ಯುವಜನ/ಮಕ್ಕಳು

ಕಥಾ ಕಾಲ ಒಡನಾಟ

ಒಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ಸಿಂಹ, ಹುಲಿ, ಜಿಂಕೆ, ಕರಡಿ, ಆನೆ, ಮೊಲ ಮುಂತಾದ ಪ್ರಾಣಿಗಳು ಒಟ್ಟಾಗಿ ವಾಸಮಾಡುತ್ತಿದ್ದವು. ಆದರೆ ಈ ಪ್ರಾಣಿಗಳಿಗೆ ಮರದ ಮೇಲೆ ಬಂದು ಕೂರುವ, ಗೂಡು ಕಟ್ಟಿ ವಾಸ ಮಾಡುವ ಪಕ್ಷಿಗಳನ್ನು ಕಂಡರೆ, ನಮಗಿಂತ ಎತ್ತರದಲ್ಲಿರುವವು ಎಂಬ ಹೊಟ್ಟೆಕಿಚ್ಚು. ಹಾಗಾಗಿ ಅವು ಪಕ್ಷಿಗಳನ್ನು ದ್ವೇಷಿಸುತ್ತಿದ್ದವು.
ಒಂದು ದಿನ ಕಾಡಿಗೆ ಇದ್ದಕ್ಕಿದ್ದ ಹಾಗೆ ಬೆಂಕಿ ಹತ್ತಿಕೊಂಡಿತು. ಆಗ ಅನೇಕ ಪ್ರಾಣಿಗಳು ತಮ್ಮ ಮರಿಗಳನ್ನು ಕಚ್ಚಿಕೊಂಡು ಓಡಿಹೋಗುತ್ತಿದ್ದವು. ಅನೇಕ ಪುಟ್ಟ ಪ್ರಾಣಿಗಳು ಕಾಲುಗಳನ್ನು ಸುಟ್ಟುಕೊಂಡು ಒಡಲಾಗದೆ ನೋವಿನಿಂದ ನರಳುತ್ತಿದ್ದವು. ಆಗ ಅಲ್ಲೇ ವಾಸ ಮಾಡುತ್ತಿದ್ದ ಗುಬ್ಬಚ್ಚಿಯು ಇದನ್ನೆಲ್ಲ ನೋಡಿ, 'ಪಾಪ! ನನ್ನ ಸ್ನೇಹಿತರು ಕಷ್ಟದಲ್ಲಿದ್ದಾರೆ' ಎಂದು ಹಾರಿಹೋಗಿ ನದಿಯಲ್ಲಿ ಮುಳುಗಿ ಮೈ ಒದ್ದೆ ಮಾಡಿಕೊಂಡು ಬಂದು ಕೊಡುವುದರ ಮೂಲಕ ತನ್ನಿಂದಾದಷ್ಟು ಹನಿ ನೀರನ್ನು ಬೆಂಕಿಯ ಮೇಲೆ ಸಿಂಪಡಿಸುತ್ತಿತ್ತು.
ಇದನ್ನು ಕಂಡು ದೇವೇಂದ್ರನು ಗರುಡ ಪಕ್ಷಿಯ ರೂಪವನ್ನು ಧರಿಸಿ ಬಂದು, ಗುಬ್ಬಚ್ಚಿಗೆ, 'ನೀನು ಮಾಡುತ್ತಿರುವ ಸಹಾಯ ಬೆಂಕಿಯನ್ನು ಆರಿಸಲಾಗದು, ನಿನ್ನ ಪ್ರಾಣವನ್ನು ನೀನು ಉಳಿಸಿಕೊ' ಎಂದಾಗ ಗುಬ್ಬಿಯು, 'ನನ್ನ ಸ್ನೇಹಿತರಿಗಾಗಿ ಈ ನನ್ನ ದೇಹ ಸುಟ್ಟುಹೋದರೂ ನಾನು ಚಿಂತಿಸುವುದಿಲ್ಲ' ಎಂದಿತು. ಗುಬ್ಬಿಯ ಸಹಾಯದ ಮನೋಭಾವವನ್ನು ಮೆಚ್ಚಿ ಗರುಡ ರೂಪದಲ್ಲಿರುವ ದೇವರು ತನ್ನ ಶಕ್ತಿಯಿಂದ ಜೋರಾಗಿ ಮಳೆಯನ್ನೇ ತರಿಸಿ ಬೆಂಕಿಯನ್ನು ನಂದಿಸಿ, ಅಲ್ಲಿರುವ ಪ್ರಾಣಿಗಳಿಗೆ ಯಾವುದೇ ಹಾನಿ ಆಗದಂತೆ ಮಾಡಿದನು. ಅಲ್ಲಿರುವ ಪ್ರಾಣಿಗಳು ಗುಬ್ಬಚ್ಚಿಗೆ 'ಇಷ್ಟು ದಿನ ನಿನ್ನನ್ನು ಕಂಡರೆ ದ್ವೇಷಿಸುತ್ತಿದ್ದ ನಮ್ಮನ್ನು ನೀನು ಪ್ರಾಣವನ್ನೂ ಲೆಕ್ಕಿಸದೇ ಕಾಪಾಡಿದ್ದೀಯಾ' ಎಂದು ಧನ್ಯವಾದ ತಿಳಿಸಿದವು. ಅಂದಿನಿಂದ ಪ್ರಾಣಿ-ಪಕ್ಷಿಗಳಲ್ಲಿ ಉತ್ತಮ ಒಡನಾಟ ಬೆಳೆಯಿತು.
ನೀತಿ: ನಾವು ನಮ್ಮ ಸುತ್ತಲಿನ ಪರಿಸರದವರೊಂದಿಗೆ ಉತ್ತಮ ಒಡನಾಟ ಹೊಂದಿರಬೇಕು.

-ಶ್ವೇತಾ ದಂಡಿನ,  ಹಾವೇರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ