ಗ್ಯಾಜೆಟ್ ಗೀಳು ವಿದ್ಯಾರ್ಥಿಗಳನ್ನು ಯಾವ ರೀತಿ ಆವರಿಸಿದೆ ನೋಡಿ. ಮಧ್ಯ ಚೀನಾದ ವುಹಾನ್ ಪ್ರಾಂತ್ಯವೊಂದರಲ್ಲೇ 20 ಸಾವಿರ ವಿದ್ಯಾರ್ಥಿಗಳು ಗ್ಯಾಜೆಟ್‌ಗಳಿಗಾಗಿಯೇ ಸಾಲ ಮಾಡಿದ್ದಾರೆ. ಹೀಗೆ ಸಾಲ ಮಾಡಿದವರಲ್ಲಿ ಶೇ.90ರಷ್ಟು ಮಂದಿ ಕೊಂಡದ್ದು ಆ್ಯಪಲ್ ಉತ್ಪನ್ನಗಳನ್ನಂತೆ. ಚೀನಾದಲ್ಲಿ ವಿದ್ಯಾರ್ಥಿಗಳಿಗೆ ಗ್ಯಾಜೆಟ್ ಕೊಳ್ಳಲು ಸುಲಭವಾಗಿ ಸಾಲ ನೀಡಲಾಗುತ್ತದೆ. ಆದರೆ, ಈ ರೀತಿ ನೀಡುವ ಸಾಲದ ಬಡ್ಡಿದರ ಮಾತ್ರ ದುಪ್ಪಟ್ಟು. ವರ್ಷದ ಅವಧಿಯ ಈ ಸಾಲ ತೀರಿಸುವುದು ಅಷ್ಟು ಸುಲಭವಲ್ಲ. ಆದರೆ, ಗ್ಯಾಜೆಟ್ ಗೀಳಿಗೆ ಬಿದ್ದಿರುವ ವಿದ್ಯಾರ್ಥಿಗಳು ಬಡ್ಡಿ ಹೆಚ್ಚಿದ್ದರೂ ಸಾಲ ಪಡೆಯಲು ಹಿಂದೆ ಮುಂದೆ ಯೋಚಿಸುತ್ತಿಲ್ಲವಂತೆ.