ಯುವಜನ/ಮಕ್ಕಳು

ಟೀವಿ ಠೀವಿ

ಕನ್ನಡದ ಸುದ್ದಿ ವಾಹಿನಿಗಳ ಪಟ್ಟಿಗೆ ಮತ್ತೊಂದು ಚಾನೆಲ್ ಸೇರ್ಪಡೆ. ಅದು ಪುತ್ತೂರಿನ 'ವಿಕಸನ ನ್ಯೂಸ್‌'. ಇದು ಉಳಿದೆಲ್ಲಾ ವಾರ್ತಾ ವಾಹಿನಿಗಳಿಗಿಂತ ಭಿನ್ನ. ಹೇಗೆ?


ಪುತ್ತೂರಿನ ವಿವೇಕಾನಂದ ಕಾಲೇಜು ಇರುವುದೇ ಹಾಗೆ. ಸದಾ ಹೊಸತನಕ್ಕೆ ತುಡಿಯುವ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ವರ್ಷವಿಡೀ ಒಂದಿಲ್ಲೊಂದು ಸಾಂಸ್ಕೃತಿಕ, ಸಾಹಿತ್ಯಿಕ ಪ್ರಯೋಗಗಳಲ್ಲಿ ಬ್ಯುಸಿಯಾಗಿರುತ್ತದೆ. ಇಲ್ಲಿನ ವಿವಿಧ ವಿಭಾಗಗಳೂ ಅಷ್ಟೆ. ಹೊಸ ಪ್ರಯೋಗಗಳ ವಿಚಾರದಲ್ಲಿ ಸದಾ ಮುಂದು. ಪತ್ರಿಕೋದ್ಯಮ ವಿಭಾಗಕ್ಕಂತೂ ಹೊಸ ಪ್ರಯೋಗಗಳೆಂದರೆ ಅಚ್ಚುಮೆಚ್ಚು. ಇದಕ್ಕೆ 'ವಿಕಸನ ನ್ಯೂಸ್‌' ಉತ್ತಮ ಉದಾಹರಣೆ.
'ವಿಕಸನ ನ್ಯೂಸ್‌' ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿಯೇ ಆರಂಭವಾದ ವಾಹಿನಿ. ಇದರ ಮೂಲಕ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ ಜಗತ್ತಿನ ಕಾರ್ಯನಿರ್ವಹಣೆಯ ಪರಿಚಯ ಆಗುವುದಷ್ಟೇ ಅಲ್ಲದೆ ಭವಿಷ್ಯದಲ್ಲಿ ಎದುರಾಗುವ ಸವಾಲುಗಳಿಗೆ ಈಗಲೇ ಸಿದ್ಧತೆ ನಡೆಸಲು ನೆರವೂ ಸಿಗುತ್ತಿದೆ. ಅನೇಕ ಕೊರತೆಗಳ ನಡುವೆಯೂ ಯಶಸ್ವಿ ಕಾಣುತ್ತಿರುವ ಈ ಪ್ರಯೋಗ ಇತರೆ ಕಾಲೇಜುಗಳಿಗೂ ಮಾದರಿ ಆಗುತ್ತಿದೆ.
'ವಿಕಸನ ನ್ಯೂಸ್‌'ನ ಸಂಪೂರ್ಣ ಜವಾಬ್ದಾರಿ ಅಂತಿಮ ಪತ್ರಿಕೋದ್ಯಮ ವಿದ್ಯಾರ್ಥಿಗಳದು. ಹಾಗಂತ ಈ ಟೀವಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿಲ್ಲ. ಇತರೆ ವಿಭಾಗದ ವಿದ್ಯಾರ್ಥಿಗಳೂ ವಿಡಿಯೋ, ಶೂಟಿಂಗ್, ಸ್ಕ್ರಿಪ್ಟ್ ಎಲ್ಲ ಕೆಲಸದಲ್ಲೂ ತೊಡಗಿಕೊಳ್ಳಲು ಅವಕಾಶವುಂಟು.
ಟಿ.ವಿಗೆ ಬೇಕಾಗುವ ಅತ್ಯಾಧುನಿಕ ಕ್ಯಾಮರಾವಾಗಲಿ, ಸುಸಜ್ಜಿತ ಸ್ಟುಡಿಯೋವಾಗಲಿ ಕಾಲೇಜಿನಲ್ಲಿ ಇಲ್ಲ. ಆದರೂ, ಕನಿಷ್ಠ ಸೌಲಭ್ಯಗಳಲ್ಲೇ 'ವಿಕಸನ ನ್ಯೂಸ್‌' ಹೊಸತನ ಮೆರೆಯುತ್ತಿದೆ. ವಿಭಾಗದ ಮುಖ್ಯಸ್ಥರಾದ ರಾಕೇಶ್ ಕುಮಾರ್ ಕಮ್ಮಜೆ ಮತ್ತು ಸ್ವಾತಿ ಭಟ್ ಮಾರ್ಗದರ್ಶನ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಚ್.ಜಿ, ಇಂಗ್ಲಿಷ್ ಪ್ರಾಧ್ಯಾಪಕ ಗಣೇಶ್ ಪ್ರಸಾದ್ ಬೆಂಬಲ ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿ ನೀಡುತ್ತಿದೆ. ಪ್ರಾಂಶುಪಾಲರಾದ ಡಾ.ಎಚ್. ಮಾಧವ ಭಟ್ ಅವರಂತೂ ವಿದ್ಯಾರ್ಥಿಗಳ ಈ ಪ್ರಯೋಗಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ವಿದ್ಯಾರ್ಥಿಗಳ ಭವ್ಯ ಬದುಕಿಗೆ ಭದ್ರ ಬುನಾದಿ ಹಾಕಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.
ಇದೇ ಕಾರಣಕ್ಕೆ ಕೈಯಲ್ಲೊಂದು 'ವಿಕಸನ' ಲೋಗೋ ಇರುವ ಮೈಕ್ರೋಫೋನ್ ಹಿಡಿದು ಕ್ಯಾಮೆರಾ ಮ್ಯಾನ್‌ನೊಂದಿಗೆ ಹೆಮ್ಮೆಯಿಂದ ಕಾಲೇಜು ತುಂಬ ಓಡಾಡುತ್ತಿದ್ದಾರೆ ಭಾವಿ ಪತ್ರಕರ್ತರು.

=  -ಗಣೇಶ ಉಕ್ಕಿನಡ್ಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು