1. 'ಲೀಲಾವತಿ' ಎಂಬ ಸಂಸ್ಕೃತದ ಗಣಿತ ಗ್ರಂಥದ ಕರ್ತೃ ಯಾರು?
2. ಯಾವ ಗ್ರೀಕ್ ಗಣಿತಜ್ಞನ ಹೆಸರು ಜ್ಯಾಮಿತಿಗೆ ಆಧಾರವಾದ ಪುಸ್ತಕಗಳೊಡನೆ ಸಂಬಂಧ ಹೊಂದಿದೆ?
3. ನಾವು ಬರೆಯುವ 37,256,1098 ಮುಂತಾದ ಸಂಖ್ಯೆಗಳ ಪದ್ಧತಿಗೆ ಸಾಧಾರಣವಾಗಿ ಏನು ಹೆಸರು?
4. ಗೋಡೆಯ ಗಡಿಯಾರವೊಂದರ ಎದುರುಗಡೆ ಕನ್ನಡಿಯೊಂದಿತ್ತು. ಕನ್ನಡಿಯಲ್ಲಿ ನೋಡಿದ ತಕ್ಷಣವೇ ಸಮಯ 8.25 ಎಂಬ ಭ್ರಮೆ ಉಂಟಾಯಿತು. ಸರಿಯಾದ ಸಮಯವೆಷ್ಟು?
ಉತ್ತರಗಳು:
1) ಭಾಸ್ಕರಾಚಾರ್ಯರು
2) ಯೂಕ್ಲಿಡ್ (ಕ್ರಿ.ಪೂ. 300)
3) ಇವುಗಳಿಗೆ ಹಿಂದೂ ಅರೇಬಿಕ್ ಪದ್ಧತಿಎಂದು ಹೆಸರು. (ಇಂಡಿಯಾದಲ್ಲಿ ಈ ಪದ್ಧತಿ ಕಂಡುಹಿಡಿದು, ಅರಬ್ಬರ ಮೂಲಕ ಯುರೋಪಿಗೆ ಪ್ರಯಾಣ ಬೆಳೆಸಿತು.)
4) ಸರಿಯಾದ ಸಮಯ 3.35 (ಎರಡೂ ಚಿತ್ರಗಳನ್ನು ಬರೆದು ಪರೀಕ್ಷಿಸಿ)