ಯುವಜನ/ಮಕ್ಕಳು

ಚಿತ್ರ ವಿಜ್ಞಾನ

ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಚಿತ್ರ ಬಿಡಿಸೋದು ಎಷ್ಟು ಕಷ್ಟ ಅಲ್ವಾ? ಹಾಗಂತ ನಾವು ಅಂದುಕೊಂಡಿದ್ದೀವಿ ಅಷ್ಟೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 15-20 ಅಂಕಗಳ ಪ್ರಶ್ನೆಗಳು ಚಿತ್ರಗಳಿಗಾಗಿಯೇ ಮೀಸಲು. ನಿಜ ಏನಂದ್ರೆ ವಿಜ್ಞಾನ ಚಿತ್ರಗಳನ್ನು ಬಿಡಿಸೋದು ತೀರಾ ಸರಳ. ಇಂತಹ ಸುಲಭ ವಿಧಾನಗಳನ್ನು ತಿಳಿಸಿಕೊಡುವ ಪ್ರಯತ್ನ 'ಚಿತ್ರ ವಿಜ್ಞಾನ.'
ಪ್ರೌಢಶಾಲಾ ಶಿಕ್ಷಕರಾಗಿರುವ ವ್ಯಂಗ್ಯ ಚಿತ್ರಕಾರ ಸತೀಶ್ ಯಲ್ಲಾಪುರ ಈ ಕೃತಿಯನ್ನು ರಚಿಸಿದ್ದಾರೆ. ಎ.ಸಿ ಡೈನೆಮೊ, ಬೆಳಕಿನ ಬಲ್ಬ್, ಮೂತ್ರ ಜನಕಾಂಗ, ಹೃಹಯ, ಹೂವು ಸೇರಿದಂತೆ 14 ಚಿತ್ರಗಳ ಬಗ್ಗೆ ಶಾಲೆಯಲ್ಲಿ ಪಾಠ ಮಾಡುವ ಹಾಗೆಯೇ ಹಂತಹಂತವಾಗಿ ವಿವರಣೆ ನೀಡಿದ್ದಾರೆ. ಪೆನ್ಸಿಲ್, ಎರೇಸರ್ ಬಳಕೆ ಬಗ್ಗೆಯೂ ಟಿಪ್ಸ್‌ಗಳನ್ನು ನೀಡಿದ್ದಾರೆ. ಹೊನ್ನಾವರ ತಾಲ್ಲೂಕು ಕೆರೆಕೋಣದ ಬಂಡಾಯ ಪ್ರಕಾಶನ (ಮೊ: 9481451639) ಇದನ್ನು ಪ್ರಕಟಿಸಿದೆ. 60 ಪುಟ. ಬೆಲೆ ರು. 50. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಪುಸ್ತಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ