ಯುವಜನ/ಮಕ್ಕಳು

ಪಾಸು ಫೇಲುಗಳಾಚೆಯ ಬದುಕು

ಪಿಯುಸಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬಿದ್ದಿದೆ. ಮಕ್ಕಳು ಉತ್ತಮ ಅಂಕಗಳಿಸಿದರೆ ಸರಿ. ಇಲ್ಲವಾದರೆ ಅವರು ಪೋಷಕರನ್ನು ಎದುರಿಸುವುದು ಹೇಗೆನ್ನುವ ಇನ್ನೊಂದು ಪರೀಕ್ಷೆಗೆ ಸಿದ್ಧವಾಗಬೇಕು.
ಎಸ್ಸೆಸ್ಸೆಲ್ಸಿಯಲ್ಲಿ ಮಕ್ಕಳು ಉತ್ತಮ ಅಂಕಗಳಿಸಲಿ. ವಿಜ್ಞಾನ ವಿಷಯ ಓದಲಿ. ಮುಂದೆ ವೈದ್ಯನೋ, ಎಂಜಿನಿಯರೋ ಆದರೆ ಸಮಾಜದಲ್ಲಿ ನಮ್ಮ ಪ್ರತಿಷ್ಠೆ ಹೆಚ್ಚುತ್ತದೆ ಎನ್ನುವ ಭಾವನೆ ಅನೇಕ ಪೋಷಕರಲ್ಲಿದೆ. ಹೀಗಾಗಿ ಏನೇನೋ ಆಸೆ ತೋರಿಸಿ ಮಕ್ಕಳನ್ನು ಓದಿಗೆ ಹಚ್ಚಿರುತ್ತಾರೆ. ಫಲಿತಾಂಶ ನಿರೀಕ್ಷೆಯಂತೆ ಬಾರದಿದ್ದರೆ ಆಕಾಶವೇ ತಲೆ ಮೇಲೆ ಬಿದ್ದಂತಾಡುತ್ತಾರೆ. ಮಕ್ಕಳನ್ನು ದಂಡಿಸುತ್ತಾರೆ, ಹೀಯಾಳುತ್ತಾರೆ.
ಒಂದು ಪರೀಕ್ಷೆಯಲ್ಲಿ ಈಗಾಗಲೇ ವಿಫಲವಾಗಿರುವ ಬಹುತೇಕ ಮಕ್ಕಳು ಇಂಥ ಪರಿಸ್ಥಿತಿಯಲ್ಲಿ ಇನ್ನೊಂದು ಪರೀಕ್ಷೆಯನ್ನು ಎದುರಿಸುವುದು ಹೇಗೆನ್ನುವ ಗೊಂದಲಕ್ಕೆ ಬೀಳುತ್ತಾರೆ. ಮಾನಸಿಕವಾಗಿ ಕುಗ್ಗುತ್ತಾರೆ. ಕೆಲವೊಮ್ಮೆ ಈ ಒತ್ತಡ ಅವರಲ್ಲಿ ಪೋಷಕರ ಬಗ್ಗೆ ದ್ವೇಷ ಬೆಳೆಸಿದರೆ ಮತ್ತೆ ಕೆಲವೊಮ್ಮೆ ಜೀವನದಲ್ಲೇ ಜಿಗುಪ್ಸೆ ಮೂಡಲು ಕಾರಣವಾಗಬಹುದು. ಇದರ ಅಂತಿಮ ಪರಿಣಾಮ ಆತ್ಮಹತ್ಯೆಯಂಥ ಕೃತ್ಯಗಳಿಗೆ ಎಡೆಮಾಡಿಕೊಡಬಹುದು. ಅರಳುವ ಮೊದಲೇ ಮೊಗ್ಗು ಬಾಡಿ ಹೋಗಬಹುದು.

ಅಂಕವೊಂದೇ ಅಲ್ಲ...
ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ವಿದ್ಯಾರ್ಥಿಯ ಭವಿಷ್ಯಕ್ಕೆ ಅಂಕಗಳೇ ಮಾನದಂಡ ಎಂಬುದೇನೋ ನಿಜ. ಆದರೆ ಅದೊಂದರಿಂದಲೇ ಬದುಕು ನಿರ್ಣಯವಾಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಕಡಿಮೆ ಅಂಕ ಬಂದರೆ, ಪರೀಕ್ಷೆಯಲ್ಲಿ ಫೇಲಾದರೆ ವಿದ್ಯಾರ್ಥಿಯ ಬದುಕು ಮುಗಿದೇ ಹೋಯಿತು. ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದಿಂದಷ್ಟೇ ಭವಿಷ್ಯ ಭದ್ರವಾದೀತು ಎನ್ನುವ ಕಲ್ಪನೆಗಳಿಂದ ಪೋಷಕರು ಹೊರಬರಬೇಕಿದೆ.
ಪಾಸು, ಫೇಲ್, ಎಂಜಿನಿಯರಿಂಗ್, ವೈದ್ಯಕೀಯದಾಚೆಗೂ ಇನ್ನೊಂದು ಬದುಕಿದೆ. ಅಲ್ಲೂ ಯಾವುದೇ ವ್ಯಕ್ತಿ ತನ್ನ ಪ್ರತಿಭೆಯಿಂದ ಉತ್ತಮ ಹೆಸರು, ಹಣ ಸಂಪಾದಿಸಲು ಸಾಧ್ಯವಿದೆ.
ಪೋಷಕರೇ... ಮಕ್ಕಳು ನಿಮ್ಮ ನಿರೀಕ್ಷೆಯಂತೆ ಈ ಬಾರಿ ಅಂಕಗಳಿಸದೆ ಹೋಗಿರಬಹುದು. ಹಾಗಂತ ಅವರ ಬದುಕು ಮುಗಿದೇ ಹೋಯ್ತು ಎಂಬಂತೆ ವರ್ತಿಸಬೇಡಿ. ಅವರ ಮನವೊಲಿಸಿ. ಭವಿಷ್ಯದ ಸವಾಲುಗಳ ಕುರಿತು ತಿಳಿಹೇಳಿ. ಅವರ ಆಸಕ್ತಿ, ಅಭಿರುಚಿಗೆ ಪ್ರೋತ್ಸಾಹಿಸಿ ನೋಡಿ. ಅವರ ಬದುಕು ಬಂಗಾರವಾಗುವುದರಲ್ಲಿ ಅನುಮಾನವೇ ಇಲ್ಲ.

- ಮಂಜುನಾಥ್ ಎಲ್.ಕೆ., ಲಕ್ಷ್ಮೀಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video