ಯುವಜನ/ಮಕ್ಕಳು

ಯಾರು ಮುಖ್ಯ?




ಒಂದು ದಿನ ಗಿಡದ ಎಲ್ಲಾ ಭಾಗಗಳೂ ಒಟ್ಟಿಗೇ ಕುಳಿತುಕೊಂಡಿದ್ದವು. ಅವೆಲ್ಲ ಒಂದು ವಿಷಯದ ಚರ್ಚೆಯಲ್ಲಿ ತೊಡಗಿದ್ದವು. ಆ ವಿಷಯವೆಂದರೆ, ಗಿಡದ ಯಾವ ಅಂಗ ಪ್ರಮುಖವಾದುದು? ಎಂದು. ಮೊದಲು ಈ ಚರ್ಚೆ ಕಾಂಡ ಮತ್ತು ಬೇರಿನ ಮಧ್ಯೆ ಶುರುವಾಯಿತು. ಆಗ ಉಳಿದ ಎಲ್ಲಾ ಭಾಗಗಳೂ ಚರ್ಚೆಯಲ್ಲಿ ಭಾಗವಹಿಸಿದವು.
ಬೇರು: ನಾನು ಗಿಡವನ್ನು ಹಿಡಿದಿಟ್ಟುಕೊಂಡಿರುತ್ತೇನೆ. ಗಾಳಿಬಂದಾಗ ಅದನ್ನು ಬೀಳದಂತೆ ಮಾಡುತ್ತೇನೆ. ನೀರು ಹಾಗೂ ಪೋಷಕಾಂಶಗಳನ್ನು ಮಣ್ಣಿನಿಂದ ಹೀರುತ್ತೇನೆ. ಹಾಗಾಗಿ ನಾನೇ ಗಿಡದಲ್ಲಿ ಪ್ರಮುಖ ಅಂಗ.
ಕಾಂಡ: ನಾನು ಗಿಡವನ್ನು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತೇನೆ. ಅಲ್ಲದೇ ಅದನ್ನು ಸೂರ್ಯನ ಬೆಳಕಿನ ಕಡೆಗೆ ಬೆಳೆಯಲು ಸಹಾಯ ಮಾಡುತ್ತೇನೆ. ಆದ್ದರಿಂದ ನಾನೇ ಗಿಡದಲ್ಲಿ ಪ್ರಮುಖ ಅಂಗ.
ಎಲೆ: ನಾನು ಗಿಡಕ್ಕೆ ಊಟ ತಯಾರಿಸುತ್ತೇನೆ ಹಾಗೂ ಗಿಡವನ್ನು ತಣ್ಣಗೆ ಇಟ್ಟಿರುತ್ತೇನೆ. ಅಷ್ಟಲ್ಲದೇ ಗಾಳಿ ಕೂಡ ಕೊಡುತ್ತೇನೆ. ಅಂದ ಮೇಲೆ ನಾನೇ ಪ್ರಮುಖ ಅಂಗ.
ಹೂವು: ನಾನು ಗಿಡವನ್ನು ಸುಂದರವಾಗಿ ಕಾಣಲು ಸಹಾಯ ಮಾಡುತ್ತೇನೆ. ಹಕ್ಕಿ, ಪಕ್ಷಿಗಳು, ಹುಳಗಳನ್ನು ಆಕರ್ಷಿಸುತ್ತೇನೆ. ಕಾಯಾಗಲು ಸಹಾಯ ಮಾಡುತ್ತೇನೆ. ಆದ್ದರಿಂದ ನಾನಲ್ಲವೇ ಪ್ರಮುಖ ಅಂಗ?
ಹಣ್ಣು: ನಾವು ಬೀಜಗಳನ್ನು ರಕ್ಷಣೆ ಮಾಡುತ್ತೇವೆ. ಬೀಜಗಳಿಗೆ ಸಹಾಯ ಮಾಡಿ ಬೇರೆ ಗಿಡಗಳು ಹುಟ್ಟಲು ಸಹಾಯ ಮಾಡುತ್ತೇವೆ. ಅಂದರೆ ನಾನೇ ಪ್ರಮುಖ ಅಂಗ ಅಂದಹಾಗಾಯಿತು.
ಆದರೆ ಇಲ್ಲಿ ಎಲ್ಲರೂ ಪ್ರಮುಖರೇ. ಒಂದು ಗಿಡ ಹುಟ್ಟಿ ಮರವಾಗಬೇಕಾದರೆ ಗಿಡದ ಎಲ್ಲ ಭಾಗಗಳೂ ಮುಖ್ಯ. ಯಾವ ಭಾಗವೂ ಹೆಚ್ಚಲ್ಲ, ಯಾವ ಭಾಗವೂ ಕಡಿಮೆಯೂ ಅಲ್ಲ. ಎಲ್ಲ ಭಾಗಗಳೂ ಅದರದರ ಕೆಲಸವನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಗಿಡ ಮರವಾಗುವುದು, ಹೂವು ಕಾಯಾಗಿ ಹಣ್ಣಾಗಲು ಸಾಧ್ಯ.
= ಅಭಯ್ ಪಿ. ನಾಡಿಗ್
3ನೇ ತರಗತಿ, ಶ್ರೀವಾಣಿ ವಿದ್ಯಾಕೇಂದ್ರ,  
ಮಾಗಡಿ ರಸ್ತೆ, ಬೆಂಗಳೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!