ಯುವಜನ/ಮಕ್ಕಳು

ಎಂಪ್ಲಾಯ್‌ಮೆಂಟ್ ಎಮರ್ಜೆನ್ಸಿ

350 ವಿಶ್ವವಿದ್ಯಾನಿಲಯಗಳು, 18 ಸಾವಿರ ಕಾಲೇಜುಗಳು, 6 ಸಾವಿರ ಐಟಿಐಗಳು...
ಇವುಗಳಿಂದ ಪ್ರತಿವರ್ಷ ಹೊರಬರುತ್ತಿರುವ ತಾಂತ್ರಿಕ ಪದವೀಧರ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ 5 ಲಕ್ಷ ದಾಟುತ್ತದೆ. ಕಾಲೇಜು ಮೆಟ್ಟಿಲು ದಾಟುತ್ತಿದ್ದಂತೆಯೇ ಇವರನ್ನೆಲ್ಲ ಉದ್ಯೋಗದಾತರು ಕೈಬೀಸಿ ಕರೆಯುತ್ತಾರೆ ಅಂದುಕೊಂಡಿರಾ? ಖಂಡಿತಾ ಇಲ್ಲ. ಉದ್ಯೋಗದ ವಿಚಾರಕ್ಕೆ ಬಂದರೆ ಭಾರತವು 'ತುರ್ತು ಪರಿಸ್ಥಿತಿ'ಯನ್ನು ಎದುರಿಸುತ್ತಿದೆ ಎಂದೇ ಹೇಳಬಹುದು. ಏಕೆಂದರೆ, ಕಾಲೇಜಿನಿಂದ ಹೊರಬರುವ ಶೇ.75ರಷ್ಟು ಮಂದಿಗೆ ಸುಲಭವಾಗಿ ಕೆಲಸ ಸಿಗುವುದಿಲ್ಲ.

ಉದ್ಯೋಗದ ಬೇಟೆ
ಕಷ್ಟ ಪಟ್ಟು ಪದವಿ ಪಡೆದರೂ ಕೆಲಸ ಮಾತ್ರ ಸಿಗುತ್ತಿಲ್ಲ ಎಂದು ಕೊರಗುವ ಯುವಪೀಳಿಗೆಗೆ ನಮ್ಮಲ್ಲಿ ಬರವಿಲ್ಲ. ಒಂದು ಹುದ್ದೆಗಾಗಿ ಸಂದರ್ಶನ ನಡೆದರೂ ಸಾವಿರಾರು ಮಂದಿ ಸರತಿ ಸಾಲಲ್ಲಿ ನಿಲ್ಲುವುದು ಸಾಮಾನ್ಯವಾಗಿಬಿಟ್ಟಿದೆ. ಉದ್ಯೋಗ ಅರಸುವ ವ್ಯಕ್ತಿಯ ಜ್ಞಾನ ಮತ್ತು ಆತನ ವೇತನದ ನಿರೀಕ್ಷೆ ಮ್ಯಾಚ್ ಆಗುವುದೇ ಇಲ್ಲ. ಇಂತಹ ಪರಿಸ್ಥಿತಿಗೆ ಕಾರಣವೇನು?

=     ಶಿಕ್ಷಣದ ಜತೆಗೆ ಕೌಶಲ್ಯದ ಕೊರತೆ
=     ಶೈಕ್ಷಣಿಕ ಗುಣಮಟ್ಟ ಕಳಪೆಯಾಗಿರುವುದು

ಪರಿಹಾರವೇನು?
=     ಶೈಕ್ಷಣಿಕ ವ್ಯವಸ್ಥೆ ಆಧುನೀಕರಣ
=     ಕೃಷಿ, ಬಯೋಟೆಕ್ನಾಲಜಿ, ಮಾನವ ಸಂಪನ್ಮೂಲ... ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಹೆಚ್ಚೆಚ್ಚು ಶಿಕ್ಷಣ ಸಂಸ್ಥೆಗಳ ಸ್ಥಾಪನೆ
=     ಸ್ಪರ್ಧೆ ಆಧಾರಿತ ಕೋರ್ಸ್‌ಗಳ ಪರಿಚಯ
=     ಉದ್ಯೋಗದಾತರ, ಕಂಪನಿಗಳ ಅಗತ್ಯಕ್ಕನುಗುಣವಾಗಿ ಕೋರ್ಸ್‌ಗಳ ಆರಂಭ
=     ಇಂದಿನ ಅವಶ್ಯಕತೆಗಳಿಗೆ ತಕ್ಕಂತೆ ಶಿಕ್ಷಕರಿಗೆ ತರಬೇತಿ

ಉದ್ಯೋಗ ಪಡೆಯಲು ವಿದ್ಯಾರ್ಥಿಗಳಿಗೆ ಅತಿ ಅಗತ್ಯವಾದ ಕೌಶಲ್ಯವೇನಿರಬೇಕೋ ಅದನ್ನು ನೀಡುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಇದನ್ನು ಆದಷ್ಟು ಬೇಗನೆ ಸರಿಪಡಿಸಬೇಕಾದ್ದು ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿ. ವಿದ್ಯಾರ್ಥಿಗಳೂ ಅಷ್ಟೆ. ಕೇವಲ ಪುಸ್ತಕದ ಬದನೆಕಾಯಿ ಆಗುವ ಬದಲು ಪ್ರವೇಶಿಸಲಿಚ್ಛಿಸುವ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಇಂಡಸ್ಟ್ರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದುವುದು, ಹೊಸ ಟ್ರೆಂಡ್‌ಗಳ ಬಗ್ಗೆ ಮಾಹಿತಿ ಕಲೆಹಾಕುವುದೂ ಕೂಡ ನಿಮ್ಮನ್ನು ಸುಲಭವಾಗಿ ಉದ್ಯೋಗದ ಅವಕಾಶದತ್ತ ಕೊಂಡೊಯ್ಯುತ್ತದೆ.

- ಸಅದಿಯಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video