಂಟೆ ವಾಕ್ ಮಾಡಿದ್ರು. ಮನೆಗೆ ಬಂದ್ಮೇಲೆ ಮನೇಲಿ ಕ್ಯಾಂಡಲ್ ಹಚ್ಚಿದ್ರು. ಮತ್ತೆ ಬಿಡು, ನಿನ್ಗೆ ಗೊತ್ತಲ್ಲ...
ಅದೇ ಆಫೀಸಿನಲ್ಲಿ ಇಬ್ಬರು ಪುರುಷರು ಚಾಟ್ ಮಾಡ್ತಿದ್ರು.
ಫಂಟಾ: ನಿನ್ನೆ ರಾತ್ರಿ ಹೇಗೆ ಕಳೆದೆ?
ಕೋಲ್ಯ: ಥೂ, ಅದು ಭಯಾನಕ. ನಾನು ಮನೆಗೆ ಬಂದೆ. ಹೆಂಡ್ತಿ ಅಡುಗೆನೇ ಮಾಡಿರ್ಲಿಲ್ಲ. ಹೀಗಾಗಿ, ಅವಳನ್ನು ಹೊರಗೆ ಡಿನ್ನರ್ಗೆ ಕರ್ಕೊಂಡ್ ಹೋದೆ. ನೀನು 300 ರು. ಸಾಲ ಕೊಟ್ಟಿದ್ಯಲ್ಲ ಅದ್ರಲ್ಲೇ ಊಟ ಕೊಡಿಸ್ದೆ. ಆಟೋದಲ್ಲಿ ವಾಪಸ್ ಬರೋಣ ಅಂತ ಅಂದ್ಕೊಂಡೆ. ಆದ್ರೆ, ದುಡ್ಡಿರ್ಲಿಲ್ಲ. ಇಬ್ರೂ ನಡ್ಕೊಂಡ್ ಬಂದ್ವಿ. ಕರೆಂಟ್ ಬಿಲ್ ಕಟ್ಟದೇ ಇದ್ದಿದ್ದರಿಂದ, ಫ್ಯೂಸ್ ಕಿತ್ಕೊಂಡ್ ಹೋಗಿದ್ರು. ಇನ್ನೇನು ಮಾಡೋದು, ಮನೆ ಕತ್ತಲಲ್ಲಿ ಇರುತ್ತೆ ಅಂತ ನಾಲ್ಕು ಕ್ಯಾಂಡಲ್ ಹಚ್ಚಿ ಮಲ್ಕೊಂಡೆ!