ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಯುವಜನ/ಮಕ್ಕಳು

ಯಾರ ಕೂಡಿ ಆಟ ಆಡಲಿ

Lingaraj Badiger
Updated On : 16 Aug 2013, 4:04 am

ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅನುಭವ ಇರುವ ಮೇಟಿಕೆರೆ ಹಿರಿಯಣ್ಣ ಅವರು ರಚಿಸಿರುವ ಮಕ್ಕಳ ಕವಿತೆಗಳ ಆರನೇ ಸಂಕಲನ ಇದು. ಮನಕ್ಕೆ ಮುದ ನೀಡುವ 52 ಕವಿತೆಗಳಿವೆ. ಒಂದಕ್ಕಿಂತ ಒಂದು ವೈವಿಧ್ಯಮಯ. ಎಲ್ಲವೂ ಮಕ್ಕಳ ಕಲಿಕೆಗೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎನ್ನುವುದು ವಿಶೇಷ. ಕೆಲವು ಪದ್ಯಗಳು ಪಠ್ಯಕ್ಕೂ ಹೊಂದಿಕೊಳ್ಳುವಂತಿವೆ. ಓದಲು ತೊಡಗುವ ಮಕ್ಕಳನ್ನು ಬೇರೊಂದು ಲೋಕದಲ್ಲಿ ಸುತ್ತಾಡುವಂತೆ ಮಾಡುವ ಶಕ್ತಿ 'ಯಾರ ಕೂಡಿ ಆಟ ಆಡಲಿ' ಸಂಕಲನಕ್ಕೆ ಇದೆ. ಚಿತ್ರಕಲಾ ಶಿಕ್ಷಕ ಎಚ್.ಎಸ್. ಮಂಜುನಾಥ ಸೊಗಸಾದ ಚಿತ್ರಗಳನ್ನು ರಚಿಸಿದ್ದಾರೆ. ಮೈಸೂರಿನ ರಚನ ಪ್ರಕಾಶನ ಪ್ರಕಟಿಸಿರುವ ಸಂಕಲನದ ಬೆಲೆ 100 ರುಪಾಯಿ. ಪ್ರಕಾಶಕರ ವಿಳಾಸ: ನಂ.791/ಎಸ್, 25/7ನೇ ಕ್ರಾಸ್, ಹೆಬ್ಬಾಳು 2ನೇ ಹಂತ, ಮೈಸೂರು. ಕವಿಯನ್ನು ಮೊಬೈಲ್ 9449580278 ಮೂಲಕ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement