ಯುವಜನ/ಮಕ್ಕಳು

ನಕ್ಷತ್ರ ಎಣಿಸಿ

ನೀಲಿ ಗಗನವನ್ನು ದಿಟ್ಟಿಸೋದು, ನಕ್ಷತ್ರಗಳನ್ನು ಎಣಿಸೋದು ಅನೇಕರ ಹವ್ಯಾಸ. ಒಂದು ವೇಳೆ ಇದೇ ನಿಮ್ಮ ಉದ್ಯೋಗವಾಗಿ ಬಿಟ್ಟರೆ... ವ್ಹಾವ್...ಹೆಂಗಿರುತ್ತೆ ಅಲ್ವಾ? ಖಗೋಳ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡರೆ ಇಂಥ ಅವಕಾಶ ನಿಮ್ಮದಾಗಬಹುದು. ಖಗೋಳ ತಜ್ಞರು ಎಂದರೆ ಚಂದ್ರ, ಸೂರ್ಯ, ಗೆಲಾಕ್ಸಿ ಹೀಗೆ ಆಕಾಶಕಾಯಗಳ ಉಗಮ ಮತ್ತು ಚಲನೆಯನ್ನು ಅಧ್ಯಯನ ಮಾಡುವ ವಿಜ್ಞಾನಿಗಳು. ಸಾಮಾನ್ಯವಾಗಿ ಖಗೋಳ ತಜ್ಞರ ವೃತ್ತಿ ಎರಡು ರೀತಿಯಲ್ಲಿರುತ್ತದೆ. ಒಂದು ಖಗೋಳಶಾಸ್ತ್ರ (ಸಿದ್ಧಾಂತದ ಕುರಿತು), ಇನ್ನೊಂದು ಖಗೋಳ ವೀಕ್ಷಣೆಗೆ (ಆಕಾಶಕಾಯಗಳನ್ನು ಗಮನಿಸುವುದು) ಸಂಬಂಧಿಸಿದ್ದು. ಖಗೋಳ ವೀಕ್ಷಕರು ಆಧುನಿಕ ಟೆಲಿಸ್ಕೋಪ್‌ನಂತಹ ಸಾಧನಗಳ ಮೂಲಕ ಚಂದ್ರ, ಸೂರ್ಯ, ನಕ್ಷತ್ರ, ಗ್ರಹಗಳಲ್ಲಿನ ಬದಲಾವಣೆ, ಹೊಸ ನಕ್ಷತ್ರಗಳ ಉದಯ, ಸಾವುಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಆದರೆ, ಖಗೋಳ ಶಾಸ್ತ್ರದ ಕುರಿತು ಆಸಕ್ತಿ ಇರುವವರು ಖಭೌತ ವಿಜ್ಞಾನದ ಕುರಿತು ಅಧ್ಯಯನ ನಡೆಸುತ್ತಾರೆ. ಈ ಮೂಲಕ ಆಕಾಶಕಾಯಗಳ ಹುಟ್ಟು, ಸಾವಿನ ಕುರಿತು ವಿಶ್ಲೇಷಣೆ ನಡೆಸುತ್ತಾರೆ.

ಅವಕಾಶ ಹಲವು...
ಖಗೋಳವಿಜ್ಞಾನ ಶಿಕ್ಷಣ ಪೂರೈಸಿದವರಿಗೆ ಉದ್ಯೋಗಾವಕಾಶಗಳ ಕೊರತೆ ಇಲ್ಲ. ದೇಶದಲ್ಲಿ ಹಲವು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ, ಜತೆಗೆ ವಿದೇಶಗಳಲ್ಲೂ ಸಾಕಷ್ಟು ಅವಕಾಶ ಕೈಬೀಸಿ ಕರೆಯುತ್ತದೆ. ಈ ಶಿಕ್ಷಣ ಪಡೆದವರು ವಿಶ್ವವಿದ್ಯಾಲಯಗಳಲ್ಲೂ ಶಿಕ್ಷಕರಾಗಿ ಸೇವೆ ಸಲ್ಲಿಸಬಹುದು.

ಅರ್ಹತೆ ಏನು?

  • ಅನ್ವಯಿಕ ಗಣಿತಶಾಸ್ತ್ರ ಮತ್ತು ಭೌತವಿಜ್ಞಾನದ ಕುರಿತು ಜ್ಞಾನ.
  • ಕಂಪ್ಯೂಟರ್ ಬಳಸಿಕೊಂಡು ದೊಡ್ಡ ಪ್ರಮಾಣದ ಡಾಟಾಗಳನ್ನು ವಿಶ್ಲೇಷಿಸುವ ಸಾಮರ್ಥ್ಯ.
  • ಸಂಖ್ಯಾಶಾಸ್ತ್ರದ ಜ್ಞಾನ, ತಾಳ್ಮೆ ಮತ್ತು ಉತ್ಸಾಹ
ಶೈಕ್ಷಣಿಕ ಅರ್ಹತೆ
  • ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಅಭ್ಯಸಿಸಿರಬೇಕು.
  • ಪ್ರಾಯೋಗಿಕ ಖಗೋಳಶಾಸ್ತ್ರ ಶಿಕ್ಷಣಕ್ಕಾಗಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಅಥವಾ ಎಲೆಕ್ಟ್ರಿಕಲ್ ಕಮ್ಯುನಿಕೇಷನ್‌ನಲ್ಲಿ ಬಿಇ ಅಥವಾ ಬಿ.ಟೆಕ್ ಮಾಡಿರಬೇಕು.
ಕಾಲೇಜುಗಳು
  • ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್- ಬೆಂಗಳೂರು
  • ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್- ಬೆಂಗಳೂರು
  • ರಾಮನ್ ರಿಸರ್ಚ್ ಇನ್ಸ್‌ಟಿಟ್ಯೂಟ್- ಬೆಂಗಳೂರು
  • ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್- ಪುಣೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video