ಯುವಜನ/ಮಕ್ಕಳು

ಪಕ್ಷಿ ಪ್ರಪಂಚ

ಇವು ಪಕ್ಷಿಸಂಕುಲದ ಪ್ಯಾರಡೈಸಿ ಈಡೇ ಕುಟುಂಬಕ್ಕೆ ಸೇರಿದವುಗಳಾಗಿವೆ. ಪೂರ್ವ ಇಂಡೋನೇಷ್ಯಾ, ಟೋರೆಸ್ ಜಲಸಂಧಿಯ ದ್ವೀಪಗಳು, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾದ ವಾಯವ್ಯ ಭಾಗಗಳಲ್ಲಿ ಈ ಪಕ್ಷಿಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಪಕ್ಷಿ ಕುಟುಂಬದ ಸದಸ್ಯ ಗಂಡು ಹಕ್ಕಿಗಳು ತಮ್ಮ ಅದ್ಭುತ ಗರಿಗಳ ಜೋಡಣೆ ಹಾಗೂ ಪುಕ್ಕಗಳ ಗುಚ್ಛಕ್ಕೆ ಹೆಸರುವಾಸಿ. ಸೃಷ್ಟಿಯ ಅದ್ಭುತಗಳಲ್ಲಿ ಒಂದರಂತೆ ಕಾಣುವ ಈ ಗಂಡು ಪಕ್ಷಿಗಳ ತಲೆ, ಕೊಕ್ಕು ಅಥವಾ ಬಾಲದಿಂದ ಅತಿ ಉದ್ದವಾದ ಗರಿಗಳ ರಚನೆ ಕಾಣುವುದು. ಅಲ್ಲದೇ ಅನೇಕ ಹಕ್ಕಿಗಳಲ್ಲಿ ಈ ಗರಿಗಳು ಹಿಂದಕ್ಕೆ ಸುರುಳಿಯಂತೆ ಬಾಗಿ ಸುತ್ತಿಕೊಂಡಿರುವುದನ್ನು ಸಹ ಕಾಣಬಹುದು. ಇನ್ನು ಕೆಲವಲ್ಲಿ ಉದ್ದನೆಯ ತಂತಿಯಂತೆ ಗರಿಗಳಿರುತ್ತವೆ. ಈ ಗರಿಗಳ ವರ್ಣಮಿಶ್ರಣದ ಸೌಂದರ್ಯ ಅನೂಹ್ಯವಾದುದು. ಇವುಗಳಲ್ಲಿ ಹಲವು ಪ್ರಕಾರಗಳಿದ್ದು 15ರಿಂದ 110 ಸೆಂ.ಮೀ.ವರೆಗೆ ಉದ್ದ(ಬಾಲವನ್ನು ಹೊರತುಪಡಿಸಿ) ಮತ್ತು 50ರಿಂದ 430 ಗ್ರಾಂವರೆಗೆ ತೂಕವುಳ್ಳದ್ದಾಗಿರುತ್ತವೆ ನಂದನವನದ ಪಕ್ಷಿಗಳು.
ಮೃದುವಾದ ವಸ್ತುಗಳಿಂದ ಗೂಡು ಕಟ್ಟಿಕೊಳ್ಳುವ ಇವು ಒಂದು ಸಾರಿ ಒಂದೇ ಮೊಟ್ಟೆಯನ್ನಿಡುತ್ತದೆ. ಕೆಲವು ಜಾತಿಗಳು 2ರಿಂದ 3 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಯಿಟ್ಟ 16-22 ದಿನಗಳಲ್ಲಿ ಮರಿಯಾಗುತ್ತದೆ. ಉಷ್ಣವಲಯದ ಮಳೆಕಾಡುಗಳ ನಿವಾಸಿಗಳಾದ ಇವು ಇಂದು ಬೇಟೆಯಾಡುವಿಕೆ ಮತ್ತು ನಿರಂತರ ಅರಣ್ಯನಾಶದಿಂದಾಗಿ ಕಂಗೆಟ್ಟಿವೆ. ತಮ್ಮ ಅತ್ಯಾಕರ್ಷಕ ಗರಿಗಳಿಂದಾಗಿ ಮಾನವನ ದುರಾಸೆಯ ಕಣ್ಣಿಗೆ ಬಿದ್ದಿರುವ ಈ ನಂದನವನದ ಪಕ್ಷಿಗಳ ಹಲವು ಪ್ರಬೇಧಗಳು ಇಂದು ಅಳಿವಿನಂಚಿನಲ್ಲಿವೆ.

ನಂದನವನದ ಪಕ್ಷಿಗಳು
(ಬರ್ಡ್ಸ್ ಆಫ್ ಪ್ಯಾರಡೈಸ್)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!