ಯುವಜನ/ಮಕ್ಕಳು

ಕ್ಲಾಸಿನ ಎಲ್ಲ ಮಕ್ಕಳೂ ಒಟ್ಟಾಗಿರಲ್ಲ ಯಾಕೆ?

ಪುಟ್ಟ ನಿನ್ನ ಶಾಲೇಲಿ ಎಷ್ಟು ಮಕ್ಕಳಿದ್ದಾರೆ? ಅವರೆಲ್ಲರೂ ನಿನ್ನೊಂದಿಗೆ ಹೊಂದ್ಕೋತಾರಾ? ಕೆಲವರು ಮಾತ್ರ ಅಲ್ವಾ? ...

ಪುಟ್ಟ ನಿನ್ನ ಶಾಲೇಲಿ ಎಷ್ಟು ಮಕ್ಕಳಿದ್ದಾರೆ? ಅವರೆಲ್ಲರೂ ನಿನ್ನೊಂದಿಗೆ ಹೊಂದ್ಕೋತಾರಾ? ಕೆಲವರು ಮಾತ್ರ ಅಲ್ವಾ? ಯಾಕೆ ಅವರು ನಿನ್ನ ಜೊತೆ ಸೇರ್ಕೊಂಡು ಆಡೊಲ್ಲ?
ನಿನ್ನ ಪ್ರಶ್ನೆಗೆ ಈಗ ಉತ್ತರ ಕಂಡುಹಿಡಿಯೋಣ. ಚಿಕ್ಕದೊಂದು ಪಾರದರ್ಶಕವಾಗಿರುವ ಜ್ಯೂಸ್ ಬಾಟಲಿ ತೆಗೆದುಕೋ. ಆಹಾರ ಪದಾರ್ಥಕ್ಕೆ ಹಾಕುವ ಬಣ್ಣ, ನೀರು ಹಾಗೂ ಎರಡು ಚಮಚ ಎಣ್ಣೆ ತೆಗೆದಿರಿಸು. ಪಾತ್ರೆ ತೊಳೆಯುವ ಡಿಟರ್ಜೆಂಟ್ ಜೊತೆಗಿರಲಿ.
ನೀರಿಗೆ ಕೆಲವು ಹನಿ ಆಹಾರ ಪದಾರ್ಥಕ್ಕೆ ಹಾಕುವ ಬಣ್ಣ ಹಾಕು. ಬಣ್ಣದ ನೀರನ್ನು ಚಿಕ್ಕ ಬಾಟಲಿಯೊಳಗೆ ಸುರಿ. ಎರಡು ಚಮಚ ಎಣ್ಣೆಯನ್ನೂ ಅದರೊಳಗೆ ಹಾಕು. ಬಾಟಲಿಯ ಮುಚ್ಚಳ ಭದ್ರವಾಗಿ ಹಾಕಿ ಎಷ್ಟು ಸಾಧ್ಯವೋ ಅಷ್ಟು ಕುಲುಕು. ನಂತರ ಬಾಟಲಿಯನ್ನು ಟೇಬಲ್‌ನ ಮೇಲಿಡು. ಹಾಗೇ ಗಮನಿಸು. ಎಣ್ಣೆ ನೀರಿನ ಮೇಲ್ಭಾಗಕ್ಕೆ ಬಂದು ನಿಂತುಕೊಳ್ಳುತ್ತದೆ.
ನಂತರ ಸ್ವಲ್ಪ ಪ್ರಮಾಣದ ಪಾತ್ರೆ ತೊಳೆಯುವ ಡಿಟರ್ಜೆಂಟ್ ಹಾಕು. ಮತ್ತೆ ಕುಲುಕಿ ಇಡು. ನೀರು ಮತ್ತು ಎಣ್ಣೆ ಎರಡೂ ಮಿಶ್ರಣಗೊಂಡು ಒಂದು ರೀತಿಯ ಜಿಡ್ಡಿನಂತೆ ಕಂಡುಬರುತ್ತದೆ.
ನಿಜಕ್ಕೂ ಬಾಟಲಿಯೊಳಗೆ ಏನು ನಡೆಯುತ್ತದೆ?
ಎಣ್ಣೆಯ ಅಣುಗಳು ಆಕರ್ಷಿಸುವುದು ಎಣ್ಣೆಯ ಅಣುಗಳನ್ನೇ. ಅದರಂತೆ ನೀರಿನ ಅಣುಗಳೂ ನೀರಿನ ಅಣುವನ್ನೇ ಬಲವಾಗಿ ಆಕರ್ಷಿಸುತ್ತದೆ. ಹಾಗಾಗಿ ನಾವೆಷ್ಟೇ ಒಂದು ಮಾಡಲು ಪ್ರಯತ್ನಿಸಿದರೂ ಒಂದಾಗುವುದಿಲ್ಲ. ನಿನ್ನ ತರಗತಿಯಲ್ಲಿರುವ ಮಕ್ಕಳೂ ಹಾಗೆ. ನಿನ್ನ ಸ್ವಭಾವದವರು ಮಾತ್ರ ನಿನ್ನೊಂದಿಗೆ ಸೇರುತ್ತಾರೆ. ಡಿಟರ್ಜೆಂಟ್ ಹಾಕಿದಾಗ ಎಲ್ಲವೂ ಮಿಶ್ರಣಗೊಂಡಿತು. ಏಕೆಂದರೆ ಡಿಟರ್ಜೆಂಟ್ ನೀರು ಮತ್ತು ಎಣ್ಣೆಯ ಅಣುಗಳೆರಡನ್ನೂ ಆಕರ್ಷಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು