ಕೋಳಿ ಮೊಟ್ಟೆಯನ್ನು ಎಲ್ಲರೂ ನೋಡಿರ್ತೀರಿ ಅಲ್ವಾ? ಅದನ್ನೇ ಇಟ್ಕೊಂಡು ಪುಟ್ಟ ಪ್ರಯೋಗ ಮಾಡೋಣ. ಕನೀರು ಕುಡಿಯುವ ದೊಡ್ಡ ಗ್ಲಾಸ್ ತಗೊಳ್ಳಿ. ಅದಕ್ಕೆ ಐದಾರು ಚಮಚ ಉಪ್ಪು ಹಾಕಿ ಚೆನ್ನಾಗಿ ಕರಡಿ. ಅದರೊಳಗೆ ಮೊಟ್ಟೆ ಹಾಕಿ. ಏನು ಮ್ಯಾಜಿಕ್ ಆಗುತ್ತೆ ಗೊತ್ತಾ? ನೀರಿನಲ್ಲಿ ಮುಳುಗೋ ಮೊಟ್ಟೆ ಇಲ್ಲಿ ತೇಲುತ್ತೆ.
ಅದಕ್ಕೆ ವೈಜ್ಞಾನಿಕ ಕಾರಣವಿದೆ. ಉಪ್ಪು ನೀರಿನ ಸಾಂದ್ರತೆ ಬರಿ ನೀರಿನ ಸಾಂದ್ರತೆಗಿಂತ ಹೆಚ್ಚು. ಹೆಚ್ಚಿನ ಸಾಂದ್ರತೆಯೇ ವಸ್ತು ತೇಲುವಂತೆ ಮಾಡುತ್ತದೆ. ಮೊಟ್ಟೆ ತೇಲುವುದು ಇದೇ ಕಾರಣಕ್ಕೆ. ಈಗ ಉಪ್ಪು ನೀರಿಗೆ ಸಾದಾ ನೀರು ಬೆರೆಸಿ. ಅವು ಒಂದಕ್ಕೊಂದು ಬೆರೆಯುವುದಿಲ್ಲ ಮತ್ತು ಮೊಟ್ಟೆ ಇವೆರಡರ ನಡುವೆ ತೇಲುತ್ತಿರುತ್ತದೆ.