ಸೂರ್ಯ
ಧರೆಯ
ಜೀವಿಗಳಿಗೆ
ಚೈತನ್ಯ ತುಂಬಲು
ರವಿ ಉದಯಿಸುವ
ಅನುದಿನವೂ
ಬೆಳಕು-ಶಕ್ತಿ
ನೀಡಿ ನಗುವ
ಪ್ರತಿಕ್ಷಣವೂ
ರವಿಯೇ ನಮಗೆ
ನಿತ್ಯ ಕಾಣುವ ದೇವನು
ಕಡಲನೀರ
ಆವಿಯಾಗಿಸಿ
ಮೋಡ ತರುವ
ಧರೆಗೆ ಮಳೆ
ಸುರಿಸುವ
ಹೂಗಳೆಲ್ಲವು
ನಗುವವು
ಪರಿಮಳ ಬೀರಿ
ಹಕ್ಕಿ ಚಿಲಿ-ಪಿಲಿ
ಹಾಡು ಗುನುಗುವವು
ಸೂರ್ಯನೇ
ಜಗಕಾಧಾರ
ನಮಿಸುವ ನಿತ್ಯವೂ
ನಾವೂ ನೀವೂ ಎಲ್ಲರೂ
ಕೂಡಿ ಹಾಡೋಣಾ...
ತೇಜನಿಗಿದೋ ನಮಸ್ಕಾರ
- ಶಿವಕುಮಾರ್, ಸುರಪುರ