ಸೂರ್ಯ
ಸೂರ್ಯ ಸೌರವ್ಯವಸ್ಥೆಯ ಕೇಂದ್ರದಲ್ಲಿರುವ ನಕ್ಷತ್ರ. ಕ್ಷೀರಪಥದಲ್ಲಿರುವ ತಾರಾಪುಂಜದ ಅತಿ ದೊಡ್ಡ ನಕ್ಷತ್ರವೂ ಹೌದು. ಗೋಲಾಕಾರದಲ್ಲಿರುವ ಸೂರ್ಯ, ಕಾಂತಕ್ಷೇತ್ರಗಳ ನಡುವೆ ಬೆಸೆದುಕೊಂಡಿರುವ ಬಿಸಿಯಾದ ಪ್ಲಾಸ್ಮಾವನ್ನು ಹೊಂದಿರುತ್ತಾನೆ. ಸೂರ್ಯನ ವ್ಯಾಸ 1.4 ದಶಲಕ್ಷ ಕಿ.ಮೀ. ಸೂರ್ಯನನ್ನು ದ್ಯುತಿಗೋಳ, ತಿರುಳು ಅಥವಾ ಕೇಂದ್ರಭಾಗ, ವಿಕಿರಣ ವಲಯ, ಸಂವಾಹಕ ವಲಯ ಎಂಬುದಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಸೂರ್ಯನ ವಯಸ್ಸು 4,600,000,000 ವರ್ಷ ಎಂದು ಅಂದಾಜಿಸಲಾಗಿದೆ. ಭೂಮಿಯಿಂದ 149.6 ದಶಲಕ್ಷ ಕಿ.ಮೀ ದೂರದಲ್ಲಿದ್ದಾನೆ. ಹೊರಾವರ್ತದಲ್ಲಿ ತಾಪಮಾನ 5500 ಡಿಗ್ರಿ ಸೆಲ್ಷಿಯಸ್ ಮತ್ತು ಕೇಂದ್ರಭಾಗದಲ್ಲಿ 14,000,000 ಡಿಗ್ರಿ ಸೆಲ್ಷಿಯಸ್. ಪರಿಭ್ರಮಣ ಅವಧಿ 25 ಭೂದಿನಗಳು. ರಾಸಾಯನಿಕವಾಗಿ ಸೂರ್ಯನಲ್ಲಿ ಮುಕ್ಕಾಲು ಪಾಲು ಹೈಡ್ರೋಜನ್ ಮತ್ತು ಕಾಲು ಭಾಗ ಹೀಲಿಯಂ ಇರುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.