ಗರ್ವಭಂಗ
ಗರ್ವಭಂಗ
ಕಾಡಿನಲ್ಲಿ ಸಿಂಹರಾಜ
ಗರ್ವದಿಂದ ಮೆರೆಯಿತು
ಕಾಡುಪ್ರಾಣಿ ಶಪಿಸುವಂತೆ
ಬಹಳ ಹಿಂಸೆ ನೀಡಿತು...
ರಾಜನಾಯ್ಕೆ ಮಾಡುವಂಥ
ಸೂಕ್ತ ಸಮಯ ಬಂದಿತು
ಸಣ್ಣ-ದೊಡ್ಡ ಪ್ರಾಣಿಗೆಲ್ಲ
ಬಹಳ ಹರುಷ ತಂದಿತು..
ಸಿಂಹದೆದುರು ನಿಲ್ಲಲೆಂದು
ಆನೆ ಮುಂದೆ ಬಂದಿತು
ಕಾಡಿಗೊಮ್ಮೆ ರಾಜನಾಗಿ
ಮೆರೆವ ಆಸೆ ಎಂದಿತು..
ಸಿಂಹ ತಾನೇ ಗೆಲ್ಲಲೆಂದು
ಅವಕೆ ಮೋಡಿ ಮಾಡಿತು
ಆಸೆಯಿಂದ ಮರುಳಗೊಳಿಸಿ
ಮಾಂಸದೂಟ ನೀಡಿತು...
ಭೀತಿಯಿಂದ ಕಾಡುಪ್ರಾಣಿ
ಸಿಂಹದತ್ತ ಬಂದವು
ಪ್ರೀತಿಯಿಂದ ಆನೆಗೆಲ್ಲ
ನಮ್ಮ ಮತವು ಎಂದವು...
ದುಷ್ಟತನಕೆ ಸೋತ ಸಿಂಹ
ಪೀಠ ಬಿಟ್ಟು ಕೊಟ್ಟಿತು
ಗೆದ್ದ ಆನೆ ಪೀಠವೇರಿ
ಬಹಳ ಹರುಷಪಟ್ಟಿತು...
-ಎಂ.ಎಂ. ಸಂಗಣ್ಣವರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.