ಬದುಕಿಗಾರ್ ನಾಯಕರು, ಏಕನೊ ಅನೇಕರೋ?
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? ॥
ಕುದುರುವುದದೆಂತು ಈಯವ್ಯವಸ್ಥೆಯ ಪಾಡು?
ಅದಿಗುದಿಯೆ ಗತಿಯೇನೊ? - ಮಂಕುತಿಮ್ಮ ॥
(ಈ ಬದುಕಿಗೆ ನಾಯಕರು ಯಾರು? ಒಬ್ಬನೇ ಒಬ್ಬನೋ ಅಥವಾ ಬಹುಮಂದಿ ಇದ್ದಾರೆಯೋ? ವಿಧಿಯೋ, ಪುರುಷ ಪ್ರಯತ್ನವೋ? ಧರ್ಮದ ಶಕ್ತಿಯೋ ಅಥವಾ ಒಂದು ಅಂಧ ಬಲವೋ? ಈ ಅವ್ಯವಸ್ಥೆಯ ಪಾಡು ಸರಿಯಾಗುವುದು (ಕುದುರುವುದು) ಹೇಗೆ? ಇಲ್ಲ, ಈ ತಳಮಳದಲ್ಲಿಯೇ (ಅದಿಗುದಿ) ನಾವು ಯಾವಾಗಲೂ ಇರಬೇಕೆ?)