ಯುವಜನ/ಮಕ್ಕಳು

Insure ವಿಮಾಗಸದಲ್ಲಿ ಅವಕಾಶ

ಇಂದು ವಿಮಾ ಕ್ಷೇತ್ರ ಬೃಹತ್ ಉದ್ಯಮವಾಗಿ ಬೆಳೆದಿದೆ. ವಿದೇಶಿ ಹೂಡಿಕೆದಾರರ ಪ್ರವೇಶದೊಂದಿಗೆ ಸ್ಪರ್ಧೆಯೂ ಹೆಚ್ಚಾಗಿದೆ. ಹೊಸ ಹೊಸ ಉತ್ಪನ್ನಗಳು, ಅತ್ಯುತ್ತಮ ಪ್ಯಾಕೇಜ್, ಸುಧಾರಿತ ಗ್ರಾಹಕ ಸೇವೆಗಳು ಲಭ್ಯವಾಗುತ್ತಿವೆ. ಈ ಪರಿಣಾಮ ಇಲ್ಲಿ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಆದರೆ, ವಿಮಾ ಕ್ಷೇತ್ರ ಅತ್ಯುತ್ತಮ ತರಬೇತಿ, ಕಂಪನಿಯ ಅಗತ್ಯಗಳಿಗೆ ತಕ್ಕಂತ ಕೌಶಲ್ಯ ಹೊಂದಿರುವ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಈ ಕಾರಣಕ್ಕೆ ಈಗೀಗ ಅನೇಕ ಕಾಲೇಜುಗಳು ವಿಮೆ ಸಂಬಂಧಿಸಿದ ವಿಚಾರವನ್ನು ಪಠ್ಯದಲ್ಲಿ ಅಳವಡಿಸಲಾರಂಭಿಸಿವೆ. ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ವಿಮೆ ಮ್ಯಾನೇಜ್‌ಮೆಂಚ್ ಕೋರ್ಸ್‌ಗಳನ್ನೂ ಪರಿಚಯಿಸಿವೆ. ಇಲ್ಲಿ ವಿಮಾ ಕ್ಷೇತ್ರದ ಸರ್ವ ಆಯಾಮಗಳನ್ನೂ ಕಲಿಸಿಕೊಡಲಾಗುತ್ತದೆ.

ಜನರಲ್ ವಿಮೆಯಲ್ಲಿ ಕೆಲಸ
ಜನರಲ್ ವಿಮಾ ಕ್ಷೇತ್ರದ ಮಾರ್ಕೆಟಿಂಗ್, ವಿತರಣೆ, ವಿಮಾಗಣಿತ, ಕಾರ್ಯಭಾರ, ಕ್ಲೈಮ್ಸ್ ಮತ್ತು ಹೂಡಿಕೆ ವಿಭಾಗಗಳಲ್ಲಿ ಹೇರಳ ಉದ್ಯೋಗಾವಕಾಶಗಳಿವೆ. ಇಲ್ಲಿ ಕೆಲ ಹುದ್ದೆಗಳಷ್ಟೆ ಉನ್ನತಮಟ್ಟದ ಕೌಶಲ್ಯ ಬೇಡುತ್ತವೆ. ಉಳಿದ ಹುದ್ದೆಗಳಿಗೆ ಸಾಮಾನ್ಯ ಪದವೀಧರರೂ ಅರ್ಜಿ ಸಲ್ಲಿಸಬಹುದು. ಅವರಿಗೆ ಸೂಕ್ತ ತರಬೇತಿಯನ್ನು ಕಂಪನಿಯೇ ನೀಡುತ್ತದೆ. ಹಾಗಾದರೆ, ಅಲ್ಲಿ ಏನೇನು ಕೆಲಸ?

ವಿಮೆ ಸಲಹೆಗಾರ

ಪಾಲಿಸಿದಾರರಿಗೆ ಅವರ ಅಗತ್ಯಕ್ಕೆ ಹೊಂದುವ ವಿಮೆಯನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತಾನೆ. ವಿಮೆದಾರರು ವಿವಿಧ ರಿಸ್ಕ್‌ಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಎದುರಿಸಲು ಮಾರ್ಗೋಪಾಯ ಕಂಡುಕೊಳ್ಳಲು ನೆರವು ನೀಡುತ್ತಾನೆ.

ಇನ್ಸೂರೆನ್ಸ್ ಅಸೋಸಿಯೇಟ್
ಸೇಲ್ಸ್ ಗುರಿ ಮುಟ್ಟಿಸುವ ಹೊಣೆ ಈತನ ಮೇಲಿರುತ್ತದೆ. ಗ್ರಾಹಕರೊಂದಿಗೆ ಉತ್ತಮ ಸಂಬಂಧ ಬೆಸೆಯುವ ಮತ್ತು ವಿವಿಧ ಉತ್ತೇಜನಾ ಯೋಜನೆಗಳನ್ನು ಜಾರಿಗೆ ತರುವ ಜವಾಬ್ದಾರಿ ನಿಭಾಯಿಸುತ್ತಾನೆ.

ಬ್ಯಾಕ್ ಆಫೀಸ್ ಸಪೋರ್ಟ್
ವಾಣಿಜ್ಯ ಪದವೀಧರರು ಈ ಹುದ್ದೆ ಆರಿಸಿಕೊಳ್ಳಬಹುದು. ಈತ ಸಾಮಾನ್ಯವಾಗಿ ಗ್ರಾಹಕರ ಎಲ್ಲಾ ಸೇವಾ ಆಧಾರಿತ ವಿಚಾರಣೆಗಳಿಗೆ ಉತ್ತರಿಸಬೇಕಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳಿಗೆ ಎಂಐಎಸ್ ವರದಿ ಸಲ್ಲಿಸಬೇಕಾಗುತ್ತದೆ.

ಸೇಲ್ ಡೆವಲಪ್‌ಮೆಂಟ್ ಮ್ಯಾನೇಜರ್
ಹಣಕಾಸು ವೃತ್ತಿಪರರಿಗೆ ಈ ಹುದ್ದೆ ಸೂಕ್ತ. ಯೋಗ್ಯ ಏಜೆಂಟರನ್ನು ಗುರುತಿಸಿ ನೇಮಿಸಿಕೊಳ್ಳುವ ಮತ್ತು ತಂಡವೊಂದರ ನಿರ್ವಹಣೆ, ಮೌಲ್ಯಮಾಪನ ಮಾಡುವ ಮತ್ತು ಏಜೆಂಟರಿಗೆ ಸೂಕ್ತ ತರಬೇತಿ ನೀಡುವ, ಗುರಿ ನಿಗದಿಪಡಿಸುವ, ತಂಡದ ಉತ್ಪಾದಕತೆ ಹೆಚ್ಚಿಸುವ ಜವಾಬ್ದಾರಿ ಈತನದು.

ಕ್ಲೈಮ್ ವಿಶ್ಲೇಷಕ
ಡಿಪ್ಲೊಮಾ ಅಥವಾ ಪದವೀಧರ ಎಂಜಿನಿಯರ್‌ಗಳು, ಪ್ಯಾರಾ ಮೆಡಿಕಲ್ ಅರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು. ಕ್ಲೈಮ್ ಸನ್ನಿವೇಶ ಎದುರಾದಾಗ ಎಷ್ಟು ಪ್ರಮಾಣದ ಕ್ಲೆಮ್‌ಗೆ ಅಂಗೀಕಾರ ನೀಡಬೇಕು ಎನ್ನುವುದನ್ನು ನಿರ್ಧರಿಸುವುದು ಈತನ ಹೊಣೆ.

- ಚಿರಾಗ್, ಭಾರತಿ ಅಕ್ಸಾ ಇನ್ಸೂರೆನ್ಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ