ಪ್ರತಿಯೊಂದಕ್ಕೂ ಮಿತಿ ಅನ್ನೋದು ಇರುತ್ತದೆ. ಅದನ್ನು ಮೀರಿದರೆ ಅಪಾಯ ತಪ್ಪಿದ್ದಲ್ಲ ಎನ್ನುವುದು ತಿಳಿದವರ ಮಾತು. ಈ ಸತ್ಯ ಗೊತ್ತಿದ್ದರೂ ನಮ್ಮಲ್ಲಿ ಕೆಲವರು ಮಿತಿ ಮೀರಲು ಹೋಗಿ ಏನೇನೋ ಎಡವಟ್ಟು ಮಾಡಿಕೊಳ್ತಾರೆ....
ಈ ಪೀಠಿಕೆ ಯಾಕೆ ಅಂತೀರಾ? ಇಂಟರ್ನೆಟ್ ಅಡಿಕ್ಷನ್‌ಗಾಗಿ. ಇತ್ತೀಚಿನ ದಿನಗಳಲ್ಲಿ ಅಡಿಕ್ಷನ್ ಯುವಜನರನ್ನು ಗಂಭೀರವಾಗಿ ಕಾಡುವ ರೋಗಗಳ ಸಾಲಿಗೆ ಸೇರಿದೆ. ಕೆಲ ವರ್ಷಗಳ ಹಿಂದೆ ಕೇವಲ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಿಗಷ್ಟೇ ಸೀಮಿತವಾಗಿದ್ದ ಈ ಅಡಿಕ್ಷನ್ ಸ್ಮಾರ್ಟ್‌ಫೋನ್‌ಗಳ ಕೃಪೆಯಿಂದಾಗಿ ಈಗ ಅಂಗೈಗೂ ಬಂದು ಬಿಟ್ಟಿದೆ.
ಈ ಇಂಟರ್ನೆಟ್ ಗೀಳು ಅಂದ್ರೇನು ಗೊತ್ತಾ?
ಅಡ್ಡಪರಿಣಾಮ ಉಂಟಾಗುವ ರೀತಿಯಲ್ಲಿ ಯಾವುದೇ ವಸ್ತುವನ್ನು ಬಿಡದೇ ಚಟಕ್ಕೆ ಬಿದ್ದವರಂತೆ ಉಪಯೋಗಿಸುವುದಕ್ಕೆ ವಿಶಾಲ ಅರ್ಥದಲ್ಲಿ ಗೀಳು ಅಂತ ಕರೆಯಬಹುದು. ಇಂಟರ್ನೆಟ್ ಅನ್ನೇ ಚಟಕ್ಕೆ ಬಿದ್ದವರಂತೆ ಉಪಯೋಗಿಸುವುದಕ್ಕೆ ಇಂಟರ್ನೆಟ್ ಅಡಿಕ್ಷನ್ ಎನ್ನುತ್ತಾರೆ. ಇದನ್ನು ವೈದ್ಯರು ಐಎಡಿ (ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್) ಎಂದೂ ಕರೆಯುತ್ತಾರೆ.
ಯುವಜನರನ್ನು ನಿಧಾನವಾಗಿ ಆವರಿಸುತ್ತಿರುವ ಐಎಡಿ ಏನೇನು ಮಾಡಿದೆ, ಇದರಿಂದ ಏನೇನಾಗಬಹುದು, ಈ ಗೀಳು ಯಾವ ಪ್ರಮಾಣದಲ್ಲಿದೆ ಎಂಬ ಬಗ್ಗೆ ಇಲ್ಲೊಂದಿಷ್ಟು ಮಾಹಿತಿಗಳಿವೆ.
ಐಎಡಿ ಹೇಗೆ ಉಂಟಾಗುತ್ತದೆ?
- ಸಾಮಾಜಿಕ ಜಾಲತಾಣಗಳ ಅತಿ ಹೆಚ್ಚು ಬಳಕೆ
- ಅತಿಯಾದ ಆನ್‌ಲೈನ್ ಮ್ಯಾಪಿಂಗ್
- ಆನ್‌ಲೈನ್ ಜೂಜಿನ ಹುಚ್ಚು
- ಅತಿ ಹೆಚ್ಚು ಬ್ಲಾಗ್‌ಗಳ ಬಳಕೆ
- ವಿಡಿಯೋ ಮತ್ತು ನೀಲಿ ಚಿತ್ರಗಳ ವೀಕ್ಷಣೆ ಹುಚ್ಚು
- ಆನ್‌ಲೈನ್ ಗೇಮ್‌ಗಳ ಆಟ
- ಅಂತರ್ಜಾಲ ಗೀಳು ಮತ್ತು ವಯೋವಾನ
- ಒಟ್ಟಾರೆ ಗೀಳು ಹಚ್ಚಿಕೊಂಡವರು- ಶೇ. 61
- ಫೇಸ್‌ಬುಕ್ ಗೀಳು ಹಚ್ಚಿಕೊಂಡವರು- ಶೇ. 24
ಗೀಳಿನಿಂದ ಏನಾಗುತ್ತೆ?
- ಅತಿ ಹೆಚ್ಚು ಇಂಟರ್ನೆಟ್ ಬಳಕೆಯಿಂದ ಮೆದುಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು
- ಸಮಯ ಹಾಳು
- ಕಂಪ್ಯೂಟರ್ ಸಿಗದೇ ಇದ್ದಾಗ ನಿರಾಸೆ
- ಸಾರ್ವಜನಿಕ ಸಂಪರ್ಕದಿಂದ ದೂರ, ಒಬ್ಬಂಟಿತನ
- ತಾಳ್ಮೆ ಕಳೆದುಕೊಳ್ಳುವಿಕೆ, ಚೆನ್ನಾಗಿರುವ ಕಂಪ್ಯೂಟರ್ ಬೇಕು ಎಂಬ ಆಸೆ
ಸಮೀಕ್ಷೆಗಳು ಏನು ಹೇಳುತ್ತವೆ?
ಉದ್ದೇಶಕ್ಕಿಂತ ಹೆಚ್ಚು ಹೊತ್ತು ಇಂಟರ್ನೆಟ್ ಮುಂದೆ ಕುಳಿತಿದ್ದೀರಾ?
ಕೆಲವೊಂದು ವೇಳೆ ಸ್ನೇಹಿತರ ಜೊತೆ ಕಾಲ ಕಳೆಯುವುದಕ್ಕಿಂತ ಹೆಚ್ಚು ಹೊತ್ತು ಆನ್‌ಲೈನ್ ಮುಂದೆ ಕುಳಿತಿದ್ದೀರಾ?
ಇಂಟರ್ನೆಟ್‌ಗಾಗಿ ರಾತ್ರಿ ನಿದ್ರೆ ಬಿಡ್ತೀರಾ?
ಇಂಟರ್ನೆಟ್ ಗೀಳಿನಿಂದಾಗಿ ನಿಮ್ಮ ಕಾರ್ಯಕ್ಷಮತೆ ಕಡಿಮೆಯಾಗಿದೆಯೇ?
ಬೇರೆ ಏನೇ ಕೆಲಸವಿದ್ದರೂ ಬಿಟ್ಟು ಇ-ಮೇಲ್ ಚೆಕ್ ಮಾಡ್ತೀರಾ?
ಹೀಗಿದೆ ಸಂಬಂಧ
ಅತಿ ಇಂಟರ್ನೆಟ್ ಬಳಕೆದಾರರ ನೇತ್ಯಾತ್ಮಕ ದಾರಿ
ಅನಾಹುತಕಾರಿ ಗೇಮ್
- ರೋಹಿಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics