ಯುವಜನ/ಮಕ್ಕಳು

YES

ಯುವಜನರಿಗೆ ಕೌಶಲ್ಯ ತರಬೇತಿ ಒದಗಿಸುವ ಗುರಿ ಇಟ್ಟುಕೊಂಡು ಟಿಎಂಐ ಇ2ಇ ವತಿಯಿಂದ ಎನ್‌ಎಸ್‌ಡಿಸಿಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಔದ್ಯೋಗಿಕ ಸೇವಾ ಕೇಂದ್ರ(ಘಊಖ)ವೊಂದನ್ನು ಆರಂಭಿಸಲಾಗಿದೆ. ಕೋರಮಂಗಲದ ಎಲ್.ವಿ. ಕಚೇರಿ ಬಳಿ ಸ್ಥಾಪಿಸಿರುವ ಈ ಔದ್ಯೋಗಿಕ ಕೇಂದ್ರ ದೇಶದಲ್ಲೇ ವಿಶಿಷ್ಟ ಪ್ರಯೋಗವಾಗಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಪದವೀಧರರನ್ನು ಗುರಿಯಾಗಿಸಿಕೊಂಡು ಈ ಕೇಂದ್ರ ಆರಂಭಿಸಲಾಗಿದೆ.
ಪದವೀಧರರಲ್ಲದ ಯುವಜನರಿಗೂ ಇಲ್ಲಿ ಕೆಲಸದ ಮಾಹಿತಿ ಲಭ್ಯ. ಅಭ್ಯರ್ಥಿ ಯಾವ ರೀತಿಯ ಉದ್ಯೋಗಕ್ಕೆ ಸರಿಹೊಂದುತ್ತಾನೆ ಎನ್ನುವುದನ್ನು ಅರಿತುಕೊಳ್ಳಲು ಉದ್ಯೋಗ ವ್ಯಕ್ತಿತ್ವ ಅರ್ಹತಾ ಪರೀಕ್ಷೆ ಹಾಗೂ ಯೋಗ್ಯತಾ ಪರೀಕ್ಷೆ, ಆಪ್ತ ಸಮಾಲೋಚನೆ ಹಾಗೂ ತಜ್ಞರಿಂದ ಉಪನ್ಯಾಸ, ತರಬೇತಿ ಕಾರ್ಯಕ್ರಮಗಳನ್ನು ಈ ಕೇಂದ್ರ ನಡೆಸಿಕೊಡುತ್ತದೆ. ಟಿಎಂಐಇ2ಇ ಬೆಂಗಳೂರು ಮಾತ್ರವಲ್ಲದೆ ಹೈದರಾಬಾದ್, ಪುಣೆ ಹಾಗೂ ಕೋಲ್ಕತಾಗಳಲ್ಲೂ ಘಊಖ ಕೇಂದ್ರಗಳನ್ನು ಆರಂಭಿಸಿದೆ. ಕೆಲವೇ ವರ್ಷಗಳಲ್ಲಿ ದೇಶಾದ್ಯಂತ ಇಂಥ ಕೇಂದ್ರಗಳನ್ನು ಆರಂಭಿಸುವ ಗುರಿ ಇಟ್ಟುಕೊಂಡಿದೆ. ಕಾರ್ಪೊರೇಟ್ ಸಂಸ್ಥೆಗಳಾದ ಬಿಎಫ್‌ಎಸ್‌ಐ, ರಿಟೇಲ್, ಅಟೊಮೊಟಿವ್ ಹಾಗೂ ಐಟಿ ಕ್ಷೇತ್ರಗಳ 10ಕ್ಕೂ ಹೆಚ್ಚಿನ ಕಂಪನಿಗಳು ಘಊಖ ಕೇಂದ್ರದ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ನೀಡಲು ಮುಂದಾಗಿವೆ. ಮಾಹಿತಿಗಾಗಿ WWW.time2eacademy.com ಅನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್