ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ?
ನಾವರಿಯಲಾರದೆಲ್ಲದರೊಟ್ಟು ಹೆಸರೆ? ॥
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? ॥
ಸಾವು ಹುಟ್ಟುಗಳೇನು? - ಮಂಕುತಿಮ್ಮ ॥
ದೇವರು ಎನ್ನುವುದು ಏನು? ಅದು ಒಂದು ಕಗ್ಗತ್ತಲೆಯಿಂದ ಕೂಡಿದ ಗುಹೆಯೋ? ಅಥವಾ ನಮಗೆ ತಿಳಿಯದೆ ಇರುವ ಎಲ್ಲವನ್ನೂ ಕೂಡಿ, ಅದಕ್ಕೆ ನಾವು ಒಂದು ಹೆಸರಿಟ್ಟು, 'ದೇವರು' ಎಂದು ಕರೆಯುತ್ತಿದ್ದೇವೆಯೋ? ಈ ಜಗತ್ತನ್ನು ಕಾಪಾಡುವನೊಬ್ಬನಿದ್ದರೂ ಈ ಜಗತ್ತಿನ ಕಥೆ ಹೀಗೇಕಿದೆ? ಈ ಹುಟ್ಟು ಮತ್ತು ಸಾವುಗಳ ಅರ್ಥವೇನು? ಈ ರೀತಿಯ ಪ್ರಶ್ನೆಗಳು ಪ್ರತಿಯೊಬ್ಬ ಮನುಷ್ಯನನ್ನೂ ಒಂದಲ್ಲ ಒಂದು ಸಲ ಕಾಡಿರುವುವಂತಹವೇ.