ಬಸ್ಯಾ, ನಿಂಗ, ಸಂಗ್ಯಾ ಬರಮ ಗೆಳೆಯರು
ಬೇಸಿಗೆ ರಜೆಯ ಕಾಲದಲಿ ಸೇರುವರು
ವಿಧ ವಿಧ ಆಟವ ನಿತ್ಯವು
ಆಡಿಪಾಡಿ ಕಾಲಕಳೆಯುವರು..
ಸೈಕಲ್ ಹತ್ತಿ ಊರನು ಸುತ್ತಿ
ಗಲಿಗಲಿ ತಿರುಗುವರು
ನದಿಗೆ ಹೋಗಿ ಈಜನು ಕಲಿತು
ರಜೆಯಕಾಲವ ಕಳೆಯುವರು..
ಅಜ್ಜಿಯು ಕೊಟ್ಟ ತಿಂಡಿಯ ತಿಂದು
ಹರುಷದಿ ಕಾಲವ ಕಳೆಯುವರು
ಅಜ್ಜನಿಂದ ಹಣವನು ಪಡೆದು
ಐಸ್‌ಕ್ರೀಂ ಸವಿಯನು ಸವಿಯುವರು.
- ಚಂದ್ರಶೇಖರ ಶಿ. ಹಿರೇಮಠ