ಯುವಜನ/ಮಕ್ಕಳು

ಮಂತ್ರಾಕ್ಷತೆಯ ಫಲ

ಒಂದು ಊರಿನಲ್ಲಿ ರಾಜನೊಬ್ಬನಿದ್ದ. ಅವನಿಗೊಬ್ಬಳು ಸುಂದರ ಮಗಳಿದ್ದಳು.

ಒಂದು ಊರಿನಲ್ಲಿ ರಾಜನೊಬ್ಬನಿದ್ದ. ಅವನಿಗೊಬ್ಬಳು ಸುಂದರ ಮಗಳಿದ್ದಳು. ಒಂದು ದಿನ ಸಂಜೆ ರಾಜಕುಮಾರಿ ಅರಮನೆಯ ಅಂಗಳದಲ್ಲಿ ಚೆಂಡಾಟವಾಡುತ್ತಿದ್ದಳು. ಅದು ರಾಣಿಯ ಮಗಳಿಗೆಂದೇ ಮಾಡಿಸಿದ್ದ ಅಪರೂಪದ ಚಿನ್ನದ ಚೆಂಡು. ಅರಮನೆಯ ಕೋಟೆಗೆ ತಾಗಿದಂತೆ ಒಂದು ಬಾವಿ ಇತ್ತು. ಚೆಂಡು ಬಾವಿಯೊಳಕ್ಕೆ ಬಿದ್ದುಬಿಟ್ಟಿತು. ಚೆಂಡು ಕಳೆದುಕೊಂಡ ರಾಜಕುಮಾರಿ ಅಳುತ್ತಾ ಬಾವಿಯೊಳಕ್ಕೆ ಕತ್ತು ಬಗ್ಗಿಸಿ ನೋಡುತ್ತಾ ನಿಂತಳು. ಹಾಗೆ ಅವಳು ಅಳುತ್ತಾ ಇದ್ದಾಗ ಒಂದು ಕಪ್ಪೆಯೊಂದು ನೀರ ಮೇಲೆ ಬಂದು 'ನನ್ನನ್ನು ನೀನು ಮದುವೆಯಾಗುವುದಾದರೆ ನಾನು ನಿನ್ನ ಚಿನ್ನದ ಚೆಂಡನ್ನು ಬಾವಿಯೊಳಗಿಂದ ಹುಡುಕಿ ತಂದು ಕೊಡುತ್ತೇನೆ' ಎಂದಿತು. ಇವಳು 'ಆಗಲಿ' ಎಂದಷ್ಟೇ ಹೇಳಿದಳು. ತಕ್ಷಣವೇ ಕಪ್ಪೆ ಬಾವಿಯೊಳಗೆ ಹುಡುಕಿ ಚೆಂಡನ್ನು ತಂದು ಒಪ್ಪಿಸಿತು. ಚೆಂಡನ್ನು ಹಿಡಿದುಕೊಂಡು ಸಂತೋಷದಿಂದ ಅರಮನೆಯೊಳಕ್ಕೆ ಓಡಿದಳು ರಾಜಕುಮಾರಿ.
ಕಷ್ಟ ಸಮಯದಲ್ಲಿ ಸಹಾಯ ಮಾಡಿದ ಕಪ್ಪೆ, ರಾಜನ ಬಳಿಗೆ ದೂರು ಹೇಳಲು ಬಂದಿತು. 'ನಿಮ್ಮ ಮಗಳು ನನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ ಬಾವಿಗೆ ಬಿದ್ದಿದ್ದ ಚಿನ್ನದ ಚೆಂಡನ್ನು ನನ್ನಿಂದ ತೆಗೆಸಿಕೊಂಡು ಈಗ ಅದರ ಸಮೇತ ಅರಮನೆಯೊಳಕ್ಕೆ ಓಡಿಹೊಗಿದ್ದಾಳೆ. ನನಗೆ ಇದರಿಂದ ಮೋಸವಾಗಿದೆ. ನ್ಯಾಯ ಕೊಡಿಸಿ' ಎಂದಿತು. 'ಹಾಗೇನು?' ಎಂದ ರಾಜ ಮಗಳನ್ನು ಕರೆದು ಕೇಳಿದ. ರಾಜಕುಮಾರಿ ಹೌದೆಂದಳು. ರಾಜ ಮಗಳನ್ನು ಕಪ್ಪೆ ಜತೆ ಮದುವೆ ಮಾಡಿದ. ಮದುವೆ ಮಂಟಪದಲ್ಲಿ ಕುಳಿತ ಕಪ್ಪೆ-ಮಗಳ ತಲೆ ಮೇಲೆ ಮಂತ್ರಾಕ್ಷತೆ ಉದುರಿಸಿದ. ತಕ್ಷಣವೇ ಕಪ್ಪೆ ರಾಜಕುಮಾರನ ರೂಪ ಧರಿಸಿತು! ಎಲ್ಲರೂ ಸಂತೋಷದಿಂದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡರು.
ಸ್ವಲ್ಪ ದಿನ ಸಂಸಾರ ಮಾಡಿದ ಮೇಲೆ ರಾಜಕುಮಾರನಿಗೆ ಏಕೋ ಸಂಸಾರ ಬೇಸರ ತಂದಿತು. ಅರಸನ ಬಳಿಗೆ ಹೋಗಿ 'ನಿಮ್ಮ ಮಗಳ 'ವಟ ವಟ' ಮಾತಿನ ಶಬ್ದ ಕೇಳಲಾಗುತ್ತಿಲ್ಲ. ನನಗೆ ಈಗಲೇ ಸಾಕಾಗಿಹೋಗಿದೆ. ನನ್ನ ಕಿವಿಗಳಂತೂ ಇನ್ನು ಮುಂದೆ ಆ ವಟವಟ ಶಬ್ದ ಕೇಳಿಸಿಕೊಳ್ಳಲು ತಯಾರಿಲ್ಲ. ಆದ್ದರಿಂದ ನನ್ನ ತಲೆಗೆ ಮಂತ್ರಾಕ್ಷತೆ ಹಾಕಿ, ನಾನು ಪುನಃ ಕಪ್ಪೆ ರೂಪ ಧರಿಸುವಂತೆ ಮಾಡಿ' ಎಂದ ರಾಜಕುಮಾರ. ರಾಜಕುಮಾರ ಖಡಾಖಂಡಿತವಾಗಿ ಹೇಳುವುದನ್ನು ಕೇಳಿದ ರಾಜ ಹಾಗೆಯೇ ಮಾಡಿದ. ಮಂತ್ರಾಕ್ಷತೆಯ ಫಲದಿಂದಾಗಿ ಮತ್ತೆ ರಾಜಕುಮಾರ ಕಪ್ಪೆ ಆಗಿಬಿಟ್ಟ. ಈಗ ರಾಜಕುಮಾರನ 'ವಟವಟ' ಶಬ್ದ ಕೇಳುತ್ತಾ ರಾಜಕುಮಾರಿ ತನ್ನ ಬಾಯನ್ನು ಮುಚ್ಚಿಕೊಳ್ಳುವಂತೆ ಆಯಿತು.
(ಜಾನಪದ ಕಥಾಸಂಗ್ರಹ)

- ಎ.ಕೆ. ಪಟ್ಟಾಭಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!