ಮುಲ್ಲಾ ನಸಿರುದ್ದೀನ ಒಂದು ದಂತಕಥೆಯೂ ಹೌದು, ಒಬ್ಬ ನಾಯಕನೂ ಹೌದು, ಒಂದು ಸಾಧಾರಣ ಪಾತ್ರವೂ ಹೌದು. ಮುಲ್ಲಾ ನಸಿರುದ್ದೀನರ ಹೆಡ್ಡತನಗಳು ನಗೆಯುಕ್ಕಿಸಿದರೂ ಅವರ ಸಕಾಲಿಕವಾದ ಚುರುಕು ಮಾತುಗಳು ಬೆರಗು ಹುಟ್ಟಿಸುತ್ತವೆ. ಮುಲ್ಲಾರ ರೋಚಕ ಕಥೆಗಳ ಅಪೂರ್ವ ಸಂಕಲನವೊಂದು ಹೊರಬಂದಿದೆ. ಶಿರೋಮಣಿ ದೇವಿ ಅವರು ಸಂಕಲಿಸಿರುವ ಕಥೆಗಳನ್ನು ಆರ್.ಪಿ. ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಲಾವಿದ ಸತೀಶ್ ಯಲ್ಲಾಪುರ ಆಕರ್ಷಕ ಮುಖಪುಟ ರಚಿಸಿದ್ದಾರೆ. ಒಳಪುಟಗಳಲ್ಲೂ ಅವರೇ ಬಿಡಿಸಿರುವ ಸರಳ, ಸುಂದರ ಚಿತ್ರಗಳಿವೆ.