ಪರೀಕ್ಷೆ ಭಯ ಬಿಟ್ಹಾಕಿ
ಮಕ್ಕಳೇ,
ಪರೀಕ್ಷೆ ಬಂತಲ್ಲವೆ? ಚೆನ್ನಾಗಿ ಅಭ್ಯಾಸ ಮಾಡಿ ಸಿದ್ಧರಾಗಿದ್ದೀರಿ. ಆದರೂ ಸಣ್ಣದೊಂದು ಅಳುಕು ಕಾಡುತ್ತಿರಬಹುದು. ಅದನ್ನೆಲ್ಲ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಹೊರಡಿ.
- ಪಬ್ಲಿಕ್ ಎಕ್ಸಾಮ್ ಬರೆಯುವವರು ಹಿಂದಿನ ದಿನವೇ ಪರೀಕ್ಷಾ ಕೇಂದ್ರಕ್ಕೆ ಹೋಗಿ ನಿಮ್ಮ ಆಸನ ಯಾವ ಕೊಠಡಿಯಲ್ಲಿ ಬರುತ್ತದೆ ಎನ್ನುವುದನ್ನು ನೋಡಿಕೊಳ್ಳಿ.
- 15 ನಿಮಿಷ ಮುಂಚಿತವಾಗಿ ಪರೀಕ್ಷಾ ಕೊಠಡಿಗೆ ಹೋಗಿ. ಸಹಪಾಠಿಗಳೊಂದಿಗೆ ಚರ್ಚೆಗೆ ನಿಲ್ಲಬೇಡಿ.
- ಪ್ರಶ್ನೆಪತ್ರಿಕೆಯನ್ನೊಮ್ಮೆ ಮೇಲಿಂದ ಕೆಳಗಿನವರೆಗೂ ಓದಿ. ಇದಕ್ಕಾಗಿಯೇ ನಿಮಗೆ 15 ನಿಮಿಷ ಕಾಲಾವಕಾಶವಿರುತ್ತದೆ. ಸುಲಭವಾಗಿರುವ ಪ್ರಶ್ನೆಗಳನ್ನು ಮೊದಲು ಉತ್ತರಿಸಿ.
- ಯಾವ ಪ್ರಶ್ನೆಗಳಿಗೂ ಉತ್ತರಿಸದೇ ಬಿಡಬೇಡಿ. ಎಷ್ಟು ಜ್ಞಾಪಕವಿದೆಯೋ ಅಷ್ಟನ್ನೇ ಬರೆಯಿರಿ. ಏಕೆಂದರೆ 1 ಅಂಕದಿಂದ ಮೊದಲ ಶ್ರೇಣಿ ಬರುವ ಅವಕಾಶ ತಪ್ಪಿಹೋಗಬಹುದು!
- ಯಾವಾಗಲೂ ನಗುತ್ತಾ ಇರಿ. ಕೋಪ ಪ್ರವೃತ್ತಿ ಬೇಡ. ಕೋಪದಿಂದ ಜ್ಞಾಪಕಶಕ್ತಿ ಕುಂಠಿತವಾಗುತ್ತದೆ.
- ಪರೀಕ್ಷೆ ಮುಗಿಯುವವರೆಗೂ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಆರೋಗ್ಯ ಚೆನ್ನಾಗಿದ್ದರೆ ಓದಲು ಉತ್ಸಾಹ.
- ಎ.ಎನ್. ಮದುಸೂಧನ ರಾವ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.