ಯುವಜನ/ಮಕ್ಕಳು

ಮಿಮಿಕ್ರಿ ಹಕ್ಕಿ (Lyre bird)

ಲೈರ್ ಪಕ್ಷಿ ಆಸ್ಟ್ರೇಲಿಯಾ ಮೂಲದ್ದು. ಮಿಮಿಕ್ರಿ ಮಾಡುವುದರಿಂದಲೇ ಪ್ರಸಿದ್ಧವಾಗಿರುವ ಈ ಹಕ್ಕಿ ತಾನು ವಾಸಿಸುವ ಪ್ರದೇಶದಲ್ಲಿ ಕಂಡುಬರುವ ಇತರ ಪ್ರಾಣಿ-ಪಕ್ಷಿಗಳ ಶಬ್ದವನ್ನು ಸಲೀಸಾಗಿ ಅನುಕರಣೆ ಮಾಡುತ್ತದೆ! ಈ ಅನುಕರಣೆ ಎಷ್ಟು ಸ್ಪಷ್ಟವಾಗಿರುತ್ತದೆಂದರೆ, ಸ್ವತಃ ಆ ಪ್ರಾಣಿ-ಪಕ್ಷಿಗಳೇ ಕೂಗಿದಂತಿರುತ್ತದೆ. ಇದಲ್ಲದೆ ವಾಹನಗಳ ಎಂಜಿನ್ ಶಬ್ದ, ಸೈರನ್ ಶಬ್ದ, ಗುಂಡಿನ ಶಬ್ದ,ಚಿಕ್ಕ ಮಕ್ಕಳು ಅಳುವ, ಅಷ್ಟೇ ಅಲ್ಲ ನೀವು ಮಾತನಾಡಿದಂತೆ ಮಾತನಾಡುವ ಸಾಮರ್ಥ್ಯವನ್ನೂ ಹೊಂದಿದೆ. ಇದು ಕೊಳಲು ನುಡಿದಂತೆಯೇ ಸ್ವರ ಹೊರಡಿಸಬಲ್ಲದು ಎಂಬ ಅಚ್ಚರಿಯನ್ನು 1930ರಲ್ಲಿಯೇ ಪರಿಸರ ತಜ್ಞರು ಸಂಶೋಧಿಸಿದ್ದರು.
ಇದಕ್ಕೆ ಕಾರಣ ನಮಗೆ ಧ್ವನಿಪೆಟ್ಟಿಗೆ ಇರುವ ಹಾಗೆ ಇವಕ್ಕೆ 'ಸಿರಿಂಕ್ಸ್‌' ಎಂಬ ತಂತುಗಳಿಂದ ರಚಿತವಾದ ಭಾಗವಿದೆ. ಇದು ಸುಮಧುರ ಧ್ವನಿ ಹೊರಡಿಸಲು ಸಹಾಯಕವಾಗುತ್ತದೆ. ಲೈರ್ ಪಕ್ಷಿಗಳಲ್ಲಿರುವ ಸಿರಿಂಕ್ಸ್ ಅತೀ ಸಂಕೀರ್ಣ ಸ್ನಾಯುಗಳಿಂದ ಕೂಡಿದೆ. ಹೀಗಾಗಿ ಇದು ಇತರ ಪಕ್ಷಿಗಳಲ್ಲಿರುವ ಸಿರಿಂಕ್ಸ್‌ಗಿಂತ ಭಿನ್ನವಾಗಿದೆ. ಈ ರೀತಿಯ ಅನುಕರಣೆಯಿಂದಾಗಿ ಅವು ಶತ್ರುಗಳಿಂದ ಸುಲಭವಾಗಿ ಪಾರಾಗಬಲ್ಲವು.
ಲೈರ್ ಗಂಡು-ಹೆಣ್ಣು ಎರಡೂ ಹಕ್ಕಿಗಳಲ್ಲೂ ಮಿಮಿಕ್ರಿ ಮಾಡುವ ಸಾಮರ್ಥ್ಯವಿದೆಯಾದರೂ ಇದರಲ್ಲಿ ಜಾಸ್ತಿ ಕೇಳಿಬರುವುದು ಗಂಡು ಹಕ್ಕಿಯ ಕೂಗೇ! ಲೈರ್ ಹಕ್ಕಿ ನೋಡಲು ಸುಂದರವಾಗಿ, ಅದ್ಭುತವಾಗಿ ಕಾಣುತ್ತದೆ. ಹಾಗಾಗಿ ಇದು ಚಿತ್ರ ಕಲಾವಿದರನ್ನು ಹೆಚ್ಚು ಆಕರ್ಷಿಸಿದ ಪಕ್ಷಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ