ಯುವಜನ/ಮಕ್ಕಳು

ಮಲ್ಟಿ ಟಾಸ್ಕ್

ಮಲ್ಟಿಟಾಸ್ಕ್ (ಬಹುಕಾರ್ಯ) ಕುರಿತು ಇಂದಿನ ಯುವಜನಾಂಗಕ್ಕೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಇಂದಿನ ಯುವಪೀಳಿಗೆ ಮಲ್ಟಿಟಾಸ್ಕಿಂಗ್‌ನಲ್ಲಿ ಸಿದ್ಧಹಸ್ತರು....

ಮಲ್ಟಿಟಾಸ್ಕ್ (ಬಹುಕಾರ್ಯ) ಕುರಿತು ಇಂದಿನ ಯುವಜನಾಂಗಕ್ಕೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಇಂದಿನ ಯುವಪೀಳಿಗೆ ಮಲ್ಟಿಟಾಸ್ಕಿಂಗ್‌ನಲ್ಲಿ ಸಿದ್ಧಹಸ್ತರು. ನಗರದ ಒತ್ತಡದ ಜೀವನ ಶೈಲಿಯನ್ನು ನೋಡಿದರೆ ಇದು ಅನಿವಾರ್ಯ ಕೂಡ. ಮಲ್ಟಿಟಾಸ್ಕ್ ಎಲ್ಲಾ ಸಂದರ್ಭದಲ್ಲೂ ತಪ್ಪೇನಲ್ಲ. ಬಹುತೇಕ ಬಾರಿ ಮಲ್ಟಿಟಾಸ್ಕ್‌ನಿಂದ ಅನುಕೂಲವೂ ಉಂಟು. ಆದರೆ, ಓದಿನ ವಿಚಾರಕ್ಕೆ ಬಂದಾಗ ಮಲ್ಟಿಟಾಸ್ಕ್‌ನಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಓದುವ ವೇಳೆ ಬಹುಕಾರ್ಯದಿಂದ ವಿದ್ಯಾರ್ಥಿಗಳು ದೂರವಿದ್ದಷ್ಟು ಒಳಿತು ಎನ್ನುತ್ತಾರೆ ಮನೋವಿಜ್ಞಾನಿಗಳು.

ಮೆಸೇಜ್, ಚಾಟಿಂಗ್
ಬಹುತೇಕ ವಿದ್ಯಾರ್ಥಿಗಳ ಕೈಯಲ್ಲಿ ಈಗ ಮೊಬೈಲ್ ಫೋನ್‌ಗಳು ಓಡಾಡುತ್ತಿವೆ. ಓದುವ ವೇಳೆ ಮೊಬೈಲ್ ಸಂದೇಶ ರವಾನಿಸುವುದು, ಫೇಸ್‌ಬುಕ್‌ನಲ್ಲಿ ಚಾಟ್ ಮಾಡುವುದು ಅವರ ಪಾಲಿಗೆ ಹೊಸ ವಿಚಾರವೇನಲ್ಲ. ಇದರಿಂದ ಅವರಿಗೆ ಆ ಕ್ಷಣದಲ್ಲಿ ಏನೂ ಅನಿಸದೇ ಇರಬಹುದು. ಆದರೆ, ಇದು ಅವರ ಕಲಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಓದು, ಪಾಠದ ವೇಳೆ ಮೆಸೇಜ್, ಫೇಸ್‌ಬುಕ್ ಚಾಟ್‌ನಂಥ ಕೆಲಸಕ್ಕೆ ಕೈಹಾಕುವುದರಿಂದ ಅವರು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ ಎನ್ನುತ್ತಾರೆ ತಜ್ಞರು.

ಮೆದುಳು ಮಲ್ಟಿಟಾಸ್ಕ್ ಮಾಡಬಲ್ಲುದೆ?
ಟೆಕ್ಸ್‌ಟಿಂಗ್, ಇ-ಮೇಲ್, ಫೇಸ್‌ಬುಕ್ ಪೋಸ್ಟಿಂಗ್- ಇವು ಓದಿನ ನಡುವೆ ಇಂದಿನ ವಿದ್ಯಾರ್ಥಿಗಳ ಸಾಮಾನ್ಯ ಡಿಜಿಟಲ್ ಚಟುವಟಿಕೆಗಳು. ಈ ರೀತಿಯ ಚಟುವಟಿಕೆಗಳು ಹೋಂವರ್ಕ್ ವೇಳೆ ನೀಡಬೇಕಾದಷ್ಟೇ ಗಮನವನ್ನು ಬೇಡುತ್ತವೆ. ಮನೋವಿಜ್ಞಾನಿಗಳ ಪ್ರಕಾರ ಬಹುತೇಕ ಪರಿಸ್ಥಿತಿಗಳಲ್ಲಿ ನಮ್ಮ ಮೆದುಳಿಗೆ ಏಕಕಾಲದಲ್ಲಿ ಒಂದೇ ರೀತಿಯ ಕ್ಲಿಷ್ಟಕರ ಕ್ರಿಯೆ ನಡೆಸಲು ಸಾಧ್ಯವಿಲ್ಲ. ಎರಡೂ ಕೆಲಸಗಳು ಸರಳವಾಗಿದ್ದಾಗ, ಪ್ರತ್ಯೇಕವಾಗಿದ್ದಾಗ ಮಾತ್ರ ಮೆದುಳು ಮಲ್ಟಿಟಾಸ್ಕ್ ನಡೆಸಲು ಶಕ್ತವಾಗುತ್ತದೆ. ಆದರೆ, ಈ ಎರಡೂ ಕೆಲಸಗಳು ಒಂದಕ್ಕೊಂದು ಸ್ಪರ್ಧೆ ನೀಡುವಂತಿರಬಾರದು, ಒಂದೇ ರೀತಿಯ ಮಾನಸಿಕ ಸಂಪನ್ಮೂಲ ಬಳಸಿಕೊಳ್ಳುವಂತಿರಬಾರದು. ಉದಾಹರಣೆಗೆ ಬಟ್ಟೆಗಳನ್ನು ಮಡಚಿಡುವುದು ಮತ್ತು ಸಂಗೀತ ಆಲಿಸುವುದು. ಇವು ಪ್ರತ್ಯೇಕ ಕ್ರಿಯೆಗಳು. ಈ ಎರಡು ಕ್ರಿಯೆಗಳು ಮೆದುಳಿನಲ್ಲಿ ಪರಸ್ಪರ ಸ್ಪರ್ಧೆಗೆ ನಿಲ್ಲುವುದಿಲ್ಲ.
ಆದರೆ, ಪಾಠ ಕೇಳುವಾಗ ಮೇಸೇಜ್ ಮಾಡುವುದು ಸರಿಯಲ್ಲ. ಈ ಎರಡೂ ಕ್ರಿಯೆಗಳು ಮೆದುಳಿನ ಒಂದೇ ಭಾಗವನ್ನು ಕೆಲಸಕ್ಕೆ ಹಚ್ಚುತ್ತವೆ. ಹಾಗಾಗಿ ಸಹಜವಾಗಿಯೇ ಎರಡರಲ್ಲಿ ಒಂದು ಕಾರ್ಯಕ್ಕೆ ಮೆದುಳು ಕಡಿಮೆ ಗಮನ ನೀಡುತ್ತದೆ. ಎನ್ನುತ್ತಾರೆ ಈ ಕುರಿತು ಅನೇಕ ವರ್ಷಗಳಿಂದ ಸಂಶೋಧನೆ ನಡೆಸಿರುವ ಮನಃಶಾಸ್ತ್ರ ಪ್ರೊಫೆಸರ್ ಡೇವಿಡ್ ಮೇಯರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!