ಮಿಸ್ಟರ್ ಬೀನ್ ಗೊತ್ತಲ್ಲ? ಅದೇ 'ಪೋಗೋ' ಚಾನೆಲ್‌ನ ಕಾಮಿಡಿ ಮನುಷ್ಯ. ಅವನ ಮೂಲ ಹೆಸರು ರೋವಾನ್ ಸೆಬಾಸ್ಟಿಯನ್ ಅಟಕಿನ್‌ಸನ್. ಈತ ಹಾಸ್ಯನಟನೂ ಹೌದು, ಪ್ರಸಿದ್ಧ ಲೇಖಕನೂ ಹೌದು. 1995, ಜನವರಿ 1ರಂದು ಹುಟ್ಟಿದ ಈತ 'ಆಧುನಿಕ ಚಾಪ್ಲಿನ್' ಅಂತಲೇ ಟೈಟಲ್ ಗಿಟ್ಟಿಸಿಕೊಂಡವನು. ತೆರೆಯ ಮೇಲೆ ಈತ ಮಾತನಾಡುವುದು ಅಪರೂಪ. ಬದುಕಿನ ಸಾಮಾನ್ಯ ಸಂಗತಿಗಳನ್ನು ಅತ್ಯಂತ ವಿಶೇಷ ರೀತಿಯಲ್ಲಿ ಅಭಿನಯಿಸಿ ತೋರಿಸಿ ಕಾಮಿಡಿಯ ಕಚಗುಳಿ ಇಡುತ್ತಾನೀತ. ಇಲ್ಲಿನ ಚಿತ್ರಗಳಲ್ಲಿ ಆತ ಹಲವು ಅವತಾರಗಳಲ್ಲಿ ಮಿಂಚಿದ್ದಾನೆ.
= ವಿದ್ಯಾ ವಿ. ಹಾಲಭಾವಿ