ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಯುವಜನ/ಮಕ್ಕಳು

ಬಿಳಿ ಗರುಡ: (ಬ್ರಾಹ್ಮಿನಿ ಕೈಟ್)

Lingaraj Badiger
Updated On : 16 Aug 2013, 4:03 am

ಇದನ್ನು ಕೆಂಪು ಬೆನ್ನಿನ ಸಮುದ್ರ ಹದ್ದು ಎಂತಲೂ ಕರೆಯುತ್ತಾರೆ. ಆಕ್ಸಿಪಿಟ್ರಿಡೆ ಕುಟುಂಬಕ್ಕೆ ಸೇರಿದ ಇದು ರಣಹದ್ದು, ಕಡಲ ಡೆಗೆ, ಹ್ಯಾರಿಸ್ ಡೆಗೆ ಪಕ್ಷಿಗಳ ಸಾಲಿಗೆ ಸೇರುತ್ತದೆ. ಪ್ರಮುಖವಾಗಿ ಭಾರತದ ಉಪಖಂಡಗಳಲ್ಲಿ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬೆಳೆದ ಹಕ್ಕಿಗಳು ಕೆಂಪುಮಿಶ್ರಿತ ಕಂದುಬಣ್ಣದ ಗರಿಗಳನ್ನು ಹೊಂದಿರುತ್ತವೆ ಮತ್ತು ಅದಕ್ಕೆ ವಿರುದ್ಧವಾದ ಬಿಳಿಯ ತಲೆ ಮತ್ತು ಎದೆಯನ್ನು ಹೊಂದಿ ಇತರ ಬೇಟೆಯಾಡುವ ಪಕ್ಷಿಗಳಿಗಿಂತ ಭಿನ್ನವಾಗಿರುತ್ತವೆ. ಎಳೆಯ ಮರಿಗಳು ಕಂದುಬಣ್ಣದಲ್ಲಿರುತ್ತವೆ. ವಯಸ್ಸಿಗೆ ಬಂದಿರುವವು ಹಾರುವಾಗ ಗೋಲಾಕಾರದ ಬಾಲ ಮತ್ತು ಪುಕ್ಕಗಳನ್ನು ಹೊಂದಿರುತ್ತವೆ. ಇವುಗಳ ರೆಕ್ಕೆಯ ಕೆಳಪದರದಲ್ಲಿ ಚೌಕಾಕಾರದ ಆಕಾರವಿದ್ದು ಬ್ಯುಟಿಯೋ ಡೆಗೆಗಳಿಗಿಂತ ಭಿನ್ನವಾಗಿರುತ್ತವೆ. ವಿಶೇಷವೆಂದರೆ, ಮಳೆಗಾಲಕ್ಕೆ ಅನುಗುಣವಾಗಿ ಇವು ತಮ್ಮ ಪ್ರಾಂತ್ಯದೊಳಗೆ ಸ್ಥಳ ಬದಲಾವಣೆ ಮಾಡುತ್ತಿರುತ್ತವೆ. ಇವಕ್ಕೆ ಜೌಗು ಪ್ರದೇಶ ಇಷ್ಟ. ಕೆಲವು ಬಾರಿ ಹಿಮಾಲಯದ 5000 ಅಡಿ ಎತ್ತರದಲ್ಲಿ ಕೂಡ ಕಾಣಸಿಗುತ್ತವೆ. ಉತ್ತರ ಏಷ್ಯಾಗಳಲ್ಲಿ ಸಂತಾನೋತ್ಪತ್ತಿಯ ಕಾಲ ಡಿಸೆಂಬರ್‌ನಿಂದ ಏಪ್ರಿಲ್ ವರೆಗೆ. ಮರದ ಸಣ್ಣ ಸಣ್ಣ ರೆಂಬೆಗಳು, ಚಿಕ್ಕ ಚಿಕ್ಕ ಕೋಲುಗಳಿಂದ ವೃತ್ತಾಕಾರದ ಗೂಡು ಕಟ್ಟಿ, ಒಳಗೆ ಎಲೆಗಳಿಂದ ಹೆಣೆದಿರುತ್ತವೆ. ಒಂದು ಬಾರಿಗೆ ನೀಲಿ ಬಣ್ಣದ ಗುಂಡನೆಯ ಎರಡು ಮೊಟ್ಟೆಗಳನ್ನು ಇಡುತ್ತವೆ. ಗೂಡು ಕಟ್ಟುವ, ಮರಿ ಪೋಷಿಸುವ ಕೆಲಸದಲ್ಲಿ ಗಂಡು-ಹೆಣ್ಣು ಪಕ್ಷಿಗಳೆರಡೂ ಸಮಾನವಾಗಿ ಪಾಲ್ಗೊಳ್ಳುತ್ತವೆ. ಆದರೆ ಮೊಟ್ಟೆಗೆ ಕಾವು ಕೊಡುವುದರಲ್ಲಿ ಹೆಣ್ಣು ಪಕ್ಷಿಯ ಪಾತ್ರ ಪ್ರಮುಖವಾದುದು. ಮೊಟ್ಟೆಯಿಟ್ಟ 26ರಿಂದ 27 ದಿನಗಳಲ್ಲಿ ಮರಿಯಾಗುತ್ತದೆ. ಕೊಳೆತ ಮಾಂಸ, ಮೀನು, ಏಡಿಗಳನ್ನು ತಿನ್ನುತ್ತದೆ. ಬೇರೆ ಹಕ್ಕಿಯ ಬೇಟೆಯನ್ನು ಕದ್ದು ತಿನ್ನುವ ಸ್ವಭಾವ ಇದಕ್ಕಿದೆ. ಅಪರೂಪದ ಪ್ರಸಂಗಗಳಲ್ಲಿ ಜೇನುಗೂಡಿನಿಂದ ಜೇನುತುಪ್ಪ ತಂದು ಮರಿಗಳಿಗೆ ತಿನ್ನಿಸುತ್ತವೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement