ಮನೆಯಿಂದ ಹೊರಗಿರ್ತೀರಿ. ಹೇಳೋರು ಕೇಳೂರು ಯಾರೂ ಇರಲ್ಲ. ಹೀಗಾಗಿ ಕಂಡದ್ದನ್ನೆಲ್ಲ ಹೊಟ್ಟೆಗೆ ಹಾಕಿಕೊಳ್ಳೋದು ಯುವಜನರ ಮಾಮೂಲಿ ಅಭ್ಯಾಸ. ಕಾಲೇಜಲ್ಲಿ, ರಸ್ತೆ ಬದಿಯಲ್ಲಿ ಅಥವಾ ಫಿಜ್ಜಾ ಸೆಂಟರ್‌ಗಳಲ್ಲಿ ಸಿಗುವ ಕರಿದ ಆಹಾರಗಳನ್ನು ಟೇಸ್ಟಿಯಾಗಿರುತ್ತದೆ ಎನ್ನುವ ಒಂದೇ ಕಾರಣಕ್ಕೆ ಮೆಲ್ಲಲು ಶುರು ಮಾಡಿದರೆ ನಿಮ್ಮ ಆರೋಗ್ಯ ಕೆಟ್ಟೀತು. ಹೌದು. ಯುವಜನರ ಜೀವನಶೈಲಿಯಲ್ಲಿನ ಈ ಬದಲಾವಣೆ, ಜಂಕ್‌ಫುಡ್‌ಗಳ ಮೇಲಿನ ವಿಪರೀತ ಮೋಹ ಬಹುಬೇಗ ಅನಾರೋಗಕ್ಕೆ ಗುರಿ ಮಾಡುತ್ತಿದೆ. ಕರಿದ ತಿಂಡಿಗಳು, ಸಾಫ್ಟ್‌ಡ್ರಿಂಕ್‌ಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳಿರುತ್ತವೆ. ಇಷ್ಟಾದರೂ ಇವು ಯುವಜನರ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಇದರಿಂದ ಅವರು ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿಗೆ ಬಹುಬೇಗ ತುತ್ತಾಗುತ್ತಿದ್ದಾರೆ ಎನ್ನುತ್ತದೆ ಸಮೀಕ್ಷೆಯೊಂದು.