ಯುವಜನ/ಮಕ್ಕಳು

ಚಾತಕ ಪಕ್ಷಿ/ಪಪೀಹಾ

ಚಾತಕ ಪಕ್ಷಿ ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಕಾಣಸಿಗುತ್ತದೆ. ಮಳೆಗೂ ಚಾತಕಪಕ್ಷಿಗೂ ಅವಿನಾಭಾವ ಸಂಬಂಧ. ಇಂಗ್ಲಿಷ್‌ನಲ್ಲಿ Pied Cuckoo, Jacobin Cuckoo, or Pied Crested Cuckoo ಎಂದು ಕರೆಯುತ್ತಾರೆ. ಇದನ್ನು ಪಪೀಹಾ ಅಂತಲೂ ಹೇಳುತ್ತಾರೆ. ಜಾನಪದದಲ್ಲಿ ಮತ್ತು ಪುರಾಣಗಳಲ್ಲಿ ಈ ಪಕ್ಷಿಗೆ ವಿಶೇಷ ಸ್ಥಾನವಿದೆ. ಮಳೆಗಾಲದ ನಾಲ್ಕು ಹನಿಗಳಿಗೆ ಈ ಚಾತಕಪಕ್ಷಿ ನಿಜಕ್ಕೂ ಚಾತಕಪಕ್ಷಿಯಂತೆ ಕಾದು ಕುಳಿತಿರುತ್ತದೆ. ಮೇ ತಿಂಗಳ ಕೊನೆಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಚಾತಕಪಕ್ಷಿ ಕಣ್ಣಿಗೆ ಬೀಳುತ್ತದೆ. ಇದು ಮನುಷ್ಯರಿಗೆ ಕಾಣಿಸಿಕೊಂಡರೆ ಆ ಭಾಗದಲ್ಲಿ ಖಂಡಿತ ಮಳೆಯಾಗುತ್ತದೆ ಎನ್ನುತ್ತದೆ ಜನಪದ.
ಚಾತಕಪಕ್ಷಿಗೆ ಅದರ ತಲೆಯ ಮೇಲೆ ಕೊಕ್ಕೆ ತರಹ ಪುಕ್ಕ ಇರುತ್ತದೆ. ಆ ಕೊಕ್ಕೆಯಲ್ಲಿಯೇ ಅದು ಜೀವಜಲವನ್ನು ಸಂಗ್ರಹಿಸಿಟ್ಟುಕೊಂಡು ಹನಿ ಹನಿ ನೀರನ್ನು ಕುಡಿಯುವುದು. ಮೇಲಿನಿಂದ ಬೀಳುವ ಮಳೆಯ ನೀರೇ ಚಾತಕಪಕ್ಷಿಗೆ ಆಧಾರ. ಏಕೆಂದರೆ ಇದಕ್ಕೆ ಕೆರೆ ನೀರು, ನದಿ ನೀರು ತರಹದ ನಿಂತ ನೀರನ್ನು ತನ್ನ ಕೊಕ್ಕಿನಿಂದ ಕುಡಿಯಲು ಆಗದು. ನೀರಿಲ್ಲದೆ ಎಷ್ಟೋ ದಿನಗಳವರೆಗೆ ಬದುಕಬಲ್ಲದು ಇದು. ಚಾತಕ ಪಕ್ಷಿಯ ಬಗ್ಗೆ ಕಾಳಿದಾಸ ತನ್ನ ಮೇಘದೂತದಲ್ಲಿ ಪ್ರಸ್ತಾಪಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!