ಯುವಜನ/ಮಕ್ಕಳು

ಲವ್ಲಿ ಬಾಯ್

ಸಾಮಾನ್ಯವಾಗಿ ಮಹಿಳೆಯರಿಗಷ್ಟೇ ಸೀಮಿತವಾಗಿದ್ದ ಬ್ಯೂಟಿ...

'ಫೇರ್ ಆ್ಯಂಡ್ ಲವ್ಲಿ' ಅಂದ್ರೆ ಏನೂಂತ ಯಾರಿಗೂ ಹೇಳಬೇಕಾಗಿಲ್ಲ. ಆರೇಳು ವರ್ಷಗಳ ಹಿಂದೆ ಈ ಕ್ರೀಮ್ ಅನ್ನು ಕೇವಲ ಹೆಣ್ಣುಮಕ್ಕಳಷ್ಟೇ ಹಚ್ಚಿಕೊಳ್ಳುತ್ತಿದ್ದರು. ಆದರೆ, ಈಗಲೂ ಅದನ್ನು ಕೇವಲ ಹೆಣ್ಣುಮಕ್ಕಳಷ್ಟೇ ಬಳಸುತ್ತಾರೆ ಅಂತ ಅಂದುಕೊಂಡರೆ ಮೂರ್ಖತನವಾದೀತು. ಈಗ ಪುರುಷರಿಗೂ 'ಫೇರ್‌' ಆ್ಯಂಡ್ 'ಲವ್ಲಿ' ಹುಚ್ಚು ಶುರುವಾಗಿದೆ. ಹಾಗಾಗಿ ಪುರುಷರೂ ಈಗ ಸೂಪರ್ ಮಾರ್ಕೆಟ್‌ಗಳಲ್ಲಿ ಫೇರ್‌ನೆಸ್ ಕ್ರೀಮ್‌ಗಳಿಗಾಗಿ ತಡಕಾಡಲು ಶುರುಮಾಡಿದ್ದಾರೆ. ಮನೆಯಲ್ಲಿ ಅಕ್ಕನೋ, ತಂಗಿನೋ ತಂದಿಟ್ಟ ಫೇಸ್‌ಕ್ರೀಮ್ ಕದ್ದು ಮುಚ್ಚಿ ಮುಖಕ್ಕೆ ಮೆತ್ತಿಕೊಳ್ಳುತ್ತಿದ್ದಾರೆ.
ಪುರುಷರಲ್ಲಿ ಕಂಡುಬಂದಿರುವ ಈ ದಿಢೀರ್ ಬದಲಾವಣೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ವಿಶ್ವದಲ್ಲಿ ಈ ರೀತಿಯದ್ದೊಂದು ಟ್ರೆಂಡ್ ಹುಟ್ಟಿಕೊಂಡಿದೆ. ಮಹಿಳೆಯರಂತೆ ಪುರುಷರಲ್ಲೂ ಏಕಾಏಕಿ ಚರ್ಮದ ಕಾಳಜಿ ಜಾಗೃತವಾಗಿದೆ. ಇದರಿಂದಾಗಿ ಮಹಿಳೆಯರಷ್ಟೇ ಬಳಸುತ್ತಿದ್ದ ಕ್ಲೆನ್ಸರ್ಸ್, ಮಾಯಿಶ್ಚರೈಸರ್ಸ್ ಮತ್ತು ಐಕ್ರೀಮ್, ಫೇರ್‌ನೆಸ್ ಕ್ರೀಮ್‌ಗಳನ್ನು ಪುರುಷರೂ ಕೊಂಡುಕೊಳ್ಳಲು ಆರಂಭಿಸಿದ್ದಾರೆ ಎನ್ನುತ್ತದೆ ಅಧ್ಯಯನವೊಂದು. ಅದರಲ್ಲೂ ಅಮೆರಿಕದಲ್ಲಿ ಈ ರೀತಿ ಸ್ಕಿನ್‌ಕೇರ್ ಉತ್ಪನ್ನಗಳನ್ನು ಕೊಂಡುಕೊಳ್ಳುವ ಟ್ರೆಂಡ್ ಕಳೆದೆರಡು ವರ್ಷಗಳಲ್ಲಿ ಶೇ.76ರಷ್ಟು ಹೆಚ್ಚಾಗಿದೆಯಂತೆ.
ಪುರುಷರಲ್ಲಾದ ಈ ಬದಲಾವಣೆಯನ್ನು ಗಮನಿಸಿಕೊಂಡೇ ಅನೇಕ ಕಂಪನಿಗಳು ಈಗ ಪುರುಷರಿಗಾಗಿಯೇ ಪ್ರತ್ಯೇಕ ಸ್ಕಿನ್‌ಕೇರ್ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಇಮಾಮಿಯಂಥ ಕಂಪನಿಗಳು ಗಂಡಸರಿಗಾಗಿ ಪ್ರತ್ಯೇಕ ಫೇಸ್‌ಕ್ರೀಮ್ ಅನ್ನು ಪರಿಚಯಿಸಿವೆ.

ಜಾಹೀರಾತು ಪ್ರಭಾವ
ಸಾಮಾನ್ಯವಾಗಿ ಮಹಿಳೆಯರಿಗಷ್ಟೇ ಸೀಮಿತವಾಗಿದ್ದ ಬ್ಯೂಟಿ ಕಾನ್ಷಿಯಸ್ ಪುರುಷರಲ್ಲೂ ಕಾಣಿಸಿಕೊಳ್ಳಲು ಮುಖ್ಯ ಕಾರಣ ಜಾಹೀರಾತುಗಳು. ಈ ಜಾಹೀರಾತುಗಳಲ್ಲಿ ಪುರುಷರನ್ನು ಬಿಂಬಿಸುವ, ಅವರ ನೋಟ, ಅಂದಕ್ಕೆ ಹೆಣ್ಣುಮಕ್ಕಳು ಮರುಳಾಗುವ ರೀತಿಯನ್ನು ತೋರಿಸುವ ರೀತಿ ಸೌಂದರ್ಯದ ಬಗ್ಗೆ ಪುರುಷರಲ್ಲಿದ್ದ ಕಲ್ಪನೆಯನ್ನೇ ಬದಲಾಯಿಸಿದೆ. ಟೀವಿ ಪ್ರಭಾವಕ್ಕೊಳಗಾಗಿರುವ ಬಹುತೇಕ ಪುರುಷರು ತಮ್ಮ ಮೈಮಾಟ, ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ತೋರಲು ಶುರುವಿಟ್ಟುಕೊಂಡಿದ್ದಾರೆ. ಪುರುಷರಲ್ಲಾದ ಈ ಬದಲಾವಣೆಗೆ ತಕ್ಕಂತೆ ಹಲವು ಕಂಪನಿಗಳು ಪುರುಷರಿಗಾಗಿಯೇ ಒಂದಷ್ಟು ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡಿವೆ ನಿಜ. ಆದರೆ, ಮಹಿಳೆಯರಿಗಾಗಿಯೇ ಇರುವ ಬ್ಯೂಟಿ ಪ್ರಾಡಕ್ಟ್‌ಗಳಷ್ಟು ಆಯ್ಕೆ ಇಲ್ಲಿಲ್ಲ. ಹಾಗಾಗಿ ಪುರುಷರು ಕುತೂಹಲಕ್ಕಾಗಿ ಮಹಿಳೆಯರ ಬ್ಯೂಟಿ ಪ್ರಾಡಕ್ಟ್‌ಗಳಿಗೆ ಮೊರೆ ಹೋಗುತ್ತಿದ್ದಾರೆ ಎನ್ನುತ್ತಾರೆ ಸಂಶೋಧಕರು.

- ಎ.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್