'ಓ ದೇವರೇ, ಇದೆಂಥಾ ಪರೀಕ್ಷೆ?' ಎಂದು ವಿದ್ಯಾರ್ಥಿಗಳು ಹಲುಬುವ ಪರೀಕ್ಷಾ ಕಾಲ ಆರಂಭವಾಗಿದೆ. ಹಲ ವಿದ್ಯಾರ್ಥಿಗಳಿಗೆ ಕೂತ ಕುರ್ಚಿಗೆ ಬೆಂಕಿ ಕೊಟ್ಟಂಗಾಗಿದ್ರೆ, ಇನ್ನೊಂದಿಷ್ಟು ವಿದ್ಯಾರ್ಥಿಗಳು 'ಫೇಲಾಗದವರುಂಟೇ ಚೊಂಬೇಶ್ವರ? ಪಾಸಾಗಿ ಏನ್ಮಾಡ್ಲಿ ಒಂದೇ ಸಲ?' ಎಂದುಕೊಂಡು ಫುಲ್ ಕೂಲ್ ಕೂಲ್...!
ಹೀಗೆ ತೀರಾ ಓತ್ಲಾ ಹೊಡ್ಕೊಂಡು ಇರೋದೂ ಒಳ್ಳೇದಲ್ಲ. ಹಾಗಂತ ಬಾಲಕ್ಕೆ ಬೆಂಕಿ ಬಿದ್ದಂಗೆ ಒದ್ದಾಟ ಕೂಡಾ ಒಳ್ಳೇದಲ್ಲ. ಒಂದು ಮಟ್ಟಿಗೆ ಟೆನ್ಷನ್ ಇರಲಿ. ಅದು 'ಒಳ್ಳೇ ಮಾರ್ಕ್ಸ್ ತೆಗೀಬೇಕು, ಓದೋ ಬಡ್ಡಿಮಗನೆ' ಅಂತ ಪ್ರೇರೇಪಿಸುತ್ತದೆ. ಆದರೆ, ಅತಿಯಾಯಿತೋ ಕೈಕಾಲು ಗಡಗಡ, ಹೃದಯ ಬಡಿತ ಢವಢವ, ಮರೆವು, ಕನ್‌ಫ್ಯೂಷನ್ ಅಟಕಾಯಿಸಿಕೊಂಡು ಇಡಿ ದಿನ ಓದಿದ್ರೂ ತಲೆಗೆ ಹತ್ತಲ್ಲ. ಪರೀಕ್ಷೆಯಲ್ಲಿ ಗೊತ್ತಿದ್ದಿದ್ದು ಕೂಡಾ ಗೋವಿಂದಾಯ ನಮಃ..
ಪರೀಕ್ಷಾ ಭಯ ಬೆನ್ನಟ್ಟಿಕೊಂಡು ಬರಲು ಹಲವು ಕಾರಣಗಳಿರಬಹುದು.